# Tags

ಚಿತ್ತಾರ ಮ್ಯೂಸಿಕ್‌ ಅವಾರ್ಡ್‌; ವಿಶೇಷ ಪ್ರಶಸ್ತಿಗೆ ಭಾಜನರಾದ ಸಾಧು ಕೋಕಿಲ-ಹರಿಕೃಷ್ಣ

ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು  ಹೀಗಿತ್ತು. ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, […]

ನೆಲ್ಸನ್ ನಿರ್ದೇಶನದ ಪ್ಯಾನ್-ಇಂಡಿಯನ್ ಸಿನಿಮಾ ‘ಜೈಲರ್ 2’ಗೆ ಮೇಘನಾ ರಾಜ್ ಸರ್ಜಾ ಸೇರ್ಪಡೆ

ತಮಿಳು ಚಿತ್ರರಂಗದಲ್ಲಿ ಈಗ ಚರ್ಚೆಯ ವಿಷಯವಾಗಿರುವ ಚಿತ್ರವೆಂದರೆ ‘ಜೈಲರ್ 2’. 2023ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಈ ಸೀಕ್ವೆಲ್ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಸಂತೋಷ ತಂದಿದೆ. ಆದರೆ ಹೊಸ ಸಂಚಿಕೆ ಎಂದರೆ, ಈ ಬಾರಿ ನಟಿ ಮೇಘನಾ ರಾಜ್ ಸರ್ಜಾ ಕೂಡ ಈ ಭರ್ಜರಿ ತಂಡದಲ್ಲಿ ಸೇರಿಕೊಂಡಿದ್ದಾರೆ! ತಮಿಳು ಚಿತ್ರ ‘ನಂದ ನಂದಿತ’ (2012) ನಂತರ ಮೇಘನಾ ತಮಿಳು ಸಿನಿರಂಗದಿಂದ ದೂರವಾಗಿದ್ದರು. […]

89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ‘ತಿಥಿ’ ಖ್ಯಾತಿಯ ಗಡ್ಡಪ್ಪ ಚನ್ನೇಗೌಡ

ಕನ್ನಡ ಚಿತ್ರರಂಗಕ್ಕೆ ದುಃಖದ ಸುದ್ದಿ. ‘ತಿಥಿ’ ಸಿನಿಮಾದ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ನಟ ಚನ್ನೇಗೌಡ ಅಂದರೆ ನಮ್ಮ ಗಡ್ಡಪ್ಪ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವರ್ಷ ವಯಸ್ಸು. ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದವರು ಆಗಿರುವ ಚನ್ನೇಗೌಡ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪಾರ್ಶ್ವ ವಾಯು ಬಂದಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹೃದಯ ಸಮಸ್ಯೆ, ಉಬ್ಬಸ, ಶ್ರವಣದೋಷ ಮತ್ತು ಇತರ ವಯೋಸಹಜ ಅಸೌಖ್ಯಗಳು ಕಾಡುತ್ತಿವೆ. ಚಿಕಿತ್ಸೆಗೂ ಹಣದ ಅಭಾವ […]

ಪ್ರಿಯಾಂಕಾ ಉಪೇಂದ್ರ ನಟನೆಯ ‘ಸಪ್ಟೆಂಬರ್ 21’ ಚಿತ್ರ ಶೀಘ್ರದಲ್ಲೇ ಬಿಡುಗಡೆ

ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ “ಪ್ರಿಯಾಂಕಾ ಉಪೇಂದ್ರ” ಅವರು ನಟಿಸಿರುವ ಹೊಸ ಚಿತ್ರ “ಸಪ್ಟೆಂಬರ್ 21”. ಚಿತ್ರ ತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.ಸೆಪ್ಟೆಂಬರ್ 21 ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಚಿತ್ರೀಕರಣಗೊಂಡಿದ್ದು, 2026ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ನಿರ್ದೇಶನವನ್ನು 21 ವರ್ಷದ “ಕರೆನ್ ಕ್ರಿಷ್ಠಿ ಸುವರ್ಣ” ಮಾಡಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರ.ಹಾಗೆ ಇದೇ ನವಂಬರ್ 20 ರಿಂದ ನವಂಬರ್ 24ರ ವರೆಗೆ ನಡೆಯುವ […]

ಕೆಲಸ ಮಾಡಿತು ಸುದೀಪ್ ಕ್ಲಾಸ್; ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ‘ಸೈಲೆಂಟ್ ಮೋಡ್’ ಆನ್!

