# Tags

ನೆಲ್ಸನ್ ನಿರ್ದೇಶನದ ಪ್ಯಾನ್-ಇಂಡಿಯನ್ ಸಿನಿಮಾ ‘ಜೈಲರ್ 2’ಗೆ ಮೇಘನಾ ರಾಜ್ ಸರ್ಜಾ ಸೇರ್ಪಡೆ

ತಮಿಳು ಚಿತ್ರರಂಗದಲ್ಲಿ ಈಗ ಚರ್ಚೆಯ ವಿಷಯವಾಗಿರುವ ಚಿತ್ರವೆಂದರೆ ‘ಜೈಲರ್ 2’. 2023ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಈ ಸೀಕ್ವೆಲ್ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಸಂತೋಷ ತಂದಿದೆ. ಆದರೆ ಹೊಸ ಸಂಚಿಕೆ ಎಂದರೆ, ಈ ಬಾರಿ ನಟಿ ಮೇಘನಾ ರಾಜ್ ಸರ್ಜಾ ಕೂಡ ಈ ಭರ್ಜರಿ ತಂಡದಲ್ಲಿ ಸೇರಿಕೊಂಡಿದ್ದಾರೆ! ತಮಿಳು ಚಿತ್ರ ‘ನಂದ ನಂದಿತ’ (2012) ನಂತರ ಮೇಘನಾ ತಮಿಳು ಸಿನಿರಂಗದಿಂದ ದೂರವಾಗಿದ್ದರು. […]

89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ‘ತಿಥಿ’ ಖ್ಯಾತಿಯ ಗಡ್ಡಪ್ಪ ಚನ್ನೇಗೌಡ

ಕನ್ನಡ ಚಿತ್ರರಂಗಕ್ಕೆ ದುಃಖದ ಸುದ್ದಿ. ‘ತಿಥಿ’ ಸಿನಿಮಾದ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ನಟ ಚನ್ನೇಗೌಡ ಅಂದರೆ ನಮ್ಮ ಗಡ್ಡಪ್ಪ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವರ್ಷ ವಯಸ್ಸು. ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದವರು ಆಗಿರುವ ಚನ್ನೇಗೌಡ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪಾರ್ಶ್ವ ವಾಯು ಬಂದಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹೃದಯ ಸಮಸ್ಯೆ, ಉಬ್ಬಸ, ಶ್ರವಣದೋಷ ಮತ್ತು ಇತರ ವಯೋಸಹಜ ಅಸೌಖ್ಯಗಳು ಕಾಡುತ್ತಿವೆ. ಚಿಕಿತ್ಸೆಗೂ ಹಣದ ಅಭಾವ […]

ಧ್ರುವಂತ್ ಟೀಕೆ ವಿವಾದ: ಕನ್ನಡ ಮಾತನಾಡಿದ ರಕ್ಷಿತಾ ಶೆಟ್ಟಿಗೆ ಜನ ಬೆಂಬಲ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರ ಭಾಷೆ ವಿಚಾರವೇ ದೊಡ್ಡ ಚರ್ಚೆಯಾಗಿದೆ. ನಟ ಧ್ರುವಂತ್ ಅವರು ರಕ್ಷಿತಾ ಶೆಟ್ಟಿ ಕನ್ನಡ ಮಾತನಾಡುವ ರೀತಿಯ ಬಗ್ಗೆ ಟೀಕೆ ಮಾಡಿದಂತೆಯೇ, ವಿವಾದವೂ ಉಕ್ಕಿದೆ. ರಕ್ಷಿತಾ ಶೆಟ್ಟಿ ಮೂಲತಃ ಉಡುಪಿಯವರಾದರೂ, ಮುಂಬೈನಲ್ಲಿ ಹುಟ್ಟಿ ಬೆಳೆದವರು. ಹೀಗಾಗಿ ಅವರಿಗೆ ಕನ್ನಡದಲ್ಲಿ ಮಾತನಾಡುವುದು ಸ್ವಲ್ಪ ಕಷ್ಟವಾಗುತ್ತಿದೆ. ಆದರೂ ಅವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿರುವುದನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಆದರೆ ದೊಡ್ಮನೆಯ ಧ್ರುವಂತ್, “ನಾನು ಮಂಗಳೂರಿನವನು, ಆದರೆ ರಕ್ಷಿತಾ ರೀತಿ ಮಾತನಾಡುವವರನ್ನು ನೋಡಿಲ್ಲ” ಎಂದು ಹೇಳಿಕೆ […]

ಮಾಳು ನಿಪನಾಳ ನಾಮಿನೇಷನ್ ಡ್ರಾಮಾ : ಈ ವಾರ ಯಾರಿಗೆ ಎಲಿಮಿನೇಷನ್ ಶಾಕ್?

ಬಿಗ್ ಬಾಸ್ ಕನ್ನಡ 12 ಮನೆಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಕ್ಯಾಪ್ಟನ್ ಮಾಳು ನಿಪನಾಳ ಸುತ್ತ ತಿರುಗಿತು. ಈ ಬಾರಿ ಬಿಗ್ ಬಾಸ್ ಮಾಳು ಅವರಿಗೆ ವಿಶೇಷ ಅಧಿಕಾರ ನೀಡಿ, ಯಾರನ್ನು ನಾಮಿನೇಟ್ ಮಾಡಬೇಕೆಂಬ ನಿರ್ಧಾರವನ್ನು ಅವರ ಕೈಗೆ ನೀಡಿದರು. ಆದರೆ ಮಾಳು ಮಾಡಿದ ಆಯ್ಕೆಗಳು ಮನೆಯೊಳಗೆ ತೀವ್ರ ಚರ್ಚೆಗೆ, ವಾದ-ಪ್ರತಿವಾದಗಳಿಗೆ ಕಾರಣವಾದವು. ಮಾಳು ನಿಪನಾಳ ಅವರು ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರನ್ನು […]

ಪ್ರಿಯಾಂಕಾ ಉಪೇಂದ್ರ ನಟನೆಯ ‘ಸಪ್ಟೆಂಬರ್ 21’ ಚಿತ್ರ ಶೀಘ್ರದಲ್ಲೇ ಬಿಡುಗಡೆ

ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ “ಪ್ರಿಯಾಂಕಾ ಉಪೇಂದ್ರ” ಅವರು ನಟಿಸಿರುವ ಹೊಸ ಚಿತ್ರ “ಸಪ್ಟೆಂಬರ್ 21”. ಚಿತ್ರ ತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.ಸೆಪ್ಟೆಂಬರ್ 21 ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಚಿತ್ರೀಕರಣಗೊಂಡಿದ್ದು, 2026ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ನಿರ್ದೇಶನವನ್ನು 21 ವರ್ಷದ “ಕರೆನ್ ಕ್ರಿಷ್ಠಿ ಸುವರ್ಣ” ಮಾಡಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರ.ಹಾಗೆ ಇದೇ ನವಂಬರ್ 20 ರಿಂದ ನವಂಬರ್ 24ರ ವರೆಗೆ ನಡೆಯುವ […]

ಕಾರು, ಮನೆ ಎಲ್ಲ ಇದೆ.. ಆದರೆ ಕೆಲಸ ಇಲ್ಲದಾಗ ಮತ್ತೆ ಗಾರೆ ಕೆಲಸ!

‘ಬಿಗ್‌ಬಾಸ್ ಕನ್ನಡ 12’ನಿಂದ ಈ ವಾರ ಎಲಿಮಿನೇಟ್ ಆಗಿ ಹೊರಬಂದ ಸ್ಪರ್ಧಿ ಚಂದ್ರಪ್ರಭ ತಮ್ಮ ಜೀವನದ ಕಠಿಣ ಹಾದಿಯ ಕುರಿತಾಗಿ ಭಾವುಕವಾಗಿ ಮಾತನಾಡಿದ್ದಾರೆ. ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಈ ಕಾಮಿಡಿ ನಟ, ಬಿಗ್‌ಬಾಸ್‌ಗೆ ಹೋಗುವ ಕೆಲವೇ ದಿನಗಳ ಮೊದಲು ಗಾರೆ ಕೆಲಸ ಮಾಡುತ್ತಿದ್ದೆ ಎಂಬ ಅಚ್ಚರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, “ಜೀವನ ಸಾಗಿಸಲು ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಕರೆ ಬರೋ ಕೆಲ ದಿನಗಳ ಮೊದಲು ನಾನು ಗಾರೆ ಕೆಲಸ ಮಾಡಿದ್ದೆ. […]

ರಶ್ಮಿಕಾ ಸಿನಿಮಾದಿಂದ ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟ!

ರಶ್ಮಿಕಾ ಮಂದಣ್ಣ ಅವರ ಹೊಸ ಸಿನಿಮಾ ‘ದಿ ಗರ್ಲ್ ಫ್ರೆಂಡ್’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆ ಹುಸಿ ಮಾಡಿದೆ. ಭಾರೀ ಹೂಡಿಕೆ ಮಾಡಿದ್ದ ನಿರ್ಮಾಪಕರಿಗೆ ಈ ಸಿನಿಮಾ ಈಗ ತಲೆನೋವಾಗಿ ಪರಿಣಮಿಸಿದೆ. ಸುಮಾರು ₹40 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಕೇವಲ ₹7 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಗಳು ಹೇಳುತ್ತಿವೆ. ಮೊದಲ ಬಾರಿಗೆ ದೊಡ್ಡ ಹೀರೋ ಇಲ್ಲದೇ ಮುಖ್ಯ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರಿಗೆ ಇದು ದೊಡ್ಡ ಸವಾಲಾಗಿತ್ತು. ಆದರೆ ಪ್ರೇಕ್ಷಕರಿಂದ ಬಂದ […]

ಪ್ರಶಾಂತ್ ವರ್ಮಾ ವಿವಾದದ ಬೆನ್ನಲ್ಲೇ ಪ್ರಭಾಸ್–ಹೊಂಬಾಳೆ ಸಿನಿಮಾ ಸ್ಥಗಿತ?

ಸೌತ್‌ ಇಂಡಿಯಾ ಸಿನಿಮಾರಂಗದಲ್ಲಿ ಪ್ರಭಾಸ್ ನಟನೆಯ ಹೊಸ ಚಿತ್ರಗಳ ಬಗ್ಗೆ ಸದಾ ಕುತೂಹಲ ಇರುತ್ತದೆ. ಈಗ ಮತ್ತೆ ಒಂದು ಸುದ್ದಿ ಫಿಲ್ಮ್ ವಲಯದಲ್ಲಿ ಚರ್ಚೆಯಾಗುತ್ತಿದೆ — ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಭಾಸ್ ಸೇರಿ ಮಾಡಬೇಕಿದ್ದ ಸಿನಿಮಾ ನಿಂತುಹೋಯಿತೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ‘ಸಲಾರ್’ ಚಿತ್ರದ ಯಶಸ್ಸಿನ ನಂತರ, ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ಜೊತೆ ಮೂರು ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಅದರಲ್ಲಿ ‘ಸಲಾರ್ 2’ ಕೂಡ ಒಂದು ಪ್ರಮುಖ ಯೋಜನೆ. ಉಳಿದ […]

‘ಅಮೃತವರ್ಷಿಣಿ’ ಖ್ಯಾತಿಯ ನಟಿ ರಜಿನಿ ಸದ್ದಿಲ್ಲದೆ ಹಸೆಮಣೆ ಏರಿದರು

ಕಿರುತೆರೆಯ ಜನಪ್ರಿಯ ಮುಖಗಳಲ್ಲಿ ಒಬ್ಬರಾದ ರಜಿನಿ, ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಜನಪ್ರಿಯ ನಟಿ ರಜಿನಿ ಅವರು ತಮ್ಮ ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಜೊತೆ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 10ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಈ ಸರಳ ವಿವಾಹ ನೆರವೇರಿತು. ‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಮನೆಮಾತಾದ ರಜಿನಿ, ನಂತರ ಹಿಟ್ಲರ್ ಕಲ್ಯಾಣ ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ನೈಸರ್ಗಿಕ ಅಭಿನಯ ಮತ್ತು ಹೃದಯಂಗಮ ಪಾತ್ರಗಳಿಂದ ಅವರು […]

ಅನನ್ಯ ಭಟ್ ಮತ್ತು ಡ್ರಮ್ಮರ್ ಮಂಜು – ತಿರುಪತಿಯಲ್ಲಿ ಹೊಸ ಜೀವನದ ಶುಭಾರಂಭ

ಕನ್ನಡ ಸಂಗೀತ ಲೋಕದ ಮೆಚ್ಚಿನ ಕಂಠಗಳಲ್ಲಿ ಒಬ್ಬರಾದ ಅನನ್ಯ ಭಟ್, ಇದೀಗ ಜೀವನದ ಹೊಸ ಹಂತಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಸೋಜುಗದ ಸೂಜಿ ಮಲ್ಲಿಗೆ ಸೇರಿದಂತೆ ಅನೇಕ ಹಿಟ್‌ ಗೀತೆಗಳಿಗೆ ಸ್ವರ ನೀಡಿದ ಈ ಪ್ರತಿಭಾವಂತ ಗಾಯಕಿ, ನವೆಂಬರ್‌ 9ರಂದು ತಿರುಪತಿಯಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ. ಅನನ್ಯ ಭಟ್ ಅವರ ಜೀವನ ಸಂಗಾತಿ ಖ್ಯಾತ ಇಂಟರ್‌ನ್ಯಾಷನಲ್ ಮ್ಯೂಸಿಷಿಯನ್ ಮತ್ತು ಡ್ರಮ್ಮರ್ ಮಂಜು. ಇಬ್ಬರ ವಿವಾಹ ತಿರುಪತಿಯ ಪವಿತ್ರ ವಾತಾವರಣದಲ್ಲಿ, ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನೆರೆದಿತು. […]

Translate »