# Tags

ಕನ್ನಡದ ಹೆಮ್ಮೆ: ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ 509 ಕೋಟಿ ಗಡಿ ದಾಟಿದೆ!

ಹೊಂಬಾಳೆ ಫಿಲ್ಮ್ಸ್‌ನ “ಕಾಂತಾರ ಅಧ್ಯಾಯ 1” ಚಿತ್ರವು ಬಿಡುಗಡೆಯಾದ ಅಕ್ಟೋಬರ್ 2, 2025ರಿಂದ ಇಲ್ಲಿಯವರೆಗೆ ವಿಶ್ವಾದ್ಯಂತ 509 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ.ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಅದರ ಅದ್ಭುತ ಕಥಾಹಂದರ, ನಮ್ಮ ನೆಲದ ಸಂಸ್ಕೃತಿಯ ವಾಸ್ತವಿಕ ಚಿತ್ರಣ ಮತ್ತು ತಾಂತ್ರಿಕ ಉತ್ಕೃಷ್ಟತೆಗಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸರಿಸಾಟಿಯಿಲ್ಲದ ಪ್ರಶಂಸೆ ಗಳಿಸಿದೆ. ಈ ಚಿತ್ರವು ದೇಶಾದ್ಯಂತ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು, […]

ಒಂದೇ ದಿನದಲ್ಲಿ 12.8 ಲಕ್ಷ ಟಿಕೆಟ್ ಮಾರಾಟ – ದಾಖಲೆ ಬರೆದ ‘ಕಾಂತಾರ: ಚಾಪ್ಟರ್ 1’

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯ ದಿನವೇ ಸಂಚಲನ ಮೂಡಿಸಿದೆ. ಬಿಡುಗಡೆಯ ಮೊದಲೇ ಈ ಸಿನಿಮಾದ ಮೇಲೆ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಇತ್ತು. ಅದೇ ನಿರೀಕ್ಷೆ ನಿಜವಾಗಿದ್ದು, ಬಾಕ್ಸ್ ಆಫೀಸ್‌ನಲ್ಲೂ, ಟಿಕೆಟ್ ಮಾರಾಟದಲ್ಲೂ ಅದ್ಭುತ ಸಾಧನೆ ದಾಖಲಾಗಿದೆ. ಬುಕ್ ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿ ಒಂದೇ ದಿನದಲ್ಲಿ 1.28 ಮಿಲಿಯನ್ ಟಿಕೆಟ್‌ಗಳು (ಅಂದರೆ 12,80,000) ಮಾರಾಟವಾಗಿವೆ. 2025ರಲ್ಲಿ ಬಿಡುಗಡೆಯಾದ ಯಾವುದೇ ಭಾಷೆಯ ಸಿನಿಮಾವೂ ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್ […]

ವರ್ಣತರಂಗ ಚಿತ್ರದ ಮೂರು ಹಾಡುಗಳ ಬಿಡುಗಡೆ, ಶೀಘ್ರದಲ್ಲೇ ಸೆನ್ಸಾರ್ ಪ್ರಕ್ರಿಯೆ

ನಟ ತಿಲಕ್ ಶೇಖರ್ ಅವರು ಮತ್ತೆ ಪೊಲೀಸ್ ಪಾತ್ರದಲ್ಲಿ ಪರದೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಎಸಿಪಿ ಪಾತ್ರ ನಿರ್ವಹಿಸಿರುವ ಅವರು, ‘ವರ್ಣತರಂಗ’ ಸಿನಿಮಾದಲ್ಲಿಯೂ ಅದೇ ರೀತಿಯ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಆದರೆ ಈ ಬಾರಿ ಕೇಸ್ ಹಾಗೂ ಕಥೆ ಸಂಪೂರ್ಣ ವಿಭಿನ್ನವಾಗಿರುವುದರಿಂದ ನೋಡುಗರಿಗೆ ಹೊಸ ಅನುಭವ ಸಿಗುತ್ತದೆ ಎಂದು ತಿಲಕ್ ತಿಳಿಸಿದ್ದಾರೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ತೀರ್ಥೆಶ್ ಕೊರಮೇರು ನಿರ್ದೇಶಿಸಿರುವ ಈ ಸಿನಿಮಾವನ್ನು […]

