# Tags

ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ ಲಾಕ್ – ಮೈತ್ರಿ ಮೂವಿ ಮೇಕರ್ಸ್ ಅಧಿಕೃತ ಘೋಷಣೆ

Allu Arjun next movie: ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನ ಮಾಡುತ್ತಿರುವ ಭಾರಿ ಬಜೆಟ್​ನ ಸಿನಿಮಾನಲ್ಲಿ ನಟಿಸುತ್ತಿದ್ದು, ದೀಪಿಕಾ ಪಡುಕೋಣೆ ಆ ಸಿನಿಮಾದ ನಾಯಕಿ. ಅಲ್ಲು ಅರ್ಜುನ್ ನಟಿಸಿದ್ದ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಇದೀಗ ಅಲ್ಲು ಅರ್ಜುನ್ ಜೊತೆಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ನಿರ್ದೇಶಕ ಯಾರು? ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ಮೂಲಕ ಅಲ್ಲು ಅರ್ಜುನ್ ಅಂತರಾಷ್ಟ್ರೀಯ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರ ಸಿನಿಮಾಗಳಿಗೆ ಈಗ ಅಮೆರಿಕ, ಅರಬ್ […]

ಬಾಕ್ಸ್‌ ಆಫೀಸ್ ಸುನಾಮಿ ಖಚಿತ – ಅಲ್ಲು ಅರ್ಜುನ್ – ಲೋಕೇಶ್ ಅದ್ಧೂರಿ ಜೋಡಿ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಲೋಕೇಶ್ ಕನಗರಾಜ್ (Lokesh Kanagaraj) ಕಾಂಬಿನೇಷನ್‍ನಲ್ಲಿ ಸಿನಿಮಾ ಬರೋದು ಕನ್ಫರ್ಮ್ ಆಗಿದೆ. ಅಲ್ಲು ಅರ್ಜುನ್ ಸದ್ಯ ಅಟ್ಲಿ ಜೊತೆಗೆ ಇನ್ನೂ ಹೆಸರಿಡದ ಎಎ22 (AA23) ಸಿನಿಮಾ ಮಾಡುತ್ತಿದ್ದಾರೆ. ಸೂಪರ್‌ಮ್ಯಾನ್ ಕಾನ್ಸೆಪ್ಟ್ ಈ ಸಿನಿಮಾ ಬಳಿಕ ಲೋಕೇಶ್ ಜೊತೆ ಅಲ್ಲು ಅರ್ಜುನ್ ಕೈ ಜೋಡಿಸಲಿದ್ದಾರಂತೆ. ಅಂದಹಾಗೆ ಈ ಸಿನಿಮಾಗೆ ಎಎ23 ಅನ್ನೋ ವರ್ಕಿಂಗ್ ಟೈಟಲ್‍ನಲ್ಲಿ ಸಿನಿಮಾ ಆರಂಭ ಮಾಡಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆಯಂತೆ. ಇನ್ನು ಈ ಸಿನಿಮಾ ಅದ್ಧೂರಿ ಮೇಕಿಂಗ್‍ನಲ್ಲಿ ಬಹುಕೋಟಿ […]

ರಿಷಬ್ ಶೆಟ್ಟಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಟಾರ್ ಅಲ್ಲು ಅರ್ಜುನ್

ದಕ್ಷಿಣ ಭಾರತದ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಹೊಸದಾಗಿ ಬಿಡುಗಡೆಗೊಂಡ ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ವೀಕ್ಷಿಸಿ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ, ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಅವರಿಗೇ ಹೊಸದಲ್ಲ. ಈಗ ರಿಷಬ್ ಶೆಟ್ಟಿ ಅವರ ನಿರ್ದೇಶನದ ಈ ಚಿತ್ರವೂ ಅಲ್ಲು ಅರ್ಜುನ್ ಅವರನ್ನು ಅಚ್ಚರಿ ಮೂಡಿಸಿದೆ. “ಕಾಂತಾರ ಚಿತ್ರವನ್ನು ವೀಕ್ಷಿಸಿದೆ. ಅದ್ಭುತ ಸಿನಿಮಾ. ಸಿನಿಮಾ ನೋಡಿ ನಾನು ಮೈಮರೆತೆ. ಒನ್ ಮ್ಯಾನ್ ಆರ್ಮಿ ರಿಷಬ್ ಶೆಟ್ಟಿ […]

‘ಪುಷ್ಪ 3’ ಇಲ್ಲ, ಸುಕುಮಾರ್ ಹೊಸ ಸ್ಟಾರ್ ಜೊತೆ ಕೈ ಜೋಡಿಸಿದ್ದಾರೆ

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಭಾರಿ ಯಶಸ್ಸು ಪಡೆದಿದೆ. ಚಿತ್ರದ ಅಂತ್ಯದಲ್ಲಿ ‘ಪುಷ್ಪ 3’ ಬರಲಿದೆ ಎಂಬ ಸೂಚನೆ ಇದ್ದರೂ, ಅಭಿಮಾನಿಗಳ ನಿರೀಕ್ಷೆಯಂತೆ ‘ಪುಷ್ಪ 3’ ಪ್ರಾಜೆಕ್ಟ್ ಮುಂದುವರಿಯುತ್ತಿಲ್ಲ. ಬದಲಾಗಿ, ಸುಕುಮಾರ್ ತೆಲುಗು ಸಿನೆಮಾದ ಮತ್ತೊಬ್ಬ ಸ್ಟಾರ್ ನಟನ ಜೊತೆ ಹೊಸ ಚಿತ್ರಕತೆ ಮೇಲೆ ಕೆಲಸ ಮಾಡುತ್ತಿದ್ದಾರೆ. ‘ಪುಷ್ಪ 2’ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ನಿರ್ಮಿಸಿದೆ. ಭಾರತದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ನಿರ್ಮಾಪಕರು ಮತ್ತು ಸುಕುಮಾರ್ ಪ್ರಸ್ತುತ […]

ಮಹಾಕುಂಭಮೇಳದಲ್ಲಿ ಅಲ್ಲು ಅರ್ಜುನ್ ಪತ್ನಿ!

ಪುಷ್ಪ 2 ಸಿನಿಮಾ ರಿಲೀಸ್ ಬಳಿಕ ಟಾಲಿವುಡ್ ನಟ ಅಲ್ಲು ಅರ್ಜುನ್ ಸಾಲು ಸಾಲು ಸಂಕಷ್ಟ ಎದುರಿಸಿದ್ರು. ಪತಿಗಾಗಿ ಪುಷ್ಪರಾಜ್ ರಿಯಲ್ ಪತ್ನಿ ಸ್ನೇಹಾರೆಡ್ಡಿ ಪ್ರಯಾಗ್ರಾಜ್ ತಲುಪಿದ್ದಾರೆ. ಮಹಾಕುಂಭಮೇಳದಲ್ಲಿ ಮಿಂದೆದ್ದು, ಪತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಪುಣ್ಯಸ್ನಾನದ ಬಳಿಕ ಸ್ನೇಹಾ ರೆಡ್ಡಿ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ರು. ಈ ಕೇಸ್ ಅಲ್ಲು ಅರ್ಜುನ್ ಅವರಿಗೆ ಜೈಲು ದರ್ಶನ ಮಾಡಿಸಿತ್ತು. ಅಲ್ಲು ಅರ್ಜುನ್ ಅರೆಸ್ಟ್ ಸುದ್ದಿ ದೊಡ್ಡ ಶಾಕಿಂಗ್ […]

ಅಲ್ಲು ಅರ್ಜುನ್‌ಗೆ ಡೈರೆಕ್ಟ್‌ ಮಾಡ್ತಾ ಇದಾರೆ ಅಟ್ಲಿ

ಪುಷ್ಪ 2 ಸೂಪರ್ ಹಿಟ್ ಆದ್ಮೇಲೆ ಸ್ಟಾರ್ ಡೈರೆಕ್ಟರ್ಸ್ ಎಲ್ಲರೂ ಅಲ್ಲು ಅರ್ಜುನ್ ಹಿಂದೆ ಬೀಳ್ತಿದ್ದಾರೆ. ಅದ್ರಲ್ಲೂ ತಮಿಳು ಡೈರೆಕ್ಟರ್ಸ್ ಜೊತೆ ಅಲ್ಲು ಅರ್ಜುನ್ ಸಿಟ್ಟಿಂಗ್ಸ್ ಮಾಡಿದ್ರು. ಆದ್ರೆ ಯಾವ ಸಿನಿಮಾನೂ ಸೆಟ್ ಆಗ್ಲಿಲ್ಲ. ಅಲ್ಲು ಅರ್ಜುನ್ ತಮಗೆ ಇಷ್ಟ ಆಗೋ, ಕಂಫರ್ಟ್ ಇರೋ ಡೈರೆಕ್ಟರ್ಸ್ ಜೊತೆನೇ ಸಿನಿಮಾ ಮಾಡ್ತಾರೆ. ಈಗ ಅಲ್ಲು ಅರ್ಜುನ್ ಸೂಪರ್ ಹಿಟ್ ಕೊಟ್ಟ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡ್ತಿದ್ದಾರೆ. ತಮಿಳಿನ ಯಂಗ್ ಡೈರೆಕ್ಟರ್ ಅಟ್ಲಿ ಜೊತೆ ಬನ್ನಿ ಸಿನಿಮಾ ಮಾಡ್ತಾರೆ ಅನ್ನೋ […]

