Exclusive Interview: ಕಿರುತೆರೆಯ ಡಾಲ್.. ಎಲ್ಲರ ಮುದ್ದಿನ ಬೆಡಗಿ.. ಮಲೈಕಾ ಟಿ ವಸುಪಾಲ್
ಪಟ ಪಟ ಅಂತ ಮಾತನಾಡುತ್ತಿದ್ದರೆ ಕೇಳುವುದಕ್ಕೇನೆ ಚೆಂದ. ಅದರಲ್ಲೂ ಸೀರಿಯಲ್ ಲೋಕದಲ್ಲಿ ಯಡವಟ್ಟು ಮಾಡುತ್ತಾ, ಕ್ಯೂಟ್ ಆಗಿ ಮಾತನಾಡುತ್ತಾ ಎಲ್ಲರನ್ನು ಮೋಡಿ ಮಾಡಿದ್ದೆ ಮಲೈಕಾ ಟಿ ವಸುಪಾಲ್. `ಹಿಟ್ಲರ್ ಕಲ್ಯಾಣ’ ಸೀರಿಯಲ್ ಮೂಲಕ ಮನೆ ಮಾತಾದ ನಟಿ ಮಲೈಕಾ ಈಗ `ಉಪಾಧ್ಯಕ್ಷ’ ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲೂ ಎಲ್ಲರ ಮನಸ್ಸು ಗೆದ್ದಿದ್ದಾರೆ. ಪಟ ಪಟ ಅಂತ ಮಾತನಾಡುತ್ತಾ, ತುಟಿ ಅಂಚಿನಲ್ಲಿ ನಗು ಬೀರುತ್ತಾ, ಎಲ್ಲರ ಮನಸ್ಸು ಗೆಲ್ಲುವ ಚೆಲುವೆ ಮಲೈಕಾ ಟಿ ವಸುಪಾಲ್ `ಚಿತ್ತಾರ’ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. […]