ರಾಮ ಮಂದಿರ ಉದ್ಘಾಟನೆ ದಿನವೇ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್, ಕುತೂಹಲ ಕೆರಳಿಸಿದ “ಶ್ರೀ ರಾಮ್, ಜೈ ಹನುಮಾನ್” ಪೋಸ್ಟರ್
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿದೆ. ಎಲ್ಲರೂ ರಾಮ ನಾಮ ಸ್ಮರಣೆ ಮಾಡುವ ಶುಭ ಘಳಿಗೆಯಲ್ಲಿ “ಶ್ರೀ ರಾಮ್, ಜೈ ಹನುಮಾನ್” ಎಂಬ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಲಿರುವ “ಶ್ರೀ ರಾಮ್, ಜೈ ಹನುಮಾನ್” ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಮ ಮಂದಿರ ಉದ್ಘಾಟನೆಯ ಸಮಯಕ್ಕೆ (12.33) ಅನಾವರಣಗೊಂಡಿರುವುದು ಹಿಂದೂ ಧರ್ಮದ ಭಕ್ತಗಣಕ್ಕೆ […]