# Tags

ಕಾಕ್ರೋಚ್ ಸುಧೀ ನಾಯಕನಾಗಿ – “ಚೈಲ್ಡೂ” ಚಿತ್ರದ ಶೂಟಿಂಗ್ ಶುರು

ಕಮಲ ಫಿಲಂಸ್ ಲಾಂಛನದಲ್ಲಿ ಚಂದ್ರಶೇಖರ್ ಕೆ ಅವರು ನಿರ್ಮಿಸುತ್ತಿರುವ, “ಹಫ್ತಾ” ಚಿತ್ರದ ಖ್ಯಾತಿಯ ಪ್ರಕಾಶ್ ಹೆಬ್ಬಾಳ್ ನಿರ್ದೇಶಿಸುತ್ತಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ಕಾಕ್ರೋಚ್ ಸುಧೀ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ “ಚೈಲ್ಡೂ”. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆಯನ್ನು ಸಮಾಜ ಸೇವಕರಾದ ಕಿರಣ್ ರೆಡ್ಡಿ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. “ಹಫ್ತಾ” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಚಿತ್ರವಿದು. ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಲವ್ ಹೀಗೆ ನೋಡುಗರಿಗೆ […]

ಧ್ರುವ ಸರ್ಜಾ ಸಿನಿಮಾದಲ್ಲಿ ಸುದೀಪ್ ಗಸ್ಟ್ ಅಪಿಯರನ್ಸ್? ಅಭಿಮಾನಿಗಳಲ್ಲಿ ಕುತೂಹಲ

ಧ್ರುವ ಸರ್ಜಾ ಅಭಿನಯಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗುತ್ತಿದೆ. ಸಿನಿಮಾದ ಭರ್ಜರಿ ಆಕ್ಷನ್ ದೃಶ್ಯಗಳಿಗಾಗಿ ಅದ್ದೂರಿ ರೈಲು ಸೆಟ್ ನಿರ್ಮಾಣ ಮಾಡಲಾಗಿದ್ದು, ಈ ಸೆಟ್‌ಗೆ ನಟ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ. ಇದರಿಂದ ಅವರು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಹಿಂದೆ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಅಭಿನಯಿಸಿದ್ದರೂ, ಆ ಸಿನಿಮಾ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. […]

ಒಟಿಟಿಯಲ್ಲಿ ಯಾವೆಲ್ಲಾ ಸಿನಿಮಾಗಳು ರಿಲೀಸ್‌ ಆಗಿವೆ..?

ಸಂಕ್ರಾಂತಿಯ ಸಂಭ್ರಮದ ನಡುವೆ ಥಿಯೇಟರ್​ನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆ ಕಾಣುತ್ತಿವೆ. ಅದೇ ರೀತಿ ಒಟಿಟಿಯಲ್ಲೂ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ವೆಬ್ ಸೀರಿಸ್​ಗಳು ಕೂಡ ಈ ಸಾಲಿನಲ್ಲಿ ಇವೆ. ಯಾವೆಲ್ಲಾ ಸಿನಿಮಾಗಳು, ಯಾವ ಪ್ಲಾಟ್‌ ಫಾರ್ಮ್‌ನಲ್ಲಿ ನೋಡಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.   ಆಹಾ ಒಟಿಟಿ ತೆಲುಗು ಸಿನಿಮಾಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಸಿದ್ಧವಾದ ಒಟಿಟಿ ‘ಆಹಾ’. ಈ ಓಟಿಟಿಯಲ್ಲಿ ಹಲವು ತೆಲುಗು ಸಿನಿಮಾಗಳು ರಿಲೀಸ್ ಆಗುತ್ತವೆ. ‘ನೀಲಿ ಮೇಘ ಶ್ಯಾಮ’ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ತೆಲುಗಿನ […]

“ಆಪರೇಷನ್ ಡಿ” ಚಿತ್ರದ ಟೀಸರ್‌ ರಿಲೀಸ್‌ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅದ್ವಿತ ಫಿಲಂ ಫ್ಯಾಕ್ಟರಿ ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ ನಿರ್ಮಿಸಿರುವ ಹಾಗೂ ತಿರುಮಲೇಶ್ ವಿ ನಿರ್ದೇಶನದ “ಆಪರೇಶನ್ ಡಿ” ಚಿತ್ರದ ಟೀಸರ್ ಅನ್ನು ಬಿಡುಗಡೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ತಿಳಿಸಿ, “ಆಪರೇಷನ್ ಡಿ” ಕುರಿತು ಮಾತನಾಡಿದರು. ಟೀಸರ್ […]

ನೈಟ್ ರೋಡ್‌ನಲ್ಲಿ ಹಲವು ತಿರುವು : ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಧರ್ಮ