‘ಟಾಕ್ಸಿಕ್’ ಲೇಟೆಸ್ಟ್ ಅಪ್‌ಡೇಟ್ ; ಕಿಯಾರಾ ಜೊತೆ ರಾಕಿಭಾಯ್ ರೊಮ್ಯಾನ್ಸ್

  ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಕೋಟಿ ಕೋಟಿ ವೀವ್ಸ್ ಪಡೆದು ದಾಖಲೆ ಬರೆದಿತ್ತು. ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಸದ್ದಿಲ್ಲದೇ ಮತ್ತೆ ಸಿನಿಮಾ ಚಿತ್ರೀಕರಣ ಪುನರಾರಂಭವಾಗಿದೆ ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಒಂದು ತಿಂಗಳ ಕಾಲ ಭರ್ಜರಿ ಚಿತ್ರೀಕರಣ ನಡೆದಿತ್ತು. ಸೆಟ್‌ಗೆ ಯಶ್, ಕಿಯಾರಾ ಹೋಗಿ ಬರುತ್ತಿದ್ದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿತ್ತು. ಸದ್ಯ ಗೋವಾದಲ್ಲಿ ಚಿತ್ರದ ಹಾಡೊಂದರ ಚಿತ್ರೀಕರಣ ನಡೀತಿದೆ ಎನ್ನಲಾಗ್ತಿದೆ. ಯಶ್ ಹಾಗೂ ಕಿಯಾರಾ ಚಿತ್ರೀಕರಣದಲ್ಲಿ […]

ಪದ್ಮಭೂಷಣ ಅನಂತ್ ನಾಗ್‌ಗೆ ಶುಭ ಕೋರಿದ ಅಲ್ಲು ಅರ್ಜುನ್

ಕನ್ನಡದ ನಟ ಅನಂತ ನಾಗ್ ಹಾಗೂ ತೆಲುಗಿನ ನಟ ನಂದಮೂರಿ ಬಾಲಕೃಷ್ಣರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ಇವರಿಬ್ಬರೂ ತಮ್ಮ ತಮ್ಮ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಆದರೆ, ಇದಕ್ಕೆ ಸ್ವತಃ ಅನಂತ ನಾಗ್ ಅವರಿಗೆ ಅಲ್ಲು ಅರ್ಜುನ್ ಶುಭಾಶಯ ತಿಳಿಸಿದ್ದಾರೆ. ಬಾಲಯ್ಯಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮದೇ ಶೈಲಿಯಲ್ಲಿ ಬಾಲಯ್ಯಗೆ ಶುಭಾಶಯ […]

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಅನಾವರಣಗೊಂಡ “#ಪಾರು ಪಾರ್ವತಿ” ಚಿತ್ರದ ಟ್ರೇಲರ್ ಗೆ ಅಭಿಮಾನಿಗಳು ಫಿದಾ .

  ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ ಆಭಿನಯದ ಈ ಚಿತ್ರ ಜನವರಿ 31ರಂದು ತೆರೆಗೆ* . EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ “ಬಿಗ್ ಬಾಸ್” ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ “#ಪಾರು ಪಾರ್ವತಿ” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ […]

ಅವನಿರಬೇಕಿತ್ತು ಚಿತ್ರಕ್ಕೆ ರೊರಿಂಗ್ ಸ್ಟಾರ್ ಸಾಥ್

  ಅಂದಕಾಲತ್ತಿಲ್ಲೆ ಹಾಡು ರಿಲೀಸ್ ಮಾಡಿದ ಶ್ರೀ ಮುರಳಿ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್ ನೋಡಿ ಕೊಂಡಾಡಿದ ಬಘೀರ ಟೈಟಲ್ ನಲ್ಲೆ ಗಮನ ಸೆಳೆದಿದ್ದ “ಅವನಿರಬೇಕಿತ್ತು” ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿದ್ದು. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಅಂದಕಾಲತ್ತಿಲ್ಲೆ ಅನ್ನೋ ರೆಟ್ರೋ ಸ್ಟೈಲ್ ಡ್ಯಾನ್ಸಿಂಗ್ ಡ್ಯುಯೆಟ್  ಹಾಡನ್ನ  ನೋಡಿ ಕೊಂಡಾಡಿದ್ದಾರೆ. ಜೊತೆಗೆ ಇದೊಂದು ಟ್ರೆಂಡ್ ಸೆಟ್ ಮಾಡುತ್ತೆ ನಂಬಿ ಅಂತ ಭವಿಷ್ಯ ನುಡಿದಿದ್ದಾರೆ. ಅಂದಕಾಲತ್ತಿಲ್ಲೆ ಹೊಸತನದ ಸಾಹಿತ್ಯವಿದೆ. ಈಗಾಗಲೆ ಕೇಳುಗರಿಂದ ಸೈ ಎನಿಸಿಕೊಂಡು ಹಾಡು  ಸೋಶಿಯಲ್ ಮಿಡಿಯಾದಲ್ಲಿ […]

Translate »