ಮನೆಯವರು ಹಿಂಗೇನಾ ಬೆಳೆಸಿರೋದು..? ಸುರೇಶ್ ವಿರುದ್ಧ ಗರಂ ಆದ ಅನುಷಾ..!
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳನ್ನು ನೋಡುವುದಕ್ಕೇನೆ ಮಜ. ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಆಡುತ್ತಿದ್ದರೆ ಹೊರಗೆ ಕೂತು ನೋಡುವ ವೀಕ್ಷಕ ಚೆನ್ನಾಗಿ ಆಡುವ ಸ್ಪರ್ಧಿಗೆ ಬೆನ್ನು ತಟ್ಟುತ್ತಾ ಇರುತ್ತಾರೆ. ಓಡು ಓಡು, ನಿಧಾನ, ಆ ಕಡೆ ಬರಬೇಕಿತ್ತು, ಛೇ ಬಿದ್ದೋಯ್ತಾ ಹೀಗೆಲ್ಲಾ ಹೊರಗೆ ಕುಂತವರ ಬಾಯಿಂದಾನೇ ಮಾತುಗಳು ಬರುತ್ತವೆ. ನಿನ್ನೆ ಒಂದು ಬಾಕ್ಸ್ ಗಳನ್ನು ಹಗ್ಗದ ಮೂಲಕ ಬ್ಯಾಲೆನ್ಸ್ ಮಾಡಿ ಜೋಡಿಸುವ ಆಟವಿತ್ತಲ್ಲ ಆ ರೀತಿಯ ಟಾಸ್ಕ್ ಬಂದಾಗ ಈ ರೀತೊಯ ಜೋಶ್ ಇರುತ್ತೆ. ಆದ್ರೆ […]