ಒಟಿಟಿಗೆ ಬರಲು ಸಜ್ಜಾದ ಬ್ಲಾಕ್ಬಸ್ಟರ್ ‘ಏಳುಮಲೆ’: ಅಕ್ಟೋಬರ್ 17ರಿಂದ ಜೀ5ನಲ್ಲಿ ಪ್ರಸಾರ!
‘ಸು ಫ್ರಮ್ ಸೋ’ ಸಿನಿಮಾ ಯಶಸ್ಸಿನ ನಂತರ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಯಾಯಿತು. ಅದಾದ ಬಳಿಕ ಬಿಡುಗಡೆಯಾದ ಸಿನಿಮಾಗಳ ಮೇಲಿನ ನಿರೀಕ್ಷೆಗಳು ಗಗನಕ್ಕೇರಿದವು. ಇದೇ ಸಂದರ್ಭದಲ್ಲಿ ತೆರೆಗೆ ಬಂದ ‘ಏಳುಮಲೆ’ ಚಿತ್ರವು ಪ್ರೇಕ್ಷಕರ ಮನ ಗೆದ್ದಿತ್ತು. ರಕ್ಷಿತಾ ಪ್ರೇಮ್ ಅವರ ಸಹೋದರ ರಾಣ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿ ದೊಡ್ಡ ಮಟ್ಟದ ಗೆಲುವು ಕಂಡಿದ್ದರು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬರಲು ಸಿದ್ಧವಾಗಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಜೀ ಕನ್ನಡ ಅಧಿಕೃತವಾಗಿ ಘೋಷಿಸಿದೆ — […]
 
        