ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ & ಗೀತಕ್ಕ ಓಡಾಟ
ಚಿಕಿತ್ಸೆಗೆಂದು ಅಮೆರಿಕಗೆ ಹೋಗಿರುವ ಶಿವಣ್ಣ ಅವರು ಚೇತರಿಸಿಕೊಳ್ತಿದ್ದಾರೆ. ಶಿವಣ್ಣ ಅಭಿಮಾನಿಗಳು ಖುಷಿಯಾಗುವಂತಹ ಮಾಹಿತಿಯನ್ನು ಗೀತಾ ಶಿವರಾಜ್ಕುಮಾರ್ ಹಂಚಿಕೊಂಡಿದ್ದಾರೆ.ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಶಿವಣ್ಣ ಅವರು ತಾವು ಉಳಿದುಕೊಂಡಿರುವ ನಿವಾಸದ ಹತ್ತಿರ ಇರುವ ಬೀಚ್ಗೆ ಭೇಟಿ ನೀಡಿದ್ದಾರೆ. ಅಲ್ಲಿ ವಾಯುವಿಹಾರ ನಡೆಸಿ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಆ ಕ್ಷಣವನ್ನು ಗೀತಕ್ಕ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವು ಫೋಟೋಗಳನ್ನು ಅಭಿಮಾನಿಗಳ ಜೊತೆ ಗೀತಕ್ಕ ಹಂಚಿಕೊಂಡಿದ್ದಾರೆ. ಶಿವಣ್ಣ ಕೂಡ ಗೀತಕ್ಕ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಶಿವಣ್ಣ ಅವರಿಗೆ ಕ್ಯಾನ್ಸರ್ ಕಾಡಿತ್ತು. […]