ನೈಸ್ ರೋಡ್ ಎಂಬ ಹೆಸರಿನಿಂದ ಸದ್ದುಮಾಡಿದ್ದ ಚಿತ್ರದ ಹೆಸರನ್ನು ‘ನೈಟ್ ರೋಡ್’ ಎಂದು ಬದಲಿಸಲಾಗಿದೆ. ಈ ಹಿಂದೆ ಶೀರ್ಷಿಕೆಬದಲಿಸುವಂತೆ ನೈಸ್ ರೋಡ್ ಆಡಳಿತ ಮಂಡಳಿ ನೋಟೀಸ್ ನೀಡಿತ್ತು.ಹೀಗಾಗಿ, ಚಿತ್ರತಂಡ ಶೀರ್ಷಿಕೆ ಬದಲಿಸಿದೆ.ಇದೀಗ ‘ನೈಟ್ ರೋಡ್’ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ. ಅಪಘಾತದಿಂದ ಮೃತಪಟ್ಟ ಯುವಕನ ಅಸಹಜ ಸಾವಿನ ತನಿಖೆಗೆ ಮುಂದಾಗುವ ನಾಯಕ ಆಧ್ಯಾತ್ಮದತ್ತ ವಾಲುತ್ತಾನೆ. ಹೀಗೆ ತಿರುವು ಪಡೆಯುವ ಚಿತ್ರದ ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚಿಸುವ ಜೊತೆಗೆ ಯೋಚನೆಯ ಓರೆಗಲ್ಲಿಗೆ ಹಚ್ಚುತ್ತದೆ. ಕ್ಲೈಮಾಕ್ಸ್ ವೇಳೆಗಂತೂ ನೋಡುಗರನ್ನು […]

MOST TALENTED: ಯೋಗ ಅರಸಿ ಬಂದ ಅರ್ಜುನ್ ಯೋಗಿ

ತುಮಕೂರಿನ ಅರಳಾಲುಸಂದ್ರದಿಂದ ಬಿ.ಇ ಓದಿಕೊಂಡು ಕಲಾವಿದನಾಗಬೇಕೆಂದು ಚಿಕ್ಕಂದಿನಿಂದಲೇ ಶಾಲಾದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾ, ಒಂದೊಂದೆ ಮೆಟ್ಟಿಲು ಹತ್ತುತ್ತಾ, ಸಾಧನೆಯ ಹಾದಿಯಲ್ಲಿ ತಿರುಗಿ ನೋಡದೆ ಸಾಗುತಿರುವ ಅಚ್ಚ ಕಂನ್ನಡದ ಕಲಾವಿದ ಅರ್ಜುನ್ ಯೋಗಿ. ರಂಗ ಪ್ರತಿಭೆ ಚಂದನವನದ ನೆಲದಲ್ಲಿ ಕಲಾವಿದರಿಗೇನು ಬರವಿಲ್ಲ, ಬರುತ್ತಿರುತ್ತಾರೆ ಹೋಗುತ್ತಿರುತ್ತಾರೆ, ಕೆಲವೇ ಕೆಲವು ಮಂದಿ ನೆಲೆ ನಿಲ್ಲುತ್ತಾರೆ. ಹಾಗೇ ನೆಲೆ ನಿಂತವರುಗಳಲ್ಲಿ ಕೆಲವರು ನಟನಾ ರಂಗದಲ್ಲಿ ಪಾತ್ರಗಳಲ್ಲಿ ಬೇಯುತ್ತಾ ಬೇಯುತ್ತಾ ಪಕ್ವವಾಗುತ್ತಾ ಹೋಗುತ್ತಾರೆ. ಅಂತಹ ಕಲಾವಿದರುಗಳಲ್ಲಿ ಅರ್ಜುನ್ ಯೋಗಿ ಒಬ್ಬರು. ಇವರು ೨೦೧೦-೧೧ರಲ್ಲಿ ಕಲ್ಯಾಣಿ […]

ಹಂಸಲೇಖ ಅವರಿಂದ ‘ಲುಕ್ ಬ್ಯಾಕ್’ ಟ್ರೇಲರ್ ಬಿಡುಗಡೆ

ಕೇರಳದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಕಳರಿ ಪಯಟ್ಟು ಎಂಬ ಯುದ್ದ ಕಲೆ ಕುರಿತಾದ ಸಿನಿಮಾವೊಂದು ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ಲುಕ್ ಬ್ಯಾಕ್’. ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡದಲ್ಲಿ ಚಿತ್ರಕ್ಕೆ ‘ನೆನೆ ಮನವೆ’ ಎಂದು ಹೆಸರು ಇಡಲಾಗಿದೆ. ಇದೇ ಸೆಪ್ಟೆಂಬರ್ 27ರಂದು ಕರ್ನಾಟಕ ಮತ್ತು ಕೇರಳದಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟ್ರೇಲರ್ ಬಿಡುಗಡೆ ಮಾಡಿದ ಹಿರಿಯ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ‘ನಾನು […]

