ಆರಾಧನಾ ‘ನೆಕ್ಸ್ಟ್ ಲೆವೆಲ್’ : “ಯಾವ ಪಾತ್ರಕ್ಕೂ ನಾವು ಬ್ರಾಂಡ್ ಆಗಬಾರದು, ನಾವೇ ಬ್ರಾಂಡ್ ಆಗಬೇಕು”
‘ಕಾಟೇರ’ ಚಿತ್ರದ ನಂತರ ಆರಾಧನಾ ರಾಮ್ ಯಾವತ್ತೂ ಸುದ್ದಿಯಲ್ಲಿ ಇರಲಿಲ್ಲ. ಅವರ ಮುಂದಿನ ಹೆಜ್ಜೆ ಬಗ್ಗೆ ಊಹಾಪೋಹಗಳು ನಡೆಯುತ್ತಲೇ ಇವೆ. ಈಗ ಕೊನೆಗೂ ಅವರು ತಮ್ಮ ಎರಡನೇ ಚಿತ್ರವನ್ನು ಘೋಷಿಸಿದ್ದಾರೆ — ‘ನೆಕ್ಸ್ಟ್ ಲೆವೆಲ್’, ಉಪೇಂದ್ರ ಅವರ ಜೊತೆಯಲ್ಲಿ! ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ನಿರ್ಮಾಪಕ ತರುಣ್ ಶಿವಪ್ಪ ಅವರ ಸಂಯೋಜನೆಯ ಚಿತ್ರ ಇದು. “ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ” “ಎಲ್ಲೂ ಮಾಯವಾಗಿರಲಿಲ್ಲ,” ಎನ್ನುತ್ತಾರೆ ಆರಾಧನಾ.“ನಾನು ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದೆ. ‘ನೆಕ್ಸ್ಟ್ ಲೆವೆಲ್’ ಕಥೆ ಕೇಳುತ್ತಿದ್ದಂತೆಯೇ ತಕ್ಷಣ ಒಪ್ಪಿಕೊಂಡೆ. […]
 
        