ತಮ್ಮ ಹುಟ್ಟುಹಬ್ಬಕ್ಕೆ ವಿಶೇಷ ಆವ್ಹಾನ ನೀಡಿದ ರಾಧಿಕಾ ಕುಮಾರಸ್ವಾಮಿ
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ, ನಟಿಯರ ಬರ್ತ್‌ಡೇ ಒಂದು ರೀತಿ ಹಬ್ಬವಿದ್ದಂತೆ. ಆ ದಿನವನ್ನು ಅವರ ಜೊತೆಗೆ ಕಳೆಯಬೇಕು. ಇಲ್ಲ ಕೆಲ ಕಾಲವಾದರೂ ಅವರನ್ನು ಭೇಟಿಯಾಗಿ ಮಾತನಾಡಿಸಿ ವಿಶ್ ಮಾಡಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಸೆಯಾಗಿರುತ್ತೆ. ಆದರೆ, ಎಲ್ಲಾ ಹೀರೋ, ಹಿರೋಯಿನ್‌ಗಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಕೆಲ ನಟ, ನಟಿಯರು ತಮ್ಮ ಹುಟ್ಟುಹಬ್ಬವನ್ನು ಖಾಸಗಿಯಾಗಿ ಆಚರಿಸಿಕೊಳ್ಳುತ್ತಾರೆ. ಕೆಲವೇ ಕೆಲವು ಆಪ್ತರ ಜೊತೆಯಲ್ಲಿ ಸಂಭ್ರಮಿಸುತ್ತಾರೆ. ಇದೇ ಲಿಸ್ಟ್‌ನಲ್ಲಿ ಕನ್ನಡ ಚಿತ್ರರಂಗದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕೂಡ ಇದ್ದಾರೆ. ಹಲವು […]