# Tags

ಸಂಗೀತಾ ರಾಜ – ಮಾಧುರ್ಯತೇಜ : ದೊಡ್ಡರಂಗೇಗೌಡರು ಕಂಡ ಎಸ್ ಪಿ ವೆಂಕಟೇಶ್

ಹತ್ತು ಹನ್ನೊಂದು ವರ್ಷದ ಒಬ್ಬ ಹುಡುಗ ಗಿಟಾರ್ ಹಿಡಿದು “ಸಂಗೀತ ಸಾಮ್ರಾಟ್” ವಿಜಯ್ ಭಾಸ್ಕರ್ ಹತ್ತಿರ ಕೆಲಸ ಕೇಳಿಕೊಂಡು ಬಂದು, ಕೈಕಟ್ಟಿ ನಿಂತು ಯಾಚಿಸುತ್ತಾನೆ. ನಿಮ್ಮ ಬಳಿ ಗಿಟಾರ್ ನುಡಿಸಿಕೊಂಡು ಇರುತ್ತೇನೆ. ನಾನು ಸಹ ಆ ಮೂಲಕ ಹೆಚ್ಚಿನ ಜ್ಞಾನ ಪಡೆಯುತ್ತೇನೆ. ಒಂದು ಅವಕಾಶ ಕೊಡಿ ವಾದ್ಯಾರ್ (ಗುರುಗಳೇ) ಎಂದು ವಿನಮ್ರವಾಗಿ ಪ್ರಾರ್ಥಿಸುತ್ತಾನೆ. `ಎಲ್ಲಿ ನುಡಿಸಿ ತೋರಿಸು, ನಿನಗೆ ಗೊತ್ತಿರುವುದೆಲ್ಲವನ್ನು ನನ್ನೆದುರು ಈಗಲೇ ನುಡಿಸು’ ಎಂದು ಆದೇಶ ನೀಡುತ್ತಾರೆ. ವಿಧೇಯ ವಿದ್ಯಾರ್ಥಿಯಾಗಿ ಎಸ್ ಪಿ ವೆಂಕಟೇಶ್ ತನಗೆ […]

ಬಹು ಮುಖೀ ವ್ಯಕ್ತಿತ್ವದ ವಿಷ್ಣು – ಡಾ. ದೊಡ್ಡರಂಗೇಗೌಡರು ಕಂಡಂತೆ

ನೆನಪು ಹಸಿರಾಗಿದೆ ಆಗ ವಿಷ್ಣು ಇನ್ನೂ `ಕುಮಾರ’ನಾಮಧಾರಿಯೇ ಆಗಿದ್ದ. ೧೯೬೮ ಇರಬಹುದು. ಕುಮಾರನಿಗೆ ರಂಗಭೂಮಿಯ ಗೀಳು! ಹೀಗಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ಶಿಸ್ತಿನ ಸಿಪಾಯಿ ತರ ಬರುವುದು-ನಾಟಕಗಳ ನೋಡುವುದು-ಅಲ್ಲೇ ಮೆಟ್ಟಿಲುಗಳ ಮೇಲೆ ಕುಳಿತು ಹರಟೆ ಹೊಡೆಯುವುದು ಅವರ (ಕುಮಾರನ) ಹವ್ಯಾಸ. ಅವರು ಸದಾ Inshirt ಮಾಡಿರುತ್ತಿದ್ದುದೇ ಹೆಚ್ಚು. ಆಗ ನಾನು ಪ್ರಥಮ ವರ್ಷದ ಬಿ.ಎ.ಆನರ್ಸ್ ವಿದ್ಯಾರ್ಥಿ. ಅಂದಿನಿಂದ ಅವರು ಕೊನೆ ಉಸಿರು ಎಳೆವ ತನಕ ವಿಷ್ಣುವನ್ನು ಚೆನ್ನಾಗಿ ಬಲ್ಲೆ! `ವಂಶ ವೃಕ್ಷ’ದಲ್ಲಿ ಪುಟ್ಟ ಪಾತ್ರ ಮಾಡಿದವರು ಪುಟ್ಟಣ್ಣ ಕಣಗಾಲ್‌ಗೆ […]

Translate »