# Tags

‘ಕಾಂತಾರ: ಚಾಪ್ಟರ್ 1’ – ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಅದ್ಭುತ ಚಿತ್ರ!

ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದಂತೆಯೇ, ಸಿನೆಮಾ ಮಂದಿರಗಳ ಮುಂದೆ ಅಭಿಮಾನಿಗಳ ಜಾತ್ರೆ ಶುರುವಾಯಿತು. ನಿನ್ನೆ ರಾತ್ರಿ ವಿಶೇಷ ಶೋಗಳಿಂದಲೇ ಹುರುಪು ಏರಿದರೆ, ಇಂದು ಬೆಳಿಗ್ಗೆ 5 ಗಂಟೆಗೆ ಆರಂಭವಾದ ಪ್ರದರ್ಶನಗಳು ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಪಡೆದಿವೆ. ಮೊದಲ ಶೋ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದು, ಸಿನಿಮಾ ಸುತ್ತಲೇ ಸಂಭ್ರಮದ ಜಾತ್ರೆ ಹರಿದಾಡುತ್ತಿದೆ. ಪ್ರೇಕ್ಷಕರ ಅಭಿಪ್ರಾಯಗಳಲ್ಲಿ ಸಾಮಾನ್ಯವಾಗಿರುವುದು – ರಿಷಬ್ ಶೆಟ್ಟಿ ಕಥೆ ಹೇಳುವ […]

ಗುರುನಂದನ್ ಅಭಿನಯದ “ರಾಜು ಜೇಮ್ಸ್ ಬಾಂಡ್” ತೆರೆಗೆ ಬರಲು ಸಿದ್ದ .

ಕರ್ಮ ಬ್ರೋಸ್ ಪ್ರೊಡಕ್ಷನ್ ತನ್ನ ಅತ್ಯಂತ ನಿರೀಕ್ಷಿತ ಹೊಸ ಸಿನಿಮಾ “ರಾಜು ಜೇಮ್ಸ್ ಬಾಂಡ್ ” ಚಿತ್ರವನ್ನು ಈ ವರ್ಷದ ಅಂತ್ಯದಲ್ಲಿ ರಾಜ್ಯದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ ಎಂಬುದನ್ನು ತಿಳಿಸಲು ತುಂಬಾ ಸಂತೋಷವಾಗುತ್ತಿದೆ.ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ, “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್, ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರ ತನ್ನ ಮನಮೋಹಕ ಕಥೆ, ಹಾಸ್ಯ, ಲಂಡನ್‌ನ ಅದ್ಭುತ ದೃಶ್ಯಗಳು […]

ಕನ್ನಡದ ‘ಮರ್ಯಾದೆ ಪ್ರಶ್ನೆ’ ನವೆಂಬರ್ 22ಕ್ಕೆ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಕಥೆಯ ಕಂಟೆಂಟ್‌ಗಳು ಹಾಗೂ ನಿರೂಪಣೆಯಲ್ಲಿ ಹೊಸತನವಿರುವ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈಗ ಈ ಸಾಲಿಗೆ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಸೇರಿದ್ದು, ಈಗಾಗಲೇ ಇದು ವಿಭಿನ್ನ ಶೀರ್ಷಿಕೆ ಮೂಲಕ ಸದ್ದು ಮಾಡಿದೆ. ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಮರ್ಯಾದೆ ಪ್ರಶ್ನೆ ಸಿನಿಮಾ ತೆರೆಗೆ ಬರೋದಿಕ್ಕೆ ಮುಹೂರ್ತ ನಿಗದಿಯಾಗಿದೆ. ಬೆಂಗಳೂರಿನ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ಚಿತ್ರತಂಡ ಬಹಳ ಉತ್ಸುಕತೆಯಿಂದ ತಮ್ಮ ಕನಸ್ಸನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲು ಕಾತರದಿಂದ ಸುದ್ದಿಗೋಷ್ಠಿಗೆ ಹಾಜರಾಗಿತ್ತು. […]

ಟ್ರೇಲರ್ ನಲ್ಲೇ ಭರವಸೆ ಮೂಡಿಸಿರುವ “ಸಂತೋಷ ಸಂಗೀತ” ಸದ್ಯದಲ್ಲೇ ತೆರೆಗೆ .

ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ – ನಾಯಕಿಯಾಗಿ ನಟಿಸಿರುವ “ಸಂತೋಷ ಸಂಗೀತ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿರವರು ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದರು. ವಿಶೇಷ ಅತಿಥಿಯಾಗಿ ಲಹರಿ ವೇಲು ಅವರು ಆಗಮಿಸಿದ್ದರು. ಈ ಚಿತ್ರವು ‘ಯು’ಪ್ರಮಾಣ ಪತ್ರ ಪಡೆದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. “ಸಂತೋಷ ಸಂಗೀತ” ಚಿತ್ರ ನಿಲ್ಲಲು ನಾಲ್ಕು ಕಾಲು ತುಂಬಾ ಅವಶ್ಯಕತೆ ಇದ್ದು, ತಯಾರಿ, […]

 ನಿರೂಪ್ ಭಂಡಾರಿ  ಚಿತ್ರದ ಟೈಟಲ್ ಬಿಡುಗಡೆ *ಸತ್ಯ ಸನ್ ಆಫ್ ಹರಿಶ್ಚಂದ್ರ

‘ರಂಗಿತರಂಗ’ ಸಿನಿಮಾದ ಯಶಸ್ವಿ ಜೋಡಿ  ನಿರೂಪ್ ಭಂಡಾರಿ ಮತ್ತು ಸಾಯಿ ಕುಮಾರ್ ವಿಬಿನ್ನ ಕಥಾವಸ್ತುವನ್ನು ಹೊಂದಿದ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.‘ಅಂಕಿತ್ ಸಿನಿಮಾಸ್’ ನಿರ್ಮಾಣದ ಈ ಚಿತ್ರದ ಟೈಟಲ್ ಮತ್ತು ಮೊದಲ ಲುಕ್ ಇಂದು ಬಿಡುಗಡೆಯಾಗಿದೆ.  “ಸತ್ಯ ಸನ್ ಆಫ್ ಹರಿಶ್ಚಂದ್ರ” ಈ ಚಿತ್ರದ ಶೀರ್ಷಿಕೆ. ಇಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಹಿತವಾದ ವರ್ಣ ಸಂಯೋಜನೆಯೊಂದಿಗೆ ಸುಂದರವಾಗಿ ಮೂಡಿ ಬಂದಿದೆ. ಮಗನಾಗಿ ನಿರೂಪ್ ಭಂಡಾರಿಯವರ ಫಸ್ಟ್ ಲುಕ್ ಆಕರ್ಷಕವಾಗಿದೆ. ಅಪ್ಪನಾಗಿ ಸಾಯಿ ಕುಮಾರ್ ಅವರ ಗತ್ತು ರಾಜಗಾಂಭೀರ್ಯದಿಂದ  […]

ಬ್ಯಾಚುಲರ್ ಪಾರ್ಟಿ ಕೊಡಲು ರೆಡಿಯಾದ ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಬ್ಯಾಚುಲರ್ ಪಾರ್ಟಿ ಕೊಡಲು ರೆಡಿಯಾಗಿದ್ದಾರೆ. ನಿನ್ನೆಯೇ ಹೊಸ ಸುದ್ದಿ ಕೊಡುವುದಾಗಿ ಹೇಳಿದ್ದರು. ಅದೀಗ ನಿಜವಾಗಿದೆ.ಕಿರಿಕ್ ಪಾರ್ಟಿ ಸಿನಿಮಾ ಬಂದು ಏಳು ವರ್ಷವಾಗಿದೆ. ಆದರೆ ಇದುವರೆಗೆ ಪರಂವಾ ಸ್ಟುಡಿಯೋ ಕಡೆಯಿಂದ ಅಂತಹದ್ದೇ ಮತ್ತೊಂದು ಕಾಮಿಡಿ ಸಿನಿಮಾ ಬಂದಿಲ್ಲ ಎನ್ನುವುದು ಪ್ರೇಕ್ಷಕರ ಆರೋಪ. ಇದು ನಮ್ಮ ಕಿವಿಗೂ ಬಿದ್ದಿದೆ. ನಾಳೆಯೇ ನಿಮಗೆ ಅಪ್ ಡೇಟ್ ಕೊಡುತ್ತೇವೆ ಎಂದು ರಕ್ಷಿತ್ ಹೇಳಿದ್ದರು. ಇದನ್ನೂ ಓದಿ  ಮನದಾಳವನ್ನು ಬಿಚ್ಚಿಟ್ಟ ಹಾಟ್ ನಟಿ ಕಂಗನಾ ರನಾವತ್ ಇದನ್ನು ಕೇಳಿ […]

