ದೀಪಿಕಾ ಆರಾಧ್ಯ ನಟಿಯಾಗುವುದಕ್ಕೆ ಕಾರಣ ಆ ಒಂದು ಡಬ್‌ಸ್ಮ್ಯಾಶ್..!
ಕನ್ನಡದ ಭರವಸೆಯ ನಟಿಯಾಗಿ ಮಿನುಗುತ್ತಿರುವ ಕಲಾವಿದೆ. ಇವರು ಸಿನಿಮಾಗೆ ಹೋಗಬೇಕು, ನಟಿಯಾಗಬೇಕು ಅಂತಾ ಏನೂ ಅಂದುಕೊಂಡವರಲ್ಲ. ಏನೋ ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿಯಬೇಕಾದರೆ ಎಲ್ಲರಿಗೂ ಅವಕಾಶ ಸಿಗುವ ಹಾಗೆ ಇವರಿಗೂ ಕಲ್ಚರಲ್ ಆಕ್ಟಿವಿಟೀಸ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಲ್ಲಿ ಹಾಡು, ನೃತ್ಯ, ನಟನೆ ಎಲ್ಲವನ್ನು ಮಾಡಿ ಬಹುಮಾನವನ್ನೂ ಗಳಿಸಿಕೊಂಡರು. ಶಾಲೆ ಮುಗಿದು ಮುಂದೆ ಕಾಲೇಜ್‌ಗೆ ಹೋದಾಗ ಕಾಲೇಜ್ ಕ್ಯಾಂಪಸ್‌ನಲ್ಲಿ ಡಬ್‌ಸ್ಮ್ಯಾಶ್ಗಳ ಬಗ್ಗೆ ಗೆಳತಿಯರ ಜೊತೆ ಮಾತನಾಡುತ್ತಾ ಇರಬೇಕಾದರೆ, ನಾವೂ ಒಂದು ಡಬ್‌ಸ್ಮ್ಯಾಶ್ ವೀಡಿಯೋ ಮಾಡುವಾ ಅಂತಾ ಮಾಡಿದರು. ಹಾಗೇ […]