ಕೆನಡಾದಲ್ಲಿ ಹಿರಿಯ ಹಾಸ್ಯ ನಟ ಕಪಿಲ್ ಶರ್ಮಾ ನಡೆಸಿರುವ ಕೆಫೆ ಮೇಲೆ ಮೂರನೇ ಬಾರಿ ಗುಂಡಿನ ದಾಳಿ ಸಂಭವಿಸಿದೆ. ಗುರುವಾರ (ಅಕ್ಟೋಬರ್ 16) ಕೆನಡಾ, ಸರ್ರೆ ನಗರದಲ್ಲಿರುವ ಕೆಫೆ ಎದುರು ಬಂದೂಕುಧಾರಿಗಳು ಗುಂಡು ಹಾರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ದಾಳಿಯ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೋರ್ವ ಕಾರಿನ ಕಿಟಕಿಯಿಂದ ಕೈ ಹೊರಗೆ ಹಾಕಿ ಹ್ಯಾಂಡ್‌ಗನ್‌ನಿಂದ ಗುಂಡು ಹಾರಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಹಾರಿದ ಗುಂಡುಗಳು ಕೆಫೆಯ ಕಿಟಕಿಗಳು ಹಾಗೂ ಗೋಡೆಗೆ ಹೊಟ್ಟೆಯಾಗಿದ್ದು, ದಾಳಿಯ ಸಮಯದಲ್ಲಿ ಒಳಗೆ ಸಿಬ್ಬಂದಿ […]
ಬೆಂಗಳೂರು: ನಂದ ಕಿಶೋರ್ ನಿರ್ದೇಶನದಲ್ಲಿ ಮೋಹನ್ ಲಾಲ್ ಅಭಿನಯದ ‘ವೃಷಭ’ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಇತ್ತೀಚೆಗೆ ಟೀಸರ್ ಬಿಡುಗಡೆ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರದಲ್ಲಿ ಕನ್ನಡ ಕಲಾವಿದರು ಮತ್ತು ತಂತ್ರಜ್ಞರು ಸಹ ಕೆಲಸ ಮಾಡಿದ್ದಾರೆ. ನಟ ರಾಘವೇಂದ್ರ ಎಸ್. ಹೊಂಡದಕೇರಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಆರೋಪಿಸಿದ್ದಾರೆ: “ನಾನು ಚಿತ್ರದಲ್ಲಿ ಬಹಳ ಪರಿಶ್ರಮ ಮಾಡಿದ್ದೇನೆ. ಐದು ಗಂಟೆಗಳ ಮೇಕಪ್ ಹಾಕಿಕೊಂಡು ಬೆಳಗಿನ ಜಾವದವರೆಗೂ ಶೂಟಿಂಗ್ ಮಾಡಿದೆ. ಆದರೆ ಕೊನೆಗೆ ನನ್ನ ಸಂಭಾವನೆ ಕೊಡಲಿಲ್ಲ, […]
ಮುಂಬೈ: ಉದ್ಯಮಿ ರಾಜ್ ಕುಂದ್ರಾ ವಿವಿಧ ವಿವಾದಗಳಲ್ಲಿ ಸಿಲುಕಿರುವಾಗ, 60 ಕೋಟಿ ರೂಪಾಯಿ ವಂಚನೆ ಪ್ರಕರಣವು ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಆರ್ಥಿಕ ವಿಭಾಗ ನಟಿ ಶಿಲ್ಪಾ ಶೆಟ್ಟಿಗೆ ನೊಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ರಾಜ್ ಕುಂದ್ರಾ ಖಾತೆಯಿಂದ 15 ಕೋಟಿ ರೂಪಾಯಿ ಶಿಲ್ಪಾ ಶೆಟ್ಟಿಯ ಕಂಪೆನಿಗೆ ವರ್ಗಾಯಿಸಲಾಗಿದೆ. ಅಧಿಕಾರಿಗಳು ಕಂಪೆನಿಯ ಖರ್ಚು, ಜಾಹೀರಾತು ವೆಚ್ಚಗಳು ಸೇರಿದಂತೆ ಹಣಕಾಸು ವ್ಯವಹಾರಗಳ ಬಗ್ಗೆ ಶಿಲ್ಪಾ ಶೆಟ್ಟಿಯಿಂದ ಮಾಹಿತಿ ಪಡೆಯಲಿದ್ದಾರೆ. ರಾಜ್ […]
ಟಾಲಿವುಡ್ ನಟಿ ಸಾಯಿಪಲ್ಲವಿ ತನ್ನ ಸರಳ, ನೈಸರ್ಗಿಕ ಸ್ಟೈಲ್‌ಗಾಗಿ ಹೆಚ್ಚು ಜನಪ್ರಿಯ. ಅವರು ನೋ ಮೇಕಪ್, ನೋ ಗ್ಲ್ಯಾಮರ್ ಬಟ್ಟೆ ಧರಿಸುವ ಶೈಲಿಯನ್ನು ಹತ್ತಿರಪಡಿಸುತ್ತಾರೆ. ಆದರೆ ಇತ್ತೀಚೆಗೆ ಬೀಚ್ ಫೋಟೋವೊಂದರಲ್ಲಿ ಸ್ವಿಮ್‌ಸೂಟ್ ಧರಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಈ ಫೋಟೋಗಳನ್ನು ಸಾಯಿಪಲ್ಲವಿಯ ಅಕ್ಕ ಪೂಜಾ ಕಣ್ಣನ್ ತೆಗೆದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಸಾಯಿಪಲ್ಲವಿ ಮೈಕಾಣುವಂತೆ ಪೋಸ್ ನೀಡಿಲ್ಲ, ಆದರೆ ಕೆಲ ಅಭಿಮಾನಿಗಳು ಬೀಚ್‌ವೇರ್ ಧರಿಸಿದ್ದಕ್ಕೆ ಕೆಟ್ಟ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆ ಚರ್ಚೆ […]
