ನೆನಪಿನ ಶಕ್ತಿ ಕಳೆದುಕೊಂಡ ʻಸಿಂಹಾದ್ರಿ ಸಿಂಹʼ ವಿಷ್ಣುವರ್ಧನ್ ಅತ್ತಿಗೆ ಭಾನುಪ್ರಿಯಾ..!
ನಿಮಗೆಲ್ಲಾ ಭಾನುಪ್ರಿಯಾ ಚೆನ್ನಾಗಿ ನೆನಪಿರಬೇಕು ಅಲ್ವಾ. ಸಿಂಹಾದ್ರಿಯ ಸಿಂಹ ಸಿನಿಮಾದಲ್ಲಿ ದೊಡ್ಡ ವಿಷ್ಣುವರ್ಧನ್ ಅವರಿಗೆ ಹೆಂಡತಿಯಾಗಿ, ತಮ್ಮ ವಿಷ್ಣುವರ್ಧನ್ ಅವರಿಗೆ ಅತ್ತಿಗೆಯಾಗಿ, ಮೀನಾ ಅವರಿಗೆ ಸಖತ್ತಾಗಿ ಕ್ಲಾಸ್ ತೆಗೆದುಕೊಂಡವರು. ಆಗ ಟಾಪ್ ಹೀರೋಯಿನ್, ಆದ್ರೆ ಈಗ ನೆನಪಿನ ಶಕ್ತೊಯೇ ಇಲ್ಲದವರಾಗಿದ್ದಾರೆ. ಕನ್ನಡ, ತೆಲುಗು,ತಮಿಳು,ಹಿಂದಿ ಮತ್ತು ಮಲಯಾಳಂ ಭಾಷೆಗಳ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಈ ನಟಿ ಅಭಿನಯಕ್ಕೆ ಮಾತ್ರವಲ್ಲದೇ ನೃತ್ಯದಿಂದಲೂ ಮೋಡಿ ಮಾಡಿದವರು. ಪ್ರಸಿದ್ಧ ಕೂಚುಪುಡಿ ನೃತ್ಯಗಾರ್ತಿಯೂ ಆಗಿರುವ ಭಾನುಪ್ರಿಯಾ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. […]