# Tags

ರಜನಿಕಾಂತ್ ಸಿನಿಮಾದಿಂದ ಬಾಲಕೃಷ್ಣ ಹಿಂದೆ ಸರಿಯಲು ಕಾರಣವೇನು?

ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಹೃದಯದಲ್ಲಿ ಮತ್ತೆ ಒಮ್ಮೆ ‘ಜೈಲರ್’ ಆಗಿ ಕಾಣಿಸಿಕೊಳ್ಳಲು ಕಾತರತೆಯಿದೆ. ಲೊಕೆಶ್ ಕನಕರಾಜ್ ನಿರ್ದೇಶನದ ‘ಕೂಲಿ’ ನಿರೀಕ್ಷೆಯ ಮಟ್ಟ ತಲುಪದ ಬಳಿಕ, ಪ್ರೇಕ್ಷಕರು ಈಗ ‘ಜೈಲರ್ 2’ ಚಿತ್ರದತ್ತ ಹೆಚ್ಚಿನ ಆಸಕ್ತಿಯಿಂದ ಕಾಯುತ್ತಿದ್ದಾರೆ. ನೇಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರವು ಆಕ್ಷನ್ ಮತ್ತು ಅಚ್ಚರಿಗಳಿಂದ ತುಂಬಿರಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ರಜನಿಕಾಂತ್ ಹಲವಾರು ದೃಶ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಚಿತ್ರೀಕರಣ ಸ್ಥಳಗಳಲ್ಲಿ ಸಾವಿರಾರು ಅಭಿಮಾನಿಗಳು […]

ಆರಾಧನಾ ‘ನೆಕ್ಸ್‌ಟ್ ಲೆವೆಲ್’ : “ಯಾವ ಪಾತ್ರಕ್ಕೂ ನಾವು ಬ್ರಾಂಡ್ ಆಗಬಾರದು, ನಾವೇ ಬ್ರಾಂಡ್ ಆಗಬೇಕು”

‘ಕಾಟೇರ’ ಚಿತ್ರದ ನಂತರ ಆರಾಧನಾ ರಾಮ್ ಯಾವತ್ತೂ ಸುದ್ದಿಯಲ್ಲಿ ಇರಲಿಲ್ಲ. ಅವರ ಮುಂದಿನ ಹೆಜ್ಜೆ ಬಗ್ಗೆ ಊಹಾಪೋಹಗಳು ನಡೆಯುತ್ತಲೇ ಇವೆ. ಈಗ ಕೊನೆಗೂ ಅವರು ತಮ್ಮ ಎರಡನೇ ಚಿತ್ರವನ್ನು ಘೋಷಿಸಿದ್ದಾರೆ — ‘ನೆಕ್ಸ್‌ಟ್ ಲೆವೆಲ್’, ಉಪೇಂದ್ರ ಅವರ ಜೊತೆಯಲ್ಲಿ! ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ನಿರ್ಮಾಪಕ ತರುಣ್ ಶಿವಪ್ಪ ಅವರ ಸಂಯೋಜನೆಯ ಚಿತ್ರ ಇದು. “ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ” “ಎಲ್ಲೂ ಮಾಯವಾಗಿರಲಿಲ್ಲ,” ಎನ್ನುತ್ತಾರೆ ಆರಾಧನಾ.“ನಾನು ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದೆ. ‘ನೆಕ್ಸ್‌ಟ್ ಲೆವೆಲ್’ ಕಥೆ ಕೇಳುತ್ತಿದ್ದಂತೆಯೇ ತಕ್ಷಣ ಒಪ್ಪಿಕೊಂಡೆ. […]

ನಾಗ ಚೈತನ್ಯ–ಶೋಭಿತಾ ನಡುವೆ ಮಾತು ಬಿಡಲು ಸಾಯಿ ಪಲ್ಲವಿ ಕಾರಣ?

ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ ಅವರ ದಾಂಪತ್ಯದ ನಡುವೆ ಕೆಲ ದಿನಗಳ ಕಾಲ ಸಣ್ಣ ಬಿರುಕು ಉಂಟಾಗಿತ್ತಂತೆ! ಅದಕ್ಕೂ ಕಾರಣ ಯಾರನ್ನೆಂದರೆ — ನಟಿ ಸಾಯಿ ಪಲ್ಲವಿ! ಖ್ಯಾತ ನಟ ಜಗಪತಿ ಬಾಬು ನಡೆಸುವ ಟಾಕ್ ಶೋನಲ್ಲಿ ಭಾಗವಹಿಸಿದ್ದ ನಾಗ ಚೈತನ್ಯ, ತಮ್ಮ ವೈಯಕ್ತಿಕ ಜೀವನದ ಬಗ್ಗೆ candid ಆಗಿ ಮಾತನಾಡಿದ್ದಾರೆ. ಸಮಂತಾ ಜೊತೆ ವಿಚ್ಛೇದನದ ಬಳಿಕ, ಕಳೆದ ವರ್ಷ ಶೋಭಿತಾ ಅವರನ್ನು ವಿವಾಹವಾದ ಚೈತನ್ಯ, ತಮ್ಮ ಲವ್ ಸ್ಟೋರಿ ಬಗ್ಗೆ […]

ಕನ್ನಡದ ಹೆಮ್ಮೆ: ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ 509 ಕೋಟಿ ಗಡಿ ದಾಟಿದೆ!

ಹೊಂಬಾಳೆ ಫಿಲ್ಮ್ಸ್‌ನ “ಕಾಂತಾರ ಅಧ್ಯಾಯ 1” ಚಿತ್ರವು ಬಿಡುಗಡೆಯಾದ ಅಕ್ಟೋಬರ್ 2, 2025ರಿಂದ ಇಲ್ಲಿಯವರೆಗೆ ವಿಶ್ವಾದ್ಯಂತ 509 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ.ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಅದರ ಅದ್ಭುತ ಕಥಾಹಂದರ, ನಮ್ಮ ನೆಲದ ಸಂಸ್ಕೃತಿಯ ವಾಸ್ತವಿಕ ಚಿತ್ರಣ ಮತ್ತು ತಾಂತ್ರಿಕ ಉತ್ಕೃಷ್ಟತೆಗಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸರಿಸಾಟಿಯಿಲ್ಲದ ಪ್ರಶಂಸೆ ಗಳಿಸಿದೆ. ಈ ಚಿತ್ರವು ದೇಶಾದ್ಯಂತ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು, […]

ಮೋಹನ್ ಲಾಲ್ ಅಭಿನಯದ ‘ವೃಷಭ’ ನವೆಂಬರ್ 6ರಂದು ಗ್ರ್ಯಾಂಡ್ ರಿಲೀಸ್‌ಗೆ ಸಜ್ಜು

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ವೃಷಭ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ನವೆಂಬರ್ 6ಕ್ಕೆ ವಿಶ್ವಾದ್ಯಂತ ವೃಷಭ ಚಿತ್ರ ತೆರೆಗೆ ಬರ್ತಿದೆ. ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಸಿನಿಮಾ ‘ವೃಷಭ’ ಸಿನಿಮಾ ನಿರ್ಮಾಣವಾಗಿದ್ದು ಇನ್ನುಳಿದ ಭಾಷೆಗಳಿಗೆ ಡಬ್‌ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಚಿತ್ರ ರಿಲೀಸ್ ಬಗ್ಗೆ ಮಾತನಾಡಿದ ನಿರ್ಮಾಪಕಿ ಏಕ್ತಾ ಆರ್ ಕಪೂರ್ , ನಮ್ಮ ವೃಷಭ ಸಿನಿಮಾ ನವೆಂಬರ್ 6 ರಂದು ಬಿಡುಗಡೆಯಾಗಲಿದೆ ಎಂದು […]

‘ಲೋಕಃ 2’ ಟೀಸರ್‌ನಲ್ಲಿ ದುಲ್ಕರ್ & ಟೊವಿನೊ, ಜೊತೆಗೆ ಮಿಂಚಿದ ವಿಲನ್

ಇತ್ತೀಚೆಗಷ್ಟೇ ಬಿಡುಗಡೆಯಾದ ಮಲಯಾಳಂ ಸೂಪರ್ ಹೀರೋ ಸಿನಿಮಾ ‘ಲೋಕಃ’ ಭಾರೀ ಯಶಸ್ಸು ಕಂಡಿದೆ. ಕೇವಲ 30 ಕೋಟಿ ಬಜೆಟ್‌ನಲ್ಲಿ ದುಲ್ಕರ್ ಸಲ್ಮಾನ್ ನಿರ್ಮಿಸಿದ್ದ ಈ ಸಿನಿಮಾ ಈಗಾಗಲೇ 200 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ದಾಟಿ, ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯಾಗಿ ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿಯಾಗಿ ಓಡುತ್ತಿರುವಾಗಲೇ, ಇಂದು (ಸೆಪ್ಟೆಂಬರ್ 27) ಎರಡನೇ ಭಾಗ ‘ಲೋಕಃ 2’ ಅಧಿಕೃತವಾಗಿ ಘೋಷಣೆಯಾಗಿದೆ. ಮೊದಲ ಭಾಗದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿ ಮಿಂಚಿದ್ದರೂ, […]

ಜಗನ್ ವಿಷಯದಲ್ಲಿ ಅಸೆಂಬ್ಲಿಯಲ್ಲಿ ಚಿರಂಜೀವಿ ವಿರುದ್ಧ ಬಾಲಯ್ಯ ಅಸಮಾಧಾನ

ತೆಲುಗು ಸಿನಿರಂಗದ ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಕುಟುಂಬದ ನಂದಮೂರಿ ಬಾಲಕೃಷ್ಣ ನಡುವಿನ ವೈಮನಸ್ಯ ಹೊಸದೇನಲ್ಲ. ದಶಕಗಳಿಂದಲೇ ಇರುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಎರಡು ಕುಟುಂಬಗಳ ನಡುವೆ ಸ್ನೇಹದ ವಾತಾವರಣ ನಿರ್ಮಾಣವಾಗಿತ್ತು. ಪವನ್ ಕಲ್ಯಾಣ್ ಟಿಡಿಪಿಗೆ ಕೈ ಜೋಡಿಸಿದ ನಂತರ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದುದೂ ಈ ಸ್ನೇಹಕ್ಕೆ ಬಲ ತುಂಬಿತ್ತು. ಚಿರಂಜೀವಿ ಮತ್ತು ಬಾಲಯ್ಯ ಕೂಡಾ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಸ್ನೇಹದ ಬಣ್ಣ ಹೆಚ್ಚು ದಿನ ಉಳಿಯಲಿಲ್ಲ. ಆಂಧ್ರ ಅಸೆಂಬ್ಲಿಯಲ್ಲಿ ನಡೆದ […]

‘ವೃಷಭ’ ಚಿತ್ರದಲ್ಲಿ ಸಂಭಾವನೆ ನೀಡದೇ ಮೋಸ: ಕನ್ನಡ ನಟ ರಾಘವೇಂದ್ರ ಆರೋಪ

ಬೆಂಗಳೂರು: ನಂದ ಕಿಶೋರ್ ನಿರ್ದೇಶನದಲ್ಲಿ ಮೋಹನ್ ಲಾಲ್ ಅಭಿನಯದ ‘ವೃಷಭ’ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಇತ್ತೀಚೆಗೆ ಟೀಸರ್ ಬಿಡುಗಡೆ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮತ್ತು ತಂತ್ರಜ್ಞರು ಸಹ ಕೆಲಸ ಮಾಡಿದ್ದಾರೆ. ನಟ ರಾಘವೇಂದ್ರ ಎಸ್. ಹೊಂಡದಕೇರಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಆರೋಪಿಸಿದ್ದಾರೆ: “ನಾನು ಚಿತ್ರದಲ್ಲಿ ಬಹಳ ಪರಿಶ್ರಮ ಮಾಡಿದ್ದೇನೆ. ಐದು ಗಂಟೆಗಳ ಮೇಕಪ್ ಹಾಕಿಕೊಂಡು ಬೆಳಗಿನ ಜಾವದವರೆಗೂ ಶೂಟಿಂಗ್ ಮಾಡಿದೆ. ಆದರೆ ಕೊನೆಗೆ ನನ್ನ ಸಂಭಾವನೆ ಕೊಡಲಿಲ್ಲ, […]

ಟ್ವಿಸ್ಟ್ ಕೊಟ್ಟ ದಳಪತಿ ವಿಜಯ್: ದೀಪಾವಳಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್!

ದಳಪತಿ ವಿಜಯ್ ಈಗ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದ ಪ್ರಚಾರದ ಜೊತೆ ಜೊತೆಗೆ, ಅಭಿಮಾನಿಗಳನ್ನು ಮರೆಯಲಿಲ್ಲ – ದೀಪಾವಳಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಯೋಜನೆ ರೂಪಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ “ಜನನಾಯಕನ್ (Jana Nayagan)” ಚಿತ್ರದ ಮೂಲಕ ಚಿತ್ರಮಂದಿರಗಳಲ್ಲಿ ಬಲವಾದ ಪ್ರವೇಶ ಮಾಡಲಿದ್ದಾರೆ. ಚಿತ್ರದ ಆಡಿಯೋ ರಿಲೀಸ್ ಡಿಸೆಂಬರ್ 27 ರಂದು ಮಲೇಶಿಯಾದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ, ವಿಶೇಷವಾಗಿ ವಿಜಯ್ ಅವರ ಧ್ವನಿಯಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡುವುದಾಗಿ ಮಾಹಿತಿ ಲಭ್ಯವಾಗಿದೆ. ಟಿವಿಕೆ […]

ಪವನ್ ಕಲ್ಯಾಣ್ ಎದುರು ಖಡಕ್ ವಿಲನ್ ಆಗಿ ಭಜರಂಗಿ ಲೋಕಿ!

ಸೌರವ್ ಲೋಕೇಶ್ ಹೆಸರು ಕೇಳಿರೋದು ಕೆಲವರಿಗೆ ಮಾತ್ರ ಗೊತ್ತು. ಆದರೆ ‘ಭಜರಂಗಿ ಲೋಕಿ’ ಅಂದರೆ – ಅದೇನೋ ವಿಶೇಷ! ಭಜರಂಗಿ ಚಿತ್ರದ ಮೂಲಕ ತಾನು ಯಾರಪ್ಪ ಈ ನಟ? ಅಂತ ಕೇಳುವಂತೆ ಮಾಡಿದ ಕಲಾವಿದ, ಇಂದಿಗೂ ಆ ಹೆಸರು ಮೂಲಕವೇ ಜನಮನದಲ್ಲಿ ಉಳಿದಿದ್ದಾರೆ. ಅವರ ಅದ್ಭುತ ಅಭಿನಯ ಈಗ ಟಾಲಿವುಡ್ ಕಡೆಗೂ ತಲುಪಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ “ಓಜಿ” ಸಿನಿಮಾದಲ್ಲಿ ಭಜರಂಗಿ ಲೋಕಿ ಖಡಕ್ ಹಾಗೂ ಸ್ಟೈಲಿಷ್ ವಿಲನ್ ಆಗಿ ಅಬ್ಬರಿಸಲು […]

Translate »