ನಟ ಶರಣ್ ರಿಲೀಸ್ ಮಾಡಿದ “ನಾ ನಿನ್ನ ಬಿಡಲಾರೆ” ಚಿತ್ರದ ಟೀಸರ್‌ಗೆ ಪ್ರೇಕ್ಷಕ ಫಿದಾ

ಬೆಳ್ಳಿ ಪರದೆಗೆ ಮತ್ತೊಂದು ಹೊಸ ತಂಡ ಒಂದು ವಿಭಿನ್ನ ಪ್ರಯತ್ನದ ಚಿತ್ರದ ಮೂಲಕ ಚಿತ್ರ ಪ್ರೇಮಿಗಳನ್ನು ಸೆಳೆಯಲು ಮುಂದಾಗಿದೆ. ಗುಲ್ಬರ್ಗ ಮೂಲದ ಯುವ ಪ್ರತಿಭೆ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸುವ ಮೂಲಕ ಅವರ ತಾಯಿ ಶ್ರೀಮತಿ ಭಾರತಿ ಬಾಳಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ಚಿತ್ರ “ನಾ ನಿನ್ನ ಬಿಡಲಾರೆ”. ಇತ್ತೀಚೆಗೆ ಈ ಚಿತ್ರದ ಟೀಸರ್ ಅನ್ನು ನಟ ಶರಣ್ ಬಿಡುಗಡೆ ಮಾಡಿ ಹೊಸ ತಂಡಕ್ಕೆ ಸಾಥ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ಈ ಚಿತ್ರದ ನಟಿ […]

ʻಹಂಪಿ ಎಕ್ಸ್‌ಪ್ರೆಸ್‌ʼನಲ್ಲಿ ಫೋಟೋಗ್ರಾಫರ್‌ ಆದ ಧರ್ಮಣ್ಣ : Exclusive ಮಾತುಕತೆ

ಹಾಸ್ಯ ನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿರುವ ಧರ್ಮಣ್ಣ ಕಡೂರು ಈಗಾಗಲೇ  ರಾಜಯೋಗ ಎಂಬ ಸಿನಿಮಾದಲ್ಲಿ ನಾಯಕರಾಗುವ ಮೂಲಕ ಎಲ್ಲರನ್ನು ರಂಜಿಸಿದ್ದರು. ಇದೀಗ ಮತ್ತೊಮ್ಮೆ ಮುಖ್ಯ ಪಾತ್ರದಲ್ಲಿ ʻಹಂಪಿ ಎಕ್ಸ್‌ಪ್ರೆಸ್‌ʼ ಏರಿ ಹೊರಟಿದ್ದಾರೆ. ಹಂಪಿ ಭಾಗದಲ್ಲಿ ನಡೆಯುವ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದ್ದು, ಧರ್ಮಣ್ಣ ಕಡೂರು ಅವರೇ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ನಿರ್ದಶಕ ಯೋಗರಾಜ್‌ ಭಟ್‌ ಅವರು ಸಿನಿಮಾಗೆ ಚಾಲನೆ ನೀಡುವ ಮೂಲಕ ಶುಭ ಹಾರೈಸಿದ್ದಾರೆ. ಈ ಸಿನಿಮಾದ ಸ್ಪೆಷಾಲಿಟಿ ಏನು..? ಪಾತ್ರ ಹೇಗಿರುತ್ತೆ ಎಂಬಿತ್ಯಾದಿ ಮಾಹಿತಿಗಳನ್ನು ಚಿತ್ತಾರದ […]

`ಹ್ಯಾಪಿ ಬರ್ತ್‌ ಡೇ ಟು ಮಿ’ ಚಿತ್ರ ನಿರ್ದೇಶಕ ರಾಕೇಶ್‌ ಕದ್ರಿ ಅನುಭವದ ಮಾತು..! exclusive interview

ಹ್ಯಾಪಿ ಬರ್ತ್‌ ಡೇ ಟು ಯು ಹೇಳುವುದನ್ನು ಕೇಳಿದ್ದೇವೆ. ಆದರೆ ನಮಗೆ ನಾವೇ ಹೇಳಿಕೊಳ್ಳುವುದು ತೀರಾ ಕಡಿಮೆ. ಅದರಲ್ಲೂ ಒಂಟಿಯಾಗಿದ್ದವರು, ಕೆಲವೊಂದು ಫುಲ್‌ ಜಾಲಿ ಮೂಡಿನಲ್ಲಿದ್ದವರು ಹ್ಯಾಪಿ ಬರ್ತ್‌ ಡೇ ಟು ಮಿ ಎಂದೇ ಕಿರುಚಿ ಹೇಳಿಕೊಳ್ಳುತ್ತಾರೆ. ಈ ವಿಚಾರ ಹೀಗ್ಯಾಕೆ ಅಂದ್ರೆ ಇದೇ ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿದೆ. ‘ಹ್ಯಾಪಿ ಬರ್ತಡೇ ಟು ಮಿ’ ಸಿನಿಮಾದ ಹೆಸರೇನೋ ಇಂಟರೆಸ್ಟಿಂಗ್ ಆಗಿದೆ. READ MORE : ಮತ್ತೆ ಟಿ.ಎಸ್.ಎನ್ ಗರಡಿಯಲ್ಲಿ ಡಾಲಿ ; ಅಂದು `ಅಲ್ಲಮ’ ಇಂದು `ಕೆಂಪೇಗೌಡ’ ನಟಿ […]

  • 1
  • 2
Translate »