ರಹಸ್ಯ-ರೋಚಕ ಕಥೆಯ ‘ಮಾರಿಗಲ್ಲು’ ವೆಬ್ ಸರಣಿ ಅಕ್ಟೋಬರ್ 31ರಿಂದ ZEE5ನಲ್ಲಿ ಸ್ಟ್ರೀಮಿಂಗ್
ಭಾರತದ ಪ್ರಖ್ಯಾತ ಒಟಿಟಿ ಪ್ಲಾಟ್ zee5 ಹಾಗೂ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಿಆರ್ಕೆ ಪ್ರೊಡಕ್ಷನ್ಸ್ನ ಸಹಯೋಗದಲ್ಲಿ ‘ಮಾರಿಗಲ್ಲು’ ವೆಬ್ ಸರಣಿಯನ್ನು ಘೋಷಿಸಿದೆ. ಈ ವೆಬ್ ಸೀರೀಸ್ ಇದೇ ತಿಂಗಳ 31ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದಿಗ ಮಾರಿಗಲ್ಲು ವೆಬ್ ಸರಣಿಯ ಟೀಸರ್ ಅನಾವರಣಗೊಂಡಿದೆ. ನಟ ಧನಂಜಯ ನಿರೂಪಣೆಯ ಮೂಲಕ ಶುರುವಾಗುವ ಟೀಸರ್ನಲ್ಲಿ, ಕದಂಬ ರಾಜವಂಶದ ಸ್ಥಾಪಕ ಮತ್ತು ಕರ್ನಾಟಕದ ಮೊದಲ ರಾಜ ಮಯೂರ ಶರ್ಮಾ ಪಾತ್ರದಲ್ಲಿ ದಿವಂಗತ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳ ಕುತೂಹಲ […]
 
        