ಒಂದೇ ಚಿತ್ರ; ನಾಯಕರು ಹಲವರು, ಮಲ್ಟಿಸ್ಟಾರರ್ ಚಿತ್ರಗಳು ಕಡಿಮೆ ಆಗಿದ್ದೇಕೆ?
ಡಿಸೆಂಬರ್ 25ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘45’ ಚಿತ್ರ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಕಾರಣವೊಂದೇ — ಇದು ಒಂದು ಮಲ್ಟಿಸ್ಟಾರರ್ ಚಿತ್ರ!ಶಿವಣ್ಣ ಮತ್ತು ಉಪೇಂದ್ರ ಜೊತೆಯಾಗಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಅವರು ಮುಂಚೆಯೇ ‘ಪ್ರೀತ್ಸೇ’ ಮತ್ತು ‘ಲವ ಕುಶ’ ಚಿತ್ರಗಳಲ್ಲಿ ನಟಿಸಿದ್ದರು. ಈ ಬಾರಿ ಅವರಿಬ್ಬರ ಜೊತೆಗೆ ರಾಜ್ ಬಿ. ಶೆಟ್ಟಿ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಕುತೂಹಲ ಸಹಜವಾಗಿ ಹೆಚ್ಚಿದೆ. ಇತ್ತೀಚಿನ […]
 
        