ಹೊಸ ವರ್ಷಕ್ಕೆ ಗೃಹಪ್ರವೇಶದ ಸಂಭ್ರಮದಲ್ಲಿ ತರುಣ್ ಸುಧೀರ್ ದಂಪತಿ
ತರುಣ್ ಸುಧೀರ್, ಸೋನಲ್ ಮೊಂಥೆರೋ ದಂಪತಿ ಇದೀಗ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಮನೆಯೊಂದನ್ನ ಖರೀಸಿದ್ದಾರೆ. ಹೊಸ ವರ್ಷದಂದು ಗೃಹಪ್ರವೇಶ ನಡೆಸುವ ಮೂಲಕ ಅದನ್ನ ಇನ್ನಷ್ಟು ವಿಶೇಷಗೊಳಿಸಿದರು. ಗೃಹಪ್ರವೇಶದಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಕುಟುಂಬಸ್ಥರು, ಚಿತ್ರರಂಗದ ಹಲವು ಗಣ್ಯರು, ನಟ ಶರಣ್ ಹಾಗೂ ಶೃತಿ ಕೂಡ ಕುಟುಂಬ ಸಮೇತ ಭಾಗವಹಿಸಿ ಶುಭ ಹಾರೈಸಿದರು.