# Tags

ಬಾಕ್ಸ್ ಆಫೀಸ್ ಸುನಾಮಿ: 48 ಗಂಟೆಗಳಲ್ಲಿ ₹100 ಕೋಟಿ ಬಾಚಿದ ಚಿರಂಜೀವಿ!

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರವು ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರ ಕೇವಲ ಎರಡು ದಿನಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಚಿರಂಜೀವಿ ಅವರ ಅಭಿನಯ, ನಯನತಾರಾ ಉಪಸ್ಥಿತಿ, ಮತ್ತು ಕೌಟುಂಬಿಕ ಮನರಂಜನೆ ಪ್ರೇಕ್ಷಕರನ್ನು ಆಕರ್ಷಿಸಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರವು ಅಭೂತಪೂರ್ವ ಯಶಸ್ಸನ್ನು ಗಳಿಸಿದೆ. ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶಿಸಿದ್ದಾರೆ. […]

ಸಕ್ಸೆಸ್ ಟ್ರ್ಯಾಕ್‌ಗೆ ಮರಳಿದ ಮೆಗಾಸ್ಟಾರ್ ಚಿರಂಜೀವಿ: ‘ಶಂಕರ ವರ ಪ್ರಸಾದ್’ ಗಳಿಕೆ ಎಷ್ಟು?

 ಸತತ ಸೋಲು ಕಂಡಿದ್ದ ಮೆಗಾಸ್ಟಾರ್ ಚಿರಂಜೀವಿಗೆ ಈ ಸಂಕ್ರಾಂತಿ ಹಬ್ಬಕ್ಕೆ ಗೆಲುವು ಧಕ್ಕಿದಂತಿದೆ. ಚಿರಂಜೀವಿ ನಟಿಸಿದ್ದ ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ‘ಮನ ಶಂಕರ ವರ ಪ್ರಸಾದ್ ಗಾರು’ ಮೊದಲ ದಿನ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದೆ. ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಮಾಹಿತಿ ಇಲ್ಲಿದೆ ನೋಡಿ… ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ತೆಲುಗು ಚಿತ್ರರಂಗದ ಲಿಜೆಂಡ್​ಗಳಲ್ಲಿ ಒಬ್ಬರು. ರಾಜಕೀಯಕ್ಕೆ ಹೋಗಿ ಚಿತ್ರರಂಗದಿಂದ ದೂರಾಗಿದ್ದ ಚಿರಂಜೀವಿ ಬಳಿಕ ರಾಜಕೀಯ ತೊರೆದು […]

ಪ್ರಭಾಸ್ ಕ್ರೇಜ್ ತಾರಕಕ್ಕೇರಿತು: ‘ದಿ ರಾಜಾ ಸಾಬ್’ ಪ್ರೀಮಿಯರ್ ಶೋದಲ್ಲಿ ಫ್ಯಾನ್ಸ್ ಗಲಾಟೆ

‘ದಿ ರಾಜಾ ಸಾಬ್’ ಸಿನಿಮಾದ ಪ್ರೀಮಿಯರ್ ಶೋಗ ಟಿಕೆಟ್​​ಗಳನ್ನು ಕೊನೆಯ ಹಂತದಲ್ಲಿ ಬಿಡುಗಡೆ ಮಾಡಲಾಯ್ತು. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಯ್ತು. ಇದೇ ಕಾರಣಕ್ಕೆ ‘ದಿ ರಾಜಾ ಸಾಬ್’ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನವಾದ ಕೆಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಗಲಾಟೆ ಮಾಡಿದ್ದು, ಚಿತ್ರಮಂದಿರಗಳಿಗೆ ಹಾನಿ ಮಾಡಿದ್ದಾರೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇಂದು (ಜನವರಿ 09) ಬಿಡುಗಡೆ ಆಗಿದೆ. ಸಿನಿಮಾದ ಪ್ರೀಮಿಯರ್ ಶೋಗಳು ನಿನ್ನಿ (ಜನವರಿ 08) ರಾತ್ರಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಪ್ರದರ್ಶನವಾಗಿವೆ. ಆದರೆ […]

ಮದುವೆ ನಂತರ ಹೊಸ ಅವತಾರದಲ್ಲಿ ಸಮಂತಾ; ಫಸ್ಟ್ ಲುಕ್ ರಿಲೀಸ್

ಎರಡು ವರ್ಷಗಳ ಗ್ಯಾಪ್ ಬಳಿಕ ನಟಿ ಸಮಂತಾ ರುತ್ ಪ್ರಭು ಅವರು ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಅವರು ನಟಿಸಿದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಜನವರಿ 9ರಂದು ಈ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಲಿದೆ. ಸಿನಿಮಾ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ರುತ್ ಪ್ರಭು ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ […]

‘ಪುಷ್ಪ 3’ ಇಲ್ಲ, ಸುಕುಮಾರ್ ಹೊಸ ಸ್ಟಾರ್ ಜೊತೆ ಕೈ ಜೋಡಿಸಿದ್ದಾರೆ

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಭಾರಿ ಯಶಸ್ಸು ಪಡೆದಿದೆ. ಚಿತ್ರದ ಅಂತ್ಯದಲ್ಲಿ ‘ಪುಷ್ಪ 3’ ಬರಲಿದೆ ಎಂಬ ಸೂಚನೆ ಇದ್ದರೂ, ಅಭಿಮಾನಿಗಳ ನಿರೀಕ್ಷೆಯಂತೆ ‘ಪುಷ್ಪ 3’ ಪ್ರಾಜೆಕ್ಟ್ ಮುಂದುವರಿಯುತ್ತಿಲ್ಲ. ಬದಲಾಗಿ, ಸುಕುಮಾರ್ ತೆಲುಗು ಸಿನೆಮಾದ ಮತ್ತೊಬ್ಬ ಸ್ಟಾರ್ ನಟನ ಜೊತೆ ಹೊಸ ಚಿತ್ರಕತೆ ಮೇಲೆ ಕೆಲಸ ಮಾಡುತ್ತಿದ್ದಾರೆ. ‘ಪುಷ್ಪ 2’ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ನಿರ್ಮಿಸಿದೆ. ಭಾರತದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ನಿರ್ಮಾಪಕರು ಮತ್ತು ಸುಕುಮಾರ್ ಪ್ರಸ್ತುತ […]

ತೆಲುಗು ಇಂಡಸ್ಟ್ರಿಯಲ್ಲೂ ಜರ್ನಿ ಶುರು ಮಾಡಿದ ಸಪ್ತಮಿ ಗೌಡ

ಕಾಂತಾರ ಮೂಲಕ ಭಾಷೆಯ ಭೇದ ಭಾವ ಇಲ್ಲದೇ, ಎಲ್ಲ ವರ್ಗದ ಜನರ ಹೃದಯವನ್ನ ಗೆದ್ದ ಸಪ್ತಮಿಗೌಡ ಯುವ ಸಿನಿಮಾದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಮೋಡಿಯನ್ನ ಮಾಡಿದರು. ಇವತ್ತು ಕೂಡ ಯುವ ಚಿತ್ರದಲ್ಲಿ ಸಪ್ತಮಿ ಅವರ ಸಹಜಾಭಿನಯವನ್ನ ಅನೇಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಪ್ತಮಿ ಗೌಡ ದಕ್ಷಿಣದ ಬೇರೆ ರಾಜ್ಯಗಳತ್ತ ದಂಡೆತ್ತಿ ಹೊರಟಿದ್ದಾರೆ.         ಇದನ್ನೂ ಓದಿ :Priyamani :ಪ್ರಿಯಾಮಣಿ ಪಡೆದ ಮೊದಲ ಸಂಬಳ ಎಷ್ಟು ಗೊತ್ತಾ?   ಸಪ್ತಮಿ ಗೌಡ ಅವರು ‘ಪಾಪ್ಕಾರ್ನ್ […]

ಪುಷ್ಪ 2 ಬಗ್ಗೆ ಅಪ್ ಡೇಟ್ ಕೊಟ್ಟ ಅಲ್ಲು ಅರ್ಜುನ್

ಪುಷ್ಪ 2 ಚಿತ್ರೀಕರಣ ಶುರುವಾಗಿ ಎಷ್ಟೋ ದಿನಗಳಾಗಿವೆ. ಆದರೆ ಚಿತ್ರದ ಬಗ್ಗೆ ನಾಯಕ ನಟ ಅಲ್ಲು ಅರ್ಜುನ್ ಅಪ್ ಡೇಟ್ ಒಂದನ್ನು ಕೊಟ್ಟಿದ್ದಾರೆ. ಇದನ್ನೂ ಓದಿ ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ ಅಲ್ಲು ಅರ್ಜುನ್ ಗೆ ರಾಷ್ಟ್ರಪ್ರಶಸ್ತಿ ಗಳಿಸಿಕೊಟ್ಟ ಸಿನಿಮಾ ಪುಷ್ಪ 1. ಇದರ ಎರಡನೇ ಭಾಗದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಚಿತ್ರೀಕರಣವೂ ನಡೆಯುತ್ತಿದೆ. ಆದರೆ ಎಲ್ಲಿಯವರೆಗೆ ಬಂತು ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದನ್ನೂ ಓದಿ  ಜೀವನದ ರಹಸ್ಯ ಬಹಿರಂಗಪಡಿಸಿದ ದೀಪಿಕಾ ಪಡುಕೋಣೆ.. […]

Translate »