ಮನಸೂರೆಗೊಳ್ಳುತ್ತಿದೆ ತನುಷ್ ಶಿವಣ್ಣ – ಸೋನಾಲ್ ಮೊಂತೆರೊ ಅಭಿನಯಿಸಿರುವ “Mr ನಟ್ವರ್ ಲಾಲ್” ಚಿತ್ರದ ಯುಗಳಗೀತೆ .

ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ಹಾಗೂ ವಿ.ಲವ ನಿರ್ದೇಶನದ “Mr ನಟ್ವರ್ ಲಾಲ್” ಚಿತ್ರದ ಯುಗಳಗೀತೆಯೊಂದು ಬಿಡುಗಡೆಯಾಗಿದೆ. ಇದನ್ನೂ ಒದಿ “ಎಲೆಕ್ಟ್ರಾನಿಕ್ ಸಿಟಿ”ಯಲ್ಲಿದೆ ಐಟಿ ಉದ್ಯೋಗಿಯ ವರ್ಕ್ ಲೈಫ್ . ಬೆಂಗಳೂರಿನ ಪ್ರಸಿದ್ದ ಬಡಾವಣೆಯ ಹೆಸರೆ ಈಗ ಚಿತ್ರದ ಶೀರ್ಷಿಕೆ ಈ ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ಅಚ್ಚಚ್ಚಚ್ಚು ಅಚ್ಚುಮೆಚ್ಚು” ಎಂಬ ಪ್ರೇಮಗೀತೆ ಆನಂದ್ ಆಡಿಯೋ ಮೂಲಕ ಹೊರಬಂದಿದ್ದು ಎಲ್ಲರ ಮನ ಗೆಲ್ಲುತ್ತಿದೆ. ಧರ್ಮವಿಶ್ ಸಂಗೀತ ಸಂಯೋಜಿಸಿರುವ ಈ ಯುಗಳಗೀತೆ ಗಾಯಕ […]

‘ಪೂರ್ಣ’ವಾಗದ ‘ಭಾವ’ಕ್ಕೊಂದು ಸಂಪೂರ್ಣ ನ್ಯಾಯ

1998ರ ರಾಷ್ಟç ಪ್ರಶಸ್ತಿ ವಿಜೇತ ಚಿತ್ರ “ತಬರನ ಕಥೆ” ನೆನಪಿಸುತ್ತದೆ ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಚಿತ್ರ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಕಾದಂಬರಿ “ತಬರನಕಥೆ” ಆಧರಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿ, ಚಾರು ಹಾಸನ್ ನಟಿಸಿದ ‘ತಬರನ ಕಥೆ’ ಚಿತ್ರ ರಾಷ್ಟç ಪ್ರಶಸ್ತಿ ಗಳಿದ್ದಲ್ಲದೆ, ನಟ ಚಾರು ಹಾಸನ್ ಶ್ರೇಷ್ಠ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಚಿತ್ರ ಸಹ ಅಂಥದ್ದೇ ಸಾರ್ವಜನಿಕ ವ್ಯವಸ್ಥೆಯ ದುರವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ನಾಲ್ಕು ದಶಕಗಳ ನಂತರವೂ ಸರ್ಕಾರಿ ವ್ಯವಸ್ಥೆ […]

Translate »