ಶ್ರೀಮುರಳಿಗೆ ಐತಿಹಾಸಿಕ ಪಾತ್ರ – ಸುರಮ್ ಮೂವೀಸ್ ನ ಹೊಸ ಚಿತ್ರ ಘೋಷಣೆ
ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸುತ್ತಿರುವ ಹಾಗೂ ಪುನೀತ್ ರುದ್ರನಾಗ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರದ ನಾಯಕನಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಅದ್ದೂರಿಯಾಗಿ ಅಪಾರವೆಚ್ಚದಲ್ಲಿ ಮೂಡಿಬರಲಿದೆ. 500 ವರ್ಷಗಳ ಹಿಂದಿನ ಕಥೆ ಇದಾಗಿದೆ. ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಮ್ಮ ಸುರಮ್ ಮೂವೀಸ್ ಲಾಂಛನದಲ್ಲಿ ಇತ್ತೀಚೆಗೆ ತೆರೆಕಂಡ “ನಿದ್ರಾದೇವಿ next door” ಚಿತ್ರಕ್ಕೆ ತಾವು ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ. ಈಗ ನಮ್ಮ ಸಂಸ್ಥೆಯಿಂದ ಮತ್ತೊಂದು ನೂತನ ಚಿತ್ರ ಆರಂಭವಾಗಲಿದೆ. […]