# Tags

ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – “ಲ್ಯಾಂಡ್ ಲಾರ್ಡ್” ಚಿತ್ರದ ಕ್ಯಾರೆಕ್ಟರ್ ಟೀಸರ್ ಔಟ್!

ನಟಿ ರಚಿತಾರಾಮ್ ಅವರು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ‌ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ರಚಿತಾರಾಮ್ ಅಭಿನಯದ “ಲ್ಯಾಂಡ್ ಲಾರ್ಡ್” ಚಿತ್ರದ ರಚಿತಾ ರಾಮ್ ಅವರ ಅವರ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಯಿತು. ಕೆ.ವಿ. ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್. ಅವರ ನಿರ್ಮಾಣದ, ಜಡೇಶ್ ಕೆ.ಹಂಪಿ ಅವರ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದು ರಚಿತಾರಾಮ್ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ರಚಿತಾರಾಮ್ ಮಾತನಾಡುತ್ತಾ, […]

ಕಾಕ್ರೋಚ್ ಸುಧೀ ನಾಯಕನಾಗಿ – “ಚೈಲ್ಡೂ” ಚಿತ್ರದ ಶೂಟಿಂಗ್ ಶುರು

ಕಮಲ ಫಿಲಂಸ್ ಲಾಂಛನದಲ್ಲಿ ಚಂದ್ರಶೇಖರ್ ಕೆ ಅವರು ನಿರ್ಮಿಸುತ್ತಿರುವ, “ಹಫ್ತಾ” ಚಿತ್ರದ ಖ್ಯಾತಿಯ ಪ್ರಕಾಶ್ ಹೆಬ್ಬಾಳ್ ನಿರ್ದೇಶಿಸುತ್ತಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ಕಾಕ್ರೋಚ್ ಸುಧೀ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ “ಚೈಲ್ಡೂ”. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆಯನ್ನು ಸಮಾಜ ಸೇವಕರಾದ ಕಿರಣ್ ರೆಡ್ಡಿ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. “ಹಫ್ತಾ” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಚಿತ್ರವಿದು. ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಲವ್ ಹೀಗೆ ನೋಡುಗರಿಗೆ […]

ಪವರ್‌ಫುಲ್ ಪ್ರೆಸೆನ್ಸ್‌ನೊಂದಿಗೆ ಮೋಹನ್ ಲಾಲ್ – ‘ವೃಷಭ’ ಟೀಸರ್‌ಗೆ ಗ್ರ್ಯಾಂಡ್ ರೆಸ್ಪಾನ್ಸ್

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಬಹು ನಿರೀಕ್ಷಿತ ವೃಷಭ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 43 ಸೆಕೆಂಡ್ ಇರುವ ಟೀಸರ್ ಪ್ರಾಮಿಸಿಂಗ್ ಆಗಿದೆ. ಮೋಹಲ್ ಲಾಲ್ ಎಂಟ್ರಿ ಭರ್ಜರಿಯಾಗಿದ್ದು, ಅವರು ರಾಜನಾಗಿ ನಟಿಸಿದ್ದಾರೆ. ಆಂಥೋನಿ ಸ್ಯಾಮ್ಸನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಸ್ಯಾಮ್ ಸಿಎಸ್ ಸಂಗೀತ ಟೀಸರ್‌ನಲ್ಲಿ ಹೈಲೆಟ್. ನಂದ ಕಿಶೋರ್ ಕಥೆ ಬರೆದು ‘ವೃಷಭ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮಿಂಚಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ […]

ನಂದಿ ಬೆಟ್ಟದಲ್ಲಿ ಆರಂಭವಾದ ‘ಡ್ಯಾಡ್’ ಚಿತ್ರದ ಎರಡನೇ ಹಂತದ ಶೂಟಿಂಗ್

ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಡ್ಯಾಡ್” ಚಿತ್ರಕ್ಕೆ ಇತ್ತೀಚೆಗಷ್ಟೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿತ್ತು.‌ ಈಗ ಎರಡನೇ ಹಂತದ ಚಿತ್ರೀಕರಣ ನಂದಿ ಬೆಟ್ಟದಲ್ಲಿ ನಡೆಯತ್ತಿದೆ. ಶಿವರಾಜಕುಮಾರ್, ಬೇಬಿ ನಕ್ಷತ್ರ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹರೀಶ್‍ ಪೆದ್ದಿ ಅವರು ಮೈರಾ ಕ್ರಿಯೇಷನ್ಸ್ ಲಾಂಛನದಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅನಿಲ್‍ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕರಿಗೆ […]

ಧನಂಜಯ್ ಜನ್ಮದಿನದ ಸಂಭ್ರಮದಲ್ಲಿ ಹೊಸ ಸಿನಿಮಾ ಘೋಷಣೆ – ‘ಶುಭಕೃತ್ ನಾಮ ಸಂವತ್ಸರ’

ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ್ರು‌ ಪಾತ್ರದ ಮೂಲಕ‌ ಮನೆ‌ಮಾತಾಗಿರುವ ಬಹುಮುಖ‌ ಪ್ರತಿಮೆ ಧನಂಜಯ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಡಬ್ಬಿಂಗ್ ಆರ್ಟಿಸ್ಟ್, ಡ್ಯಾನ್ಸರ್ ಆಗಿರುವ ಧನಂಜಯ್ ವಾಸಂತಿ ನಲಿದಾಗ, ಥಗ್ ಆಫ್ ರಾಮಘಡ ಎಂಬ ಚಿತ್ರಗಳ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಅವರೀಗ ಪೂರ್ಣ ಪ್ರಮಾಣದ ಹೀರೋ ಆಗಿ ಪರಿಚವಾಗುತ್ತಿದ್ದಾರೆ. ಶುಭಕೃತ್ ನಾಮ ಸಂವತ್ಸರ ಎಂಬ ಸಿನಿಮಾ ಮೂಲಕ ಧನಂಜಯ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ‌‌ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದೆ. ಫೋರ್ ವಾಲ್ಸ್ […]

WhatsApp Image 2025-09-17 at 12.01.09 PM

ಹೊಸ ಪ್ರತಿಭೆಗಳ ಸಿನಿಮಾ ‘ಖಾಲಿ ಡಬ್ಬ’ – ಶೀಘ್ರದಲ್ಲೇ ತೆರೆಗೆ

ಹೊಸಬರ ಪ್ರಯತ್ನದ ಖಾಲಿ ಡಬ್ಬ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ. ಈ ಕುರಿತ ಸುದ್ದಿಗೋಷ್ಟಿಯನ್ನು ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಪ್ರಕಾಶ್ ಕೆ ಅಂಬ್ಳೆ ಮಾತನಾಡಿ, ಪಾತ್ರದೊಳಗಿನ ಪಾತ್ರಧಾರಿ ಅಂದರೆ ಅದು ಖಾಲಿ ಡಬ್ಬ. ಖಾಲಿ ಡಬ್ಬದಲ್ಲಿ ಒಂದಷ್ಟು ವಿಶೇಷ ಇರುತ್ತದೆ. ಅದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾ ರಿಲೀಸ್ ವರೆಗೂ ಬರಲು ಕಾರಣ ನಿರ್ಮಾಪಕ ಮಂಜು ಗುರಪ್ಪ. […]

ಎಸ್. ನಾರಾಯಣ್ ನಿರ್ದೇಶನದ ‘ಮಾರುತ’ ಸಿನಿಮಾ ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ

ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರದ ಪ್ರಮುಖಪಾತ್ರದಲ್ಲಿ “ದುನಿಯಾ” ವಿಜಯ್ ಹಾಗೂ ಶ್ರೇಯಸ್ ಮಂಜು ನಟನೆ . ಖ್ಯಾತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು – ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ “ಮಾರುತ” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ‌‌. ಹೆಸರಾಂತ ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣದಲ್ಲಿ, ಸದಭಿರುಚಿ ಚಿತ್ರಗಳ […]

ಟ್ರೇಲರ್ ನಲ್ಲೇ ಭರವಸೆ ಮೂಡಿಸಿರುವ “ಸಂತೋಷ ಸಂಗೀತ” ಸದ್ಯದಲ್ಲೇ ತೆರೆಗೆ .

ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ – ನಾಯಕಿಯಾಗಿ ನಟಿಸಿರುವ “ಸಂತೋಷ ಸಂಗೀತ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿರವರು ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದರು. ವಿಶೇಷ ಅತಿಥಿಯಾಗಿ ಲಹರಿ ವೇಲು ಅವರು ಆಗಮಿಸಿದ್ದರು. ಈ ಚಿತ್ರವು ‘ಯು’ಪ್ರಮಾಣ ಪತ್ರ ಪಡೆದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. “ಸಂತೋಷ ಸಂಗೀತ” ಚಿತ್ರ ನಿಲ್ಲಲು ನಾಲ್ಕು ಕಾಲು ತುಂಬಾ ಅವಶ್ಯಕತೆ ಇದ್ದು, ತಯಾರಿ, […]

ರಾವಣ ರಾಜ್ಯದಲ್ಲಿ ನವದಂಪತಿ’ಗಳಾದ ಯುವ ಪ್ರತಿಭೆ ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗ್ಡೆ

‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸೂತ್ರಧಾರ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ‌ ರಾವಣ ರಾಜ್ಯದಲ್ಲಿ ನವದಂಪತಿಗಳು ಎಂಬ ಕನಸಿಗೆ ಶಂಕರ್ ಗುರು ಸಾಥ್ ಕೊಟ್ಟಿದ್ದಾರೆ. ಅಂದಹಾಗೇ ಈ ಚಿತ್ರದ ಪ್ರಮುಖ‌ ಪಿಲ್ಲರ್ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ರಾವಣ […]

ಟೈಟಲ್ ಸಾಂಗ್ ನಲ್ಲೇ ಮೋಡಿ ಮಾಡಿದ ‘ರಾನಿ ’ ಸೆ. 12ರಂದು ತೆರೆಗೆ

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಚಿತ್ರದ ಟೈಟಲ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಚಿತ್ರಲೇಖಕ ಜೆ.ಕೆ.ಭಾರವಿ ಪ್ರಮೋದ್ ಮರವಂತೆ ಬರೆದು, ಸಚಿನ್ ಬಸ್ರೂರ್ ಸಂಗೀತ ನೀಡಿರುವ “ರಾನಿ” ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಗುರುತೇಜ್ ಶೆಟ್ಟಿ ನಿರ್ದೇಶನದ ಹಾಗೂ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರ ಸೆಪ್ಟೆಂಬರ್ 12 ಗುರುವಾರ ಬಿಡುಗಡೆಯಾಗಲಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು […]

  • 1
  • 2
Translate »