ಗೌತಮ್ – ಭೂಮಿಕಾ ಡೇಟಿಂಗ್ ಮೂಡಲ್ಲಿದ್ರೆ : ಪಾರ್ಥ-ಅಪ್ಪಿ ವಿರುದ್ದ ಅಶ್ವಿನಿ ಕಿಡಿ
ಗೌತಮ್ ಮತ್ತು ಭೂಮಿಕಾ ಸದ್ಯ ಕಿರುತೆರೆಯ ಮೋಸ್ಟ್ ರೊಮ್ಯಾಂಟಿಕ್ ಹಾಗೂ ಜನಪ್ರಿಯ ಜೋಡಿ. ಭೂಮಿಕಾಗೆ ತನ್ನ ಮೊದಲ ಸಂಬಳ ಸಿಕ್ಕಿದೆ. ಮದ್ವೆ ಆದ ನಂತರ ಸಿಕ್ಕಿರೋ ಮೊದಲ ಸಂಬಳವನ್ನು ಗಂಡನಿಗೆ ನೀಡಿ, ಅದರಲ್ಲಿ 3 ಸಾವಿರ ತೆಗೆದುಕೊಂಡು ಭೂಮಿಕಾ ತನ್ನ ಪತಿ ಗೌತಮ್‌ಗೆ ಪಾರ್ಟಿ ಕೊಡಿಸೋದಕ್ಕೆ ಕರೆದುಕೊಂಡು ಹೋಗ್ತಿದ್ದಾಳೆ. ಭೂಮಿಕಾ, ಗೌತಮ್ ಅವರನ್ನು ಕರೆದುಕೊಂಡು ಆಟೋಗೆ ಕಾಯ್ತಾ, ಇದು ನಮ್ಮ ಫಸ್ಟ್ ಡೇಟಿಂಗ್ ಅಂತಾಳೆ, ಆವಾಗ ಗೌತಮ್, ಮದ್ವೆ ಆದ್ಮೇನೆ ಇನ್ಯಾವ ಡೇಟಿಂಗ್ ಅಂತ ಕೇಳ್ತಾರೆ. […]