‘ಫೈರ್ ಫ್ಲೈ’ ನಾಯಕ ವಂಶಿ ಇಂಟ್ರೂಡಕ್ಷನ್ ಟೀಸರ್ ಅನಾವರಣ
‘ಫೈರ್ ಫ್ಲೈ’ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ವಿಕ್ಕಿಯಾಗಿ ನಾಯಕ ವಂಶಿಯನ್ನು ಫೈರ್ ಫ್ಲೈ ಬಳಗ ಸಿನಿಮಾಪ್ರೇಮಿಗಳಿಗೆ ಪರಿಚಯಿಸಿದೆ. ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಿಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್ ನಡೆಯುತ್ತದೆ. ವಿಕ್ಕಿ […]