“ನನ್ನ ಹೆಸರಲ್ಲಿ ಹಣ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ” ದೈವದ ಎಚ್ಚರಿಕೆ
‘ಕಾಂತಾರ’ ಸಿನಿಮಾ ಬಿಡುಗಡೆಯಾದ ಬಳಿಕ ದೈವದ ಅನುಕರಣೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ದೈವ ನರ್ತನದ ನಕಲಿ ವಿಡಿಯೋಗಳು ಹರಿದಾಡುತ್ತಿವೆ. ಇದರಿಂದ ಬೇಸತ್ತ ಕೆಲ ದೈವಾರಾಧಕರು ಹಾಗೂ ದೈವನರ್ತಕರು ಇದೀಗ ದೈವದ ಅಪಹಾಸ್ಯ ಮಾಡುತ್ತಿರುವವರ ವಿರುದ್ಧ ದೈವಸ್ಥಾನದಲ್ಲೇ ದೂರು ಸಲ್ಲಿಸಿದ್ದಾರೆ. ಮಂಗಳೂರು ಬಜಪೆ ಸಮೀಪದ ಶ್ರೀ ಕ್ಷೇತ್ರ ಪೆರಾರ ಹಾಗೂ ಬಲವಂಡಿ–ಪಿಲಿಚಂಡಿ ದೈವಸ್ಥಾನಗಳಲ್ಲಿ ನಡೆದ ಪ್ರಾರ್ಥನೆ ವೇಳೆ, ದೈವದ ಆವೇಶದಲ್ಲಿ ಸ್ಪಷ್ಟ ಎಚ್ಚರಿಕೆ ನೀಡಿದಂತಾಗಿದೆ — “ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು […]