ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ’ಕಣ್ಣಾ ಮುಚ್ಚೆ ಕಾಡೇ ಗೂಡೇ’ ಟೀಸರ್‌ಗೆ ಭರಪೂರ ಮೆಚ್ಚುಗೆ
ಮಕ್ಕಳು ಇಷ್ಟಪಡುವ ’ಕಣ್ಣಾ ಮುಚ್ಚೆ ಕಾಡೇ ಗೂಡೇ’ ಹಾಡು ಈಗ ಸಿನಿಮಾದ ಶೀರ್ಷಿಕೆಯಾಗಿ ಹೊರಬಂದಿದೆ. ಪ್ರಚಾರದ ಎರಡನೇ ಹಂತವಾಗಿ ಟೀಸರ್ ಹಾಗೂ ಪುನೀತ್ ಆರ್ಯ ಸಾಹಿತ್ಯ, ವಾಸುಕಿವೈಭವ್-ಸುರಭಿ ಭಾರದ್ವಾಜ್ ಗಾಯನ, ಸಂತೋಷ್ ಜೋಶ್ವಾ ಸಂಗೀತದ ’ನಿನ್ನ ನೋಡಿದಾಗಲೇ ಪ್ರೀತಿಯಲಿ ಬಿದ್ದಾಗಿದೆ’ ಹಾಡು ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ತಂಡಕ್ಕೆ ಶುಭ ಹಾರೈಸಲು ನಟ ನಾಗೇಂದ್ರ ಅರಸ್, ನಿರ್ಮಾಪಕ ಪ್ರಶಾಂತ್‌ನಾಯಕ್ ಆಗಮಿಸಿದ್ದರು. ಕಣ್ಣಾ ಮುಚ್ಚೆ ಹಾಡು ಸಾವಿನ ಗೀತೆಯಾಗಿದೆ. ಪ್ರತಿಯೊಂದು ಪದಗಳು ಮರಣದ […]