‘ಬಿಗ್ ಬಾಸ್ ಕನ್ನಡ ಸೀಸನ್ 12’ನ ಮನೆಯಲ್ಲಿ ಈ ವಾರ ಎಲ್ಲರ ಗಮನ ಸೆಳೆದಿರುವ ವ್ಯಕ್ತಿ ಅಶ್ವಿನಿ ಗೌಡ. ಕಳೆದ ವಾರ ಸುದೀಪ್ ಅವರ ಖಡಕ್ ಕ್ಲಾಸ್‌ನ ನಂತರ ಅಶ್ವಿನಿ ಅವರ ವರ್ತನೆಯಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿದೆ. ಹಿಂದಿನಂತಿಲ್ಲದೇ ಈಗ ಅವರು ಸಂಪೂರ್ಣ ಸೈಲೆಂಟ್ ಮೋಡ್‌ಗೆ ಪ್ರವೇಶಿಸಿರುವುದು ವೀಕ್ಷಕರಿಗೂ ಮನೆಯ ಸದಸ್ಯರಿಗೂ ಅಚ್ಚರಿಯ ವಿಷಯವಾಗಿದೆ. ಆರಂಭದಲ್ಲಿ ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಪ್ರತಿಕ್ರಿಯಾಶೀಲ ಸ್ಪರ್ಧಿಯಾಗಿದ್ದರು. ಸಣ್ಣ ವಿಷಯಕ್ಕೂ ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅವರು, ರಕ್ಷಿತಾ ಶೆಟ್ಟಿ […]

ಸುದೀಪ್ ವಿರುದ್ಧ ಧ್ರುವಂತ್‌ನ ಆರೋಪ! ಬಿಗ್ ಬಾಸ್ ಮನೆಯಲ್ಲಿ ಹೊಸ ಬಿರುಕು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಮತ್ತೊಮ್ಮೆ ಹೊಸ ವಿವಾದದ ಅಂಗಳವಾಗಿದೆ. ಈ ಬಾರಿ ಸುದ್ದಿಯ ಕೇಂದ್ರದಲ್ಲಿ ಸ್ಪರ್ಧಿ ಧ್ರುವಂತ್ ಇದ್ದಾರೆ. ಆರಂಭದಲ್ಲಿ ಶಾಂತ ಮತ್ತು ಸಮತೋಲನದ ವ್ಯಕ್ತಿತ್ವ ತೋರಿಸಿದ್ದ ಧ್ರುವಂತ್ ಈಗ ಸಂಪೂರ್ಣ ಬದಲಾಗಿದ್ದಾರೆ. ಎಲ್ಲರ ಮೇಲೂ ಕೋಪಗೊಳ್ಳುತ್ತಿರುವ ಅವರು, ನಿರಂತರವಾಗಿ ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇತ್ತೀಚಿನ ಘಟನೆಯಲ್ಲಿ ಅವರು ಸುದೀಪ್ ವಿರುದ್ಧ ಗಂಭೀರ ಆರೋಪ ಮಾಡಿದ ವಿಡಿಯೋ ಒಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಕ್ಷಿತಾ ಶೆಟ್ಟಿ ಮಾತನಾಡುವ […]

ಈ ವಾರವೂ ಅಶ್ವಿನಿಗೆ ಕಿಚ್ಚನ ಕ್ಲಾಸ್? ಜಾನ್ವಿ ಜೊತೆ ಸೇರಿ ರೂಪಿಸಿದ ಸಂಚು ಬಯಲಾಗಿದೆ!

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಮತ್ತೆ ಸುದ್ದಿಯಲ್ಲಿದ್ದಾರೆ. ಗೆಜ್ಜೆ ವಿವಾದದಿಂದ ಇಬ್ಬರ ನಡುವಿನ ವೈಮನಸ್ಸು ಎಲ್ಲರಿಗೂ ಗೊತ್ತಿದ್ದರೂ, ಅದರ ಹಿಂದಿನ ನಿಜವಾದ ಕಥೆ ಈಗ ಬಹಿರಂಗವಾಗಿದೆ. ಮೂಲಗಳ ಪ್ರಕಾರ, ಅಶ್ವಿನಿ ಮತ್ತು ಜಾನ್ವಿ ಇಬ್ಬರೂ ಮನೆಯವರ ಮುಂದೆ “ಜಗಳವಾಡಿದಂತೆ ನಟಿಸಲು” ಡ್ರೆಸ್ಸಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಸಂಚು ರೂಪಿಸಿದ್ದರು. ಈ ವಿಚಾರವನ್ನು ಸ್ವತಃ ಅಶ್ವಿನಿ ಗೌಡ ಇತ್ತೀಚೆಗೆ ಬಹಿರಂಗಪಡಿಸಿದ್ದು, ಮನೆಯೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ನಿಯಮ […]

ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಕ್ರೋಚ್ ಸುಧಿಯ ಕಳ್ಳಾಟ ಬಿಗ್ ಬಾಸ್‌ನ ಎಚ್ಚರಿಕೆ!

ಬಿಗ್ ಬಾಸ್ ಮನೆ ಎಂದರೆ ಏನು ಮಾಡಿದರೂ ಕ್ಯಾಮೆರಾ ಕಣ್ಣಲ್ಲಿ ತಪ್ಪಿಸಿಕೊಳ್ಳಲು ಆಗದು! ಈ ಮಾತಿನ ಸತ್ಯವನ್ನು ಇತ್ತೀಚಿನ ಎಪಿಸೋಡಿನಲ್ಲಿ ಖಡಕ್ ವಿಲನ್ ಎಂದೇ ಹೆಸರು ಮಾಡಿರುವ ಕಾಕ್ರೋಚ್ ಸುಧಿ ತಾವೇ ಅನುಭವಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ರ ನವೆಂಬರ್ 10ರ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ನೀಡಿದ್ದ ಟಾಸ್ಕ್ — “ಈ ಮನೆಯಲ್ಲಿ ಹೆಚ್ಚು ವಿಷ ಕಾರುವ ವ್ಯಕ್ತಿ ಯಾರು?” ಎಂಬುದು. ಪ್ರತಿ ಬಾರಿ ಹೆಸರು ಬಂದವರಿಗೆ ಹಸಿ ಮೆಣಸಿನಕಾಯಿ ತಿನ್ನಬೇಕಾದ ಟಾಸ್ಕ್! ಈ ಬಾರಿ […]

ಕಾರು, ಮನೆ ಎಲ್ಲ ಇದೆ.. ಆದರೆ ಕೆಲಸ ಇಲ್ಲದಾಗ ಮತ್ತೆ ಗಾರೆ ಕೆಲಸ!

‘ಬಿಗ್‌ಬಾಸ್ ಕನ್ನಡ 12’ನಿಂದ ಈ ವಾರ ಎಲಿಮಿನೇಟ್ ಆಗಿ ಹೊರಬಂದ ಸ್ಪರ್ಧಿ ಚಂದ್ರಪ್ರಭ ತಮ್ಮ ಜೀವನದ ಕಠಿಣ ಹಾದಿಯ ಕುರಿತಾಗಿ ಭಾವುಕವಾಗಿ ಮಾತನಾಡಿದ್ದಾರೆ. ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಈ ಕಾಮಿಡಿ ನಟ, ಬಿಗ್‌ಬಾಸ್‌ಗೆ ಹೋಗುವ ಕೆಲವೇ ದಿನಗಳ ಮೊದಲು ಗಾರೆ ಕೆಲಸ ಮಾಡುತ್ತಿದ್ದೆ ಎಂಬ ಅಚ್ಚರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, “ಜೀವನ ಸಾಗಿಸಲು ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಕರೆ ಬರೋ ಕೆಲ ದಿನಗಳ ಮೊದಲು ನಾನು ಗಾರೆ ಕೆಲಸ ಮಾಡಿದ್ದೆ. […]

ಪ್ರಶಾಂತ್ ವರ್ಮಾ ವಿವಾದದ ಬೆನ್ನಲ್ಲೇ ಪ್ರಭಾಸ್–ಹೊಂಬಾಳೆ ಸಿನಿಮಾ ಸ್ಥಗಿತ?

ಸೌತ್‌ ಇಂಡಿಯಾ ಸಿನಿಮಾರಂಗದಲ್ಲಿ ಪ್ರಭಾಸ್ ನಟನೆಯ ಹೊಸ ಚಿತ್ರಗಳ ಬಗ್ಗೆ ಸದಾ ಕುತೂಹಲ ಇರುತ್ತದೆ. ಈಗ ಮತ್ತೆ ಒಂದು ಸುದ್ದಿ ಫಿಲ್ಮ್ ವಲಯದಲ್ಲಿ ಚರ್ಚೆಯಾಗುತ್ತಿದೆ — ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಭಾಸ್ ಸೇರಿ ಮಾಡಬೇಕಿದ್ದ ಸಿನಿಮಾ ನಿಂತುಹೋಯಿತೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ‘ಸಲಾರ್’ ಚಿತ್ರದ ಯಶಸ್ಸಿನ ನಂತರ, ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ಜೊತೆ ಮೂರು ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಅದರಲ್ಲಿ ‘ಸಲಾರ್ 2’ ಕೂಡ ಒಂದು ಪ್ರಮುಖ ಯೋಜನೆ. ಉಳಿದ […]

Translate »