# Tags

ಐಷಾರಾಮಿ ವಾಹನ ಕಳ್ಳಸಾಗಣೆ ಕೇಸ್: ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ಇಡಿ ದಾಳಿ!

ದಕ್ಷಿಣ ಭಾರತ ಸಿನಿಮಾ ಲೋಕವನ್ನು ಕಂಗೊಳಿಸಿದ ಈ ಸುದ್ದಿ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ! ಭೂತಾನ್ ಮೂಲದ ಐಷಾರಾಮಿ ವಾಹನಗಳ ಅಕ್ರಮ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆಯ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಇಂದು ಬೆಳಗ್ಗಿನಿಂದಲೇ ಮಲಯಾಳಂ ತಾರೆಯರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಚೆನ್ನೈನಲ್ಲಿ ಇರುವ ಮಮ್ಮುಟ್ಟಿ ಅವರ ಚಿತ್ರ ನಿರ್ಮಾಣ ಸಂಸ್ಥೆ, ದುಲ್ಕರ್ ಸಲ್ಮಾನ್ ಅವರ ಕಚೇರಿ, ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆಗಳ ಮೇಲೂ ಶೋಧ ಕಾರ್ಯಾಚರಣೆ ನಡೆದಿದೆ. ಈ […]

‘ಲೋಕಃ 2’ ಟೀಸರ್‌ನಲ್ಲಿ ದುಲ್ಕರ್ & ಟೊವಿನೊ, ಜೊತೆಗೆ ಮಿಂಚಿದ ವಿಲನ್

ಇತ್ತೀಚೆಗಷ್ಟೇ ಬಿಡುಗಡೆಯಾದ ಮಲಯಾಳಂ ಸೂಪರ್ ಹೀರೋ ಸಿನಿಮಾ ‘ಲೋಕಃ’ ಭಾರೀ ಯಶಸ್ಸು ಕಂಡಿದೆ. ಕೇವಲ 30 ಕೋಟಿ ಬಜೆಟ್‌ನಲ್ಲಿ ದುಲ್ಕರ್ ಸಲ್ಮಾನ್ ನಿರ್ಮಿಸಿದ್ದ ಈ ಸಿನಿಮಾ ಈಗಾಗಲೇ 200 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ದಾಟಿ, ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯಾಗಿ ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿಯಾಗಿ ಓಡುತ್ತಿರುವಾಗಲೇ, ಇಂದು (ಸೆಪ್ಟೆಂಬರ್ 27) ಎರಡನೇ ಭಾಗ ‘ಲೋಕಃ 2’ ಅಧಿಕೃತವಾಗಿ ಘೋಷಣೆಯಾಗಿದೆ. ಮೊದಲ ಭಾಗದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿ ಮಿಂಚಿದ್ದರೂ, […]

ದುಲ್ಕರ್ ಸಲ್ಮಾನ್ ಕಾರು ಸಂಗ್ರಹ: ಹಳೆಯ ಕ್ಲಾಸಿಕ್‌ಗಳಿಂದ ಲಗ್ಜುರಿ ಸೂಪರ್‌ಕಾರ್‌ಗಳವರೆಗೆ

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ದುಲ್ಕರ್ ಸಲ್ಮಾನ್ ಅವರಿಗೆ ಸಿನಿಮಾಗಳಷ್ಟೇ ಅಲ್ಲ, ಕಾರುಗಳ ಮೇಲೂ ಅಪಾರ ಅಭಿಮಾನವಿದೆ. ಇತ್ತೀಚೆಗಷ್ಟೇ ಕಸ್ಟಮ್ಸ್ ಅಧಿಕಾರಿಗಳು ಅವರ ಮನೆಯಲ್ಲಿ ದಾಳಿ ನಡೆಸಿದ್ದರೂ, ದುಲ್ಕರ್ ಅವರ ಕಾರು ಸಂಗ್ರಹವೇ ಸದಾ ಚರ್ಚೆಯಲ್ಲಿರುತ್ತದೆ. ಅವರು ಕಾರುಗಳನ್ನು ಕೇವಲ ಶ್ರೀಮಂತಿಕೆಯ ಪ್ರದರ್ಶನಕ್ಕಾಗಿ ಖರೀದಿಸುವುದಿಲ್ಲ. ಅವರಿಗೆ ಕಾರುಗಳ ಬಗ್ಗೆ ನಿಜವಾದ ಪ್ರೀತಿ ಇದೆ. ಹಳೆಯ ಕ್ಲಾಸಿಕ್ ಮಾದರಿಗಳಿಂದ ಹಿಡಿದು ಇತ್ತೀಚಿನ ಸೂಪರ್‌ಲಗ್ಜುರಿ ಮಾದರಿಗಳವರೆಗೂ ಅವರ ಗ್ಯಾರೇಜ್‌ನಲ್ಲಿ ಹಲವಾರು ಕಾರುಗಳು ಮಿಂಚುತ್ತವೆ. 80ರ ದಶಕದ ಕಾರುಗಳಿಂದ […]

