ಮೋಸ್ಟ್ ಎಕ್ಸ್‌ಪೆಕ್ಟೆಡ್ ʻಮಾರ್ಟಿನ್ʼ : ಕನಸಿನ ಕೂಸಿನ ಬಗ್ಗೆ ಎಪಿ ಅರ್ಜುನ್ ಟಾಕ್..!
ಎಲ್ಲೆಲ್ಲೂ ಮಾರ್ಟಿನ್ ಸಿನಿಮಾದ್ದೇ ಮಾತು. ರಿಲೀಸ್‌ಗೆ ಇನ್ನುಳಿದಿರುವುದು ಒಂದೇ ದಿನ. ಆಯುಧ ಪೂಜೆಯ ದಿನ ಅದ್ದೂರಿ ಆಕ್ಷನ್ ಚಿತ್ರದೊಂದಿಗೆ ಧ್ರುವ ಸರ್ಜಾ ಅವರು ತೆರೆ ಮೇಲೆ ರಾರಾಜಿಸಲಿದ್ದಾರೆ. ಇದು ಕೇವಲ ಕರ್ನಾಟಕವಲ್ಲ ಇಡೀ ದೇಶದಲ್ಲಿ, ಹಲವು ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಇದು ಎಪಿ ಅರ್ಜುನ್ ಕನಸಿನ ಕೂಸು. ಉದಯ್ ಮೆಹ್ತಾ ಅವರ ಭರವಸೆಯ ಸಿನಿಮಾ, ಧ್ರುವ ಸರ್ಜಾ ಅವರ ಫ್ಯಾನ್ಸ್ ಸಂಭ್ರಮಿಸುವ ಸಿನಿಮಾ. ಸಿನಿಮಾಗಾಗಿ ಶ್ರಮಿಸಿದ್ದು ಒಂದೆರಡು ದಿನವಲ್ಲ, ಬರೋಬ್ಬರಿ ಮೂರು ವರ್ಷ. ಅಷ್ಟು ಅನುಭವವನ್ನು ಎಪಿ ಅರ್ಜುನ್ ಚಿತ್ತಾರದೊಂದಿಗೆ […]