ಕನ್ನಡ ಮಣ್ಣಿನ ಕಥೆ, ಜಾಗತಿಕ ಹಂತ – ‘ಕಾಂತಾರ: ಅಧ್ಯಾಯ 1’ ಟ್ರೇಲರ್ ಸೆನ್ಸೇಶನ್

ಸದ್ಯ ಟ್ರೇಲರ್ ನಿಂದ ಇಡಿ ವಿಶ್ವದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಚಿತ್ರವೆಂದರೆ ‘ಕಾಂತಾರ-1’. ಟ್ರೇಲರ್ ಬಿಡುಗಡೆ ದಿನ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು, ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಮಾತನಾಡಿ, ‘ಕಾಂತಾರ’, ಪಂಚವಾರ್ಷಿಕ ಯೋಜನೆಯ ತರಹ ಐದು ವರ್ಷದ ದೊಡ್ಡ ಜರ್ನಿ ಎನ್ನಬಹುದು. ತುಂಬಾ ಕಷ್ಟಗಳನ್ನು ದಾಟಿ ರಿಲೀಸ್ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ನನ್ನ ಮಡದಿ ಪ್ರಗತಿ ಎಷ್ಟು ದೇವರಿಗೆ ಹರಕೆ ಹೊತ್ತಿದ್ದಾಳೆ […]

ಕನ್ನಡಿಗರ ಹೃದಯಗಳಲ್ಲಿ ಸದಾ ಜೀವಂತ – 75ನೇ ಹುಟ್ಟುಹಬ್ಬದ ಅಂಗವಾಗಿ ವಿಷ್ಣುವರ್ಧನ್‌ಗೆ ವಿಶೇಷ ಗೌರವ

ಅದೊಂದು ಕೊರಗು ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಕನ್ನಡದ ಹೆಮ್ಮೆಯ ನಟ ವಿಷ್ಣುವರ್ಧನ್ ಅವರು ನಿಧನರಾಗಿ ೧೫ ವರ್ಷಗಳಾದರೂ ಅವರಿಗೆ ರಾಜ್ಯ ಸರ್ಕಾರದಿಂದ ‘ಕರ್ನಾಟಕ ರತ್ನ’ ಪ್ರಶಸ್ತಿ ಸಿಗಲಿಲ್ಲ ಎಂಬ ಬೇಸರ ಹಲವರಲ್ಲಿ ಇದ್ದೇ ಇತ್ತು. ಆ ಬೇಸರ ಕೊನೆಗೂ ಶಮನವಾಗಿದೆ. ಇತ್ತೀಚೆಗೆ ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿಷ್ಣುವರ್ಧನ್ ಅವರ ೭೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಶಸ್ತಿ ಘೋಷಣೆಯಾಗಿರುವುದು, ಇದಕ್ಕಿಂತ ಇನ್ನೇನು […]

ಸಾರ್ವಜನಿಕವಾಗಿ ಲಾಂಗ್‌ ಹಿಡಿದು ಪೋಸ್‌; ಮತ್ತೊಂದು ವಿವಾದದಲ್ಲಿ ದರ್ಶನ್‌

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ವಿವಾದಕ್ಕೂ ಬಿಡಲಾರದ ನಂಟು ಅಂತ ಅನಿಸುತ್ತಿದೆ. ಬೇಡ ಅಂದರೂ ಒಂದಲ್ಲ ಒಂದು ವಿವಾದಗಳು ಇವರನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ. ಇತ್ತೀಚೆಗಷ್ಟೇ ಪ್ರಕರಣವೊಂದರಲ್ಲಿ ಪೊಲೀಸರ ಮುಂದ ಹಾಜರಾಗಿ ಬಂದಿದ್ದ ದರ್ಶನ್ ಮತ್ತೊಂದು ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ದರ್ಶನ್ ಇತ್ತೀಚೆಗೆ ಅವರ ಅಭಿಮಾನಿ ಬಳಗ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಅಭಿಷೇಕ್ ಅಂಬರೀಶ್ ಕೂಡ ಭಾಗಿಯಾಗಿದ್ದರು. ಇಷ್ಟೇ ಆಗಿದ್ದರೆ ಎಲ್ಲರೂ ಸುಮ್ಮನಿರುತ್ತಿದ್ದರೋ ಏನೋ. ಆದರೆ, ದರ್ಶನ್ ಅಭಿಮಾನಿಗಳು ನೀಡಿದ ಬೆಳ್ಳಿ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದರು. ಇದೇ […]

Translate »