# Tags

ಅಶ್ವಿನಿ ಕ್ಯಾಪ್ಟೆನ್ಸಿ ಓಟದಿಂದ ಹೊರಗೆ: ವೈಲ್ಡ್ ಕಾರ್ಡ್ ಸ್ಪರ್ಧಿಗಳ ತೀರ್ಮಾನ

ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ತಮ್ಮನ್ನು ಗಟ್ಟಿ ಸ್ಪರ್ಧಿ ಎಂದು ಪ್ರೂವ್ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿನ ಎಪಿಸೋಡ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಒಳಬಂದ ಸ್ಪರ್ಧಿಗಳ ನಿರ್ಧಾರದಿಂದ ಅಶ್ವಿನಿ ಭಾವನಾತ್ಮಕವಾಗಿ ಕುಸಿದರು. ಅವರ ಗಟ್ಟಿತನವೇ ಈ ಬಾರಿ ಅವರಿಗೆ ಪರೀಕ್ಷೆಯಾಯಿತು. ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ, ಬಿಗ್ಬಾಸ್ ಮೂರು ವೈಲ್ಡ್ ಕಾರ್ಡ್ ಸದಸ್ಯರಾದ ರಘು, ರಿಶಾ ಮತ್ತು ಸೂರಜ್ ಅವರಿಗೆ ಇಬ್ಬರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಡುವ ಅಧಿಕಾರ ನೀಡಿದರು. ಅವರ ನಿರ್ಧಾರದಿಂದ […]

ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ಅವರ ಹಾಸ್ಯ ಪ್ರೇಕ್ಷಕರ ಮನಗೆದ್ದಿದೆ. ಅವರು ಮನೆಯಲ್ಲಿ ಸದಾ ಉಲ್ಲಾಸ ತುಂಬಿಸುತ್ತಾ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಿದ್ದಾರೆ. ಆದರೆ, ಇತ್ತೀಚಿನ ಘಟನೆಯೊಂದರಿಂದ ಗಿಲ್ಲಿಯ ಹಾಸ್ಯ ಆಟದ ಗಂಭೀರತೆಯನ್ನು ಮರೆಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇತ್ತೀಚೆಗೆ ನಡೆದ ಕಾಯಿನ್ ಟಾಸ್ಕ್ ವೇಳೆ ಗಿಲ್ಲಿ ಅವರ ವರ್ತನೆಗೆ ಸಹ ಸ್ಪರ್ಧಿ ಕಾವ್ಯಾ ಶೈವ ಅಸಮಾಧಾನ ವ್ಯಕ್ತಪಡಿಸಿದರು. ಗಿಲ್ಲಿ ತಮ್ಮ ಹಾಸ್ಯದಿಂದ ಆಟವನ್ನು ಹಾಸ್ಯಾಸ್ಪದವಾಗಿಸುತ್ತಿದ್ದಾರೆ, ಆದರೆ ಅದು ಮಿತಿ ಮೀರುತ್ತಿದೆ ಎಂಬ […]

Translate »