ಬಿಷ್ಣೋಯಿ ಗ್ಯಾಂಗಿನಿಂದ ಕಪಿಲ್ ಶರ್ಮಾ ಕೆಫೆ ಮೇಲೆ ಮತ್ತೆ ಗುಂಡಿನ ದಾಳಿ
ಕೆನಡಾದಲ್ಲಿ ಹಿರಿಯ ಹಾಸ್ಯ ನಟ ಕಪಿಲ್ ಶರ್ಮಾ ನಡೆಸಿರುವ ಕೆಫೆ ಮೇಲೆ ಮೂರನೇ ಬಾರಿ ಗುಂಡಿನ ದಾಳಿ ಸಂಭವಿಸಿದೆ. ಗುರುವಾರ (ಅಕ್ಟೋಬರ್ 16) ಕೆನಡಾ, ಸರ್ರೆ ನಗರದಲ್ಲಿರುವ ಕೆಫೆ ಎದುರು ಬಂದೂಕುಧಾರಿಗಳು ಗುಂಡು ಹಾರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ದಾಳಿಯ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೋರ್ವ ಕಾರಿನ ಕಿಟಕಿಯಿಂದ ಕೈ ಹೊರಗೆ ಹಾಕಿ ಹ್ಯಾಂಡ್ಗನ್ನಿಂದ ಗುಂಡು ಹಾರಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಹಾರಿದ ಗುಂಡುಗಳು ಕೆಫೆಯ ಕಿಟಕಿಗಳು ಹಾಗೂ ಗೋಡೆಗೆ ಹೊಟ್ಟೆಯಾಗಿದ್ದು, ದಾಳಿಯ ಸಮಯದಲ್ಲಿ ಒಳಗೆ ಸಿಬ್ಬಂದಿ […]
 
        