`ಕರಿಮಣಿʼ ಸಾಹಿತ್ಯಾಗೆ ನಾನ್ ವೆಜ್ ಕೊಟ್ರೆ ಫುಲ್ ಹ್ಯಾಪಿ
ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನವರು. ಮೈಸೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ. ಎಂಜಿನಿಯರಿAಗ್ ಮುಗಿಸಿರುವ ಸ್ಪಂದನಾ ನೇರವಾಗಿ ಬಂದಿದ್ದು ನಟನಾ ಕ್ಷೇತ್ರಕ್ಕೆ. ಇಂಜಿನಿಯರಿAಗ್ ಕ್ಷೇತ್ರದಲ್ಲಿಯೇ ಕೆಲಸವೂ ಸಿಕ್ಕಿತ್ತು. ಪುಣೆಗೆ ಹೋಗಬೇಕಾದವರು ಚಂದನವನಕ್ಕೆ ಎಂಟ್ರಿ ಕೊಟ್ಟರು. ನಟನೆಯನ್ನೇ ಆಯ್ಕೆ ಮಾಡಿಕೊಂಡರು. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಂದನಾ ಹೆಚ್ಚು ಆಕ್ಟೀವ್ ಆಗಿದ್ದ ಕಾರಣ ಆ ಮೂಲಕವೇ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಸ್ಪಂದನಾ ತಮ್ಮದೇ ಆದ ಹೆಸರು ಮಾಡಿದ್ದಾರೆ. ಗೃಹಪ್ರವೇಶ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಕಾಣಿಸಿಕೊಂಡು ಮನೆಯವರ ಮನಸ್ಸನ್ನು ಗೆದ್ದ […]