ಸ್ಮಗ್ಲಿಂಗ್ ಆರೋಪ: ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಮನೆಗಳಲ್ಲಿ ಕಸ್ಟಮ್ಸ್ ದಾಳಿ

ಮಲಯಾಳಂ ಚಿತ್ರರಂಗ ಮಾತ್ರವಲ್ಲ, ಪ್ಯಾನ್ ಇಂಡಿಯಾ ಸ್ಟಾರ್ ನಟ ಮತ್ತು ನಿರ್ಮಾಪಕರಾಗಿರುವ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರ ಮೇಲೆ ಸ್ಮಗ್ಲಿಂಗ್-related ಸಂಶಯದ ಹಿನ್ನೆಲೆಯಲ್ಲಿ, ಅವರ ಕಾರುಗಳು ಮತ್ತು ಇತರೆ ವಿದೇಶಿ ವಸ್ತುಗಳನ್ನು ಪರಿಶೀಲಿಸಲಾಗಿದೆ. ನಟರು ಇಬ್ಬರೂ ಕಾರ್-ಕ್ರೇಜ್ ಹೊಂದಿರುವವರು. ತಮ್ಮ ಸಂಗ್ರಹದಲ್ಲಿ ಹಲವು ಐಶಾರಾಮಿ ವಿದೇಶಿ ಬ್ರ್ಯಾಂಡ್ಗಳ ಕಾರುಗಳು ಇದ್ದು, ಕೆಲವು ಲಿಮಿಟೆಡ್ ಎಡಿಷನ್ ಕಾರುಗಳನ್ನು ವಿದೇಶದಿಂದ ತಂದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಕಸ್ಟಮ್ಸ್ ಅಧಿಕಾರಿಗಳು ಕಾರುಗಳ […]

‘ಕಾಂತ’ಗಾಗಿ ಕೈ ಜೋಡಿಸಿದ ರಾಣಾ ದಗ್ಗುಬಾಟಿ-ದುಲ್ಕರ್ ಸಲ್ಮಾನ್..ಸೆಟ್ಟೇರಿತು ‘ಕಾಂತ’ ಸಿನಿಮಾ

ಟಾಲಿವುಡ್ ಹ್ಯಾಂಡ್ಸಮ್ ಹಂಕ್ ರಾಣಾ ದಗ್ಗುಬಾಟಿ ಹಾಗೂ ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಕಾಂತ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರ ಇಂದು ಹೈದರಾಬಾದ್‌ನ ರಾಮ ನಾಯ್ಡು ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ನಟ ಕಂ ನಿರ್ಮಾಪಕ ವೆಂಕಟೇಶ್ ದಗ್ಗುಬಾಟಿ ಕಾಂತ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಕಾಂತ ಸಿನಿಮಾವನ್ನು ರಾಣಾ ಒಡೆತನ ರಾಣಾಸ್ ಸ್ಪಿರಿಟ್ ಮೀಡಿಯಾ ಹಾಗೂ ದುಲ್ಕರ್ ಸಲ್ಮಾನ್ ಒಡೆತನದ ವೇಫೇರರ್ ಫಿಲ್ಮಂ […]

Translate »