ಅಶ್ಲೀಲ ಕಾಮೆಂಟ್ ಪ್ರಕರಣ: 11 ಆರೋಪಿಗಳ ವಿರುದ್ಧ 380 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಸೋಶಿಯಲ್ ಮೀಡಿಯಾದಲ್ಲಿ ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿದ ಪ್ರಕರಣದಲ್ಲಿ ದರ್ಶನ್ ಅಭಿಮಾನಿಗಳ ವಿರುದ್