ಬಿಡುಗಡೆಯಾಗುವ ಮುನ್ನವೇ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರೀ ಸಂಚಲನ ಸೃಷ್ಟಿಸಿದೆ. ಸೆಪ್ಟೆಂಬರ್ 22ರಂದು ಟ್ರೇಲರ್ ಬಿಡುಗಡೆಗೊಂಡು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ ಬಳಿಕ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಒಂದು ಅಸಾಮಾನ್ಯ ಪ್ರಶ್ನೆ ಎದುರಾಯಿತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಫೇಕ್ ಪೋಸ್ಟರ್ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದರು. ಏನು ಹೇಳಿತ್ತು ಫೇಕ್ ಪೋಸ್ಟರ್? ಇತ್ತೀಚೆಗೆ ಹರಿದಾಡಿದ ಪೋಸ್ಟರ್‌ನಲ್ಲಿ, “ಕಾಂತಾರ ನೋಡುವವರು ಮದ್ಯಪಾನ, ಧೂಮಪಾನ ಹಾಗೂ ಮಾಂಸಾಹಾರ ಸೇವನೆ ಮಾಡಬಾರದು” ಎಂದು ಬರೆಯಲಾಗಿತ್ತು. […]
ಬಹು ನಿರೀಕ್ಷಿತ ‘ಓಜಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಲು ಹಲವು ಬಾರಿ ವಿಳಂಬವಾಯಿತು. ಇದರಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾದರೂ ನಿರಾಶೆ ಕೂಡ ಉಂಟಾಗಿತ್ತು. ಅಂತಿಮವಾಗಿ ಸೆಪ್ಟೆಂಬರ್ 22ರಂದು ಟ್ರೇಲರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಸಂಪಾದಿಸಿದೆ. ಬಿಡುಗಡೆಯಾದ ಕ್ಷಣದಿಂದಲೇ ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪವನ್ ಕಲ್ಯಾಣ್ ಆ್ಯಕ್ಷನ್ ಮಂತ್ರ ಟಾಲಿವುಡ್ ಸೂಪರ್‌ಸ್ಟಾರ್ ಹಾಗೂ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ‘ಓಜಸ್ ಗಂಭೀರ’ ಎಂಬ ತೀವ್ರ ಆಕರ್ಷಕ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. […]
ಸೆಪ್ಟೆಂಬರ್ 19: ಭಾರತದ ಪ್ರಖ್ಯಾತ ಹಾಗು ಬೃಹತ್ ಓ ಟಿ ಟಿ ಪ್ಲಾಟ್ ಫಾರ್ಮ್/ ವೇದಿಕೆಯಾದ ಜೀ5, ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾಗ ಪಿ ಆರ್ ಕೆ ಪ್ರೊಡಕ್ಷನ್ಸ್ ನ ಸಹಯೋಗದಲ್ಲಿ ಒಂದು ವೆಬ್ ಸರಣಿಯನ್ನು ಘೋಷಿಸಿದ್ದು, ಇದೀಗ ಅದರ ಶೀರ್ಷಿಕೆಯನ್ನು ಘೋಷಿಸಿ ಮತ್ತೊಮ್ಮೆ ಸುದ್ದಿಯಾಗಿದೆ. “ಮಾರಿಗಲ್ಲು” ಎಂಬ ಶೀರ್ಷಿಕೆಯುಳ್ಳ ಈ ವೆಬ್ ಸರಣಿ ಕರ್ನಾಟಕ ಜಾನಪದವನ್ನು ಹೇಳುವ ಒಂದು ದೈವಿಕ ಥ್ರಿಲ್ಲರ್ ಆಗಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ […]
ಕನ್ನಡ ಕಿರುತೆರೆಯ ಟಿಆರ್‌ಪಿ (TVR) ಪಟ್ಟಿ ಈ ವರ್ಷದ 36ನೇ ವಾರಕ್ಕೆ ಹೊರಬಂದಿದೆ. ಪ್ರತೀ ವಾರವೂ ಹೊಸ ತಿರುವು ಪಡೆಯುವ ಈ ಪಟ್ಟಿಯಲ್ಲಿ, ಈ ಬಾರಿ ಕೂಡ ನಂಬರ್ 1 ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ‘ಕರ್ಣ’ ಧಾರಾವಾಹಿಯೇ. ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಧಾರಾವಾಹಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು, 9.5 ಟಿವಿಆರ್ ದಾಖಲಿಸಿದೆ. ದಿನದಿಂದ ದಿನಕ್ಕೆ ಡಾಕ್ಟರ್ ಕರ್ಣ ಪಾತ್ರಕ್ಕೆ ಅಭಿಮಾನಿಗಳ ಫಾಲೋವಿಂಗ್ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ಇದರ ನಂತರದ […]
ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಡ್ಯಾಡ್” ಚಿತ್ರಕ್ಕೆ ಇತ್ತೀಚೆಗಷ್ಟೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿತ್ತು. ಈಗ ಎರಡನೇ ಹಂತದ ಚಿತ್ರೀಕರಣ ನಂದಿ ಬೆಟ್ಟದಲ್ಲಿ ನಡೆಯತ್ತಿದೆ. ಶಿವರಾಜಕುಮಾರ್, ಬೇಬಿ ನಕ್ಷತ್ರ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹರೀಶ್ ಪೆದ್ದಿ ಅವರು ಮೈರಾ ಕ್ರಿಯೇಷನ್ಸ್ ಲಾಂಛನದಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕರಿಗೆ […]