# Tags

ಗಾಸಿಪ್? ನೋ ಟೆನ್ಷನ್! ‘ದಿ ರಾಜಾ ಸಾಬ್’ ಜನವರಿ 9ಕ್ಕೆ ತೆರೆಗೆ ಬರಲಿದೆ

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಟ್ರೇಲರ್ ಬಿಡುಗಡೆಯ ನಂತರ ಭಾರತದಲ್ಲಿಯಷ್ಟೇ ಅಲ್ಲ, ಜಗತ್ತಿನ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಚಿತ್ರಕ್ಕೆ ಸಂಬಂಧಿಸಿದ ಗಾಸಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದು, ಚಿತ್ರತಂಡವು ಸ್ಪಷ್ಟವಾಗಿ ಅವುಗಳನ್ನು ತಳ್ಳಿ ಹಾಕಿದೆ. ಸಂಚಾರಿಸಿದ ಗಾಸಿಪ್ ಪ್ರಕಾರ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರತಂಡದ ಸ್ಪಷ್ಟನೆ ಪ್ರಕಾರ, ಯಾವುದೇ ವಿಳಂಬವಿಲ್ಲದೆ, ಸಿನಿಮಾ ಜನವರಿ 9 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಪೋಸ್ಟ್ […]

ಕಾಂತಾರ ಚಾಪ್ಟರ್ 1 ಸಕ್ಸಸ್ ಬೆನ್ನಲ್ಲೇ ಮುಂಬೈ ನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ

‘ಕಾಂತಾರ ಅಧ್ಯಾಯ 1’ (Kantara Chapter 1) ಚಿತ್ರ ಯಶಸ್ಸಿನ ಸಂಭ್ರಮದಲ್ಲಿರುವ ರಿಷಬ್ ಶೆಟ್ಟಿ ಇದೀಗ ದೇವರ ಧಾಮಕ್ಕೆ ತೆರಳಿದ್ದಾರೆ. ದೇಶ-ವಿದೇಶಗಳಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆಗಳ ಮಳೆ ಸುರಿಸುತ್ತಿರುವ ಈ ಸಿನಿಮಾ ಈಗಾಗಲೇ ₹500 ಕೋಟಿ ಕ್ಲಬ್ ಸೇರಿದೆ. ಈ ಮಹಾ ಯಶಸ್ಸಿನ ಹಿನ್ನೆಲೆಯಲ್ಲಿ ರಿಷಬ್ ಮತ್ತು ನಿರ್ಮಾಪಕರು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಿಳಿ ಶರ್ಟ್ ಹಾಗೂ ಮುಂಡು ತೊಟ್ಟು ದೇವಾಲಯಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ಅಭಿಮಾನಿಗಳ ಗಮನ ಸೆಳೆದರು. […]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ದಿ ಡೆವಿಲ್”ಚಿತ್ರದ “ಒಂದೆ ಒಂದು ಸಲ” ಹಾಡಿಗೆ ಅಭಿಮಾನಿಗಳು ಫಿದಾ

ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ “ಒಂದೆ ಒಂದು ಸಲ” ಎಂಬ ಸುಮಧುರ ಯುಗಳ ಗೀತೆ “ಸರಿಗಮಪ” ಮ್ಯೂಸಿಕ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಅವರು ಹಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂತು ಮಾಸ್ಟರ್ ನೃತ್ಯ […]

ನಾಗ ಚೈತನ್ಯ–ಶೋಭಿತಾ ನಡುವೆ ಮಾತು ಬಿಡಲು ಸಾಯಿ ಪಲ್ಲವಿ ಕಾರಣ?

ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ ಅವರ ದಾಂಪತ್ಯದ ನಡುವೆ ಕೆಲ ದಿನಗಳ ಕಾಲ ಸಣ್ಣ ಬಿರುಕು ಉಂಟಾಗಿತ್ತಂತೆ! ಅದಕ್ಕೂ ಕಾರಣ ಯಾರನ್ನೆಂದರೆ — ನಟಿ ಸಾಯಿ ಪಲ್ಲವಿ! ಖ್ಯಾತ ನಟ ಜಗಪತಿ ಬಾಬು ನಡೆಸುವ ಟಾಕ್ ಶೋನಲ್ಲಿ ಭಾಗವಹಿಸಿದ್ದ ನಾಗ ಚೈತನ್ಯ, ತಮ್ಮ ವೈಯಕ್ತಿಕ ಜೀವನದ ಬಗ್ಗೆ candid ಆಗಿ ಮಾತನಾಡಿದ್ದಾರೆ. ಸಮಂತಾ ಜೊತೆ ವಿಚ್ಛೇದನದ ಬಳಿಕ, ಕಳೆದ ವರ್ಷ ಶೋಭಿತಾ ಅವರನ್ನು ವಿವಾಹವಾದ ಚೈತನ್ಯ, ತಮ್ಮ ಲವ್ ಸ್ಟೋರಿ ಬಗ್ಗೆ […]

ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ನಿರ್ಮಾಪಕ ಉಮಾಪತಿ ಗೌಡ ಹೊಸ ಸಿನಿಮಾ ಘೋಷಣೆ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ 37ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಬೆಂಗಳೂರು ಕೆ.ಆರ್. ರಸ್ತೆಯ ತಮ್ಮ ನಿವಾಸದ ಮುಂದೆ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಸಂಭ್ರಮ ಸುತ್ತಮುತ್ತಲಿನ ಪ್ರದೇಶವನ್ನೇ ಉತ್ಸವದ ವಾತಾವರಣಕ್ಕೆ ತಲುಪಿಸಿತ್ತು. ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ, ಅನ್ನದಾನ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ದಾನ ಸೇರಿದಂತೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ದೂರದೂರಿನಿಂದ ಆಗಮಿಸಿದ್ದ ಅಭಿಮಾನಿಗಳು, ಆಪ್ತರು ಹಾಗೂ ಕುಟುಂಬಸ್ಥರು ಧ್ರುವ […]

ಜಗನ್ ವಿಷಯದಲ್ಲಿ ಅಸೆಂಬ್ಲಿಯಲ್ಲಿ ಚಿರಂಜೀವಿ ವಿರುದ್ಧ ಬಾಲಯ್ಯ ಅಸಮಾಧಾನ

ತೆಲುಗು ಸಿನಿರಂಗದ ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಕುಟುಂಬದ ನಂದಮೂರಿ ಬಾಲಕೃಷ್ಣ ನಡುವಿನ ವೈಮನಸ್ಯ ಹೊಸದೇನಲ್ಲ. ದಶಕಗಳಿಂದಲೇ ಇರುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಎರಡು ಕುಟುಂಬಗಳ ನಡುವೆ ಸ್ನೇಹದ ವಾತಾವರಣ ನಿರ್ಮಾಣವಾಗಿತ್ತು. ಪವನ್ ಕಲ್ಯಾಣ್ ಟಿಡಿಪಿಗೆ ಕೈ ಜೋಡಿಸಿದ ನಂತರ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದುದೂ ಈ ಸ್ನೇಹಕ್ಕೆ ಬಲ ತುಂಬಿತ್ತು. ಚಿರಂಜೀವಿ ಮತ್ತು ಬಾಲಯ್ಯ ಕೂಡಾ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಸ್ನೇಹದ ಬಣ್ಣ ಹೆಚ್ಚು ದಿನ ಉಳಿಯಲಿಲ್ಲ. ಆಂಧ್ರ ಅಸೆಂಬ್ಲಿಯಲ್ಲಿ ನಡೆದ […]

‘ವೃಷಭ’ ಚಿತ್ರದಲ್ಲಿ ಸಂಭಾವನೆ ನೀಡದೇ ಮೋಸ: ಕನ್ನಡ ನಟ ರಾಘವೇಂದ್ರ ಆರೋಪ

ಬೆಂಗಳೂರು: ನಂದ ಕಿಶೋರ್ ನಿರ್ದೇಶನದಲ್ಲಿ ಮೋಹನ್ ಲಾಲ್ ಅಭಿನಯದ ‘ವೃಷಭ’ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಇತ್ತೀಚೆಗೆ ಟೀಸರ್ ಬಿಡುಗಡೆ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮತ್ತು ತಂತ್ರಜ್ಞರು ಸಹ ಕೆಲಸ ಮಾಡಿದ್ದಾರೆ. ನಟ ರಾಘವೇಂದ್ರ ಎಸ್. ಹೊಂಡದಕೇರಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಆರೋಪಿಸಿದ್ದಾರೆ: “ನಾನು ಚಿತ್ರದಲ್ಲಿ ಬಹಳ ಪರಿಶ್ರಮ ಮಾಡಿದ್ದೇನೆ. ಐದು ಗಂಟೆಗಳ ಮೇಕಪ್ ಹಾಕಿಕೊಂಡು ಬೆಳಗಿನ ಜಾವದವರೆಗೂ ಶೂಟಿಂಗ್ ಮಾಡಿದೆ. ಆದರೆ ಕೊನೆಗೆ ನನ್ನ ಸಂಭಾವನೆ ಕೊಡಲಿಲ್ಲ, […]

ಕಾಂತಾರ: ಚಾಪ್ಟರ್ 1 ಟ್ರೇಲರ್ ರಿಲೀಸ್ ಸ್ಟಂಟ್, ದೈವಿಕ ಕಥೆ ಮತ್ತು ಅದ್ದೂರಿ ದೃಶ್ಯಗಳ ಸಂಭ್ರಮ

ಪ್ರೇಕ್ಷಕರು ಬಹುಪ್ರೀತಿಸಿದ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ದಸರಾ ಪ್ರಯುಕ್ತ ತೆರೆಗೆ ಬರುತ್ತಿದೆ. 2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾದ ಮೂಲ ‘ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿತ್ತು. ಕಳೆದ ಮೂರು ವರ್ಷಗಳಲ್ಲಿ ಚಿತ್ರಕ್ಕೆ ಸಂಬಂಧಪಟ್ಟ ಪೋಸ್ಟರ್‌ಗಳು ಮತ್ತು ಮೇಕಿಂಗ್ ವಿಡಿಯೋಗಳು ಮಾತ್ರ ಬಿಡುಗಡೆಯಾಗಿದ್ದವು. ಆದರೆ ಈಗ ಅಧಿಕೃತ ಟ್ರೇಲರ್ ಬಿಡುಗಡೆಗೊಂಡಿದ್ದು, ರಿಷಬ್ ಶೆಟ್ಟಿ ನಿರ್ಮಿಸಿರುವ ದೃಶ್ಯ ವೈಭವವನ್ನು ಪ್ರೇಕ್ಷಕರಿಗೆ ತೋರಿಸಿದೆ. ರಿಷಬ್ ಶೆಟ್ಟಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಕಥೆಯ […]

ಮಹಿಳೆಯರ ಸ್ವರಕ್ಷಣೆಯ ಕಥೆ – ‘ಕರಾಸ್ತ್ರ’ ಇದೇ ಶುಕ್ರವಾರ ಬಿಡುಗಡೆ

ಈಗಿನ ಕಾಲದಲ್ಲಿ ಮಹಿಳೆಯರು ಎಂಥದೇ ಆಪತ್ತಿನ ಸಂದರ್ಭ ಎದುರಾದರೂ, ಹೇಗೆ ತಮ್ಮನ್ನು ತಾವು ಸ್ವಯಂರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ಕರಾಸ್ತ್ರ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ನಾರಾಯಣ ಪೂಜಾರ. ಸೆ.26ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಬ್ಯಾನರ್ ಮೂಲಕ ನಾರಾಯಣ ಪೂಜಾರ್ ಅವರೇ ನಿರ್ಮಾಣ ಮಾಡುವ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಮೋಟಿವೇಶನಲ್ ಸಾಂಗ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. […]

ಜೀ5 – ಪಿಆರ್‌ಕೆ ಪ್ರೊಡಕ್ಷನ್ಸ್ ಜಂಟಿ ನಿರ್ಮಾಣ: ಹೊಸ ವೆಬ್‌ಸೀರೀಸ್‌ಗೆ ‘ಮಾರಿಗಲ್ಲು’ ಶೀರ್ಷಿಕೆ

ಸೆಪ್ಟೆಂಬರ್ 19: ಭಾರತದ ಪ್ರಖ್ಯಾತ ಹಾಗು ಬೃಹತ್ ಓ ಟಿ ಟಿ ಪ್ಲಾಟ್ ಫಾರ್ಮ್/ ವೇದಿಕೆಯಾದ ಜೀ5, ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾಗ ಪಿ ಆರ್ ಕೆ ಪ್ರೊಡಕ್ಷನ್ಸ್ ನ ಸಹಯೋಗದಲ್ಲಿ ಒಂದು ವೆಬ್ ಸರಣಿಯನ್ನು ಘೋಷಿಸಿದ್ದು, ಇದೀಗ ಅದರ ಶೀರ್ಷಿಕೆಯನ್ನು ಘೋಷಿಸಿ ಮತ್ತೊಮ್ಮೆ ಸುದ್ದಿಯಾಗಿದೆ. “ಮಾರಿಗಲ್ಲು” ಎಂಬ ಶೀರ್ಷಿಕೆಯುಳ್ಳ ಈ ವೆಬ್ ಸರಣಿ ಕರ್ನಾಟಕ ಜಾನಪದವನ್ನು ಹೇಳುವ‌ ಒಂದು ದೈವಿಕ ಥ್ರಿಲ್ಲರ್ ಆಗಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ […]

  • 1
  • 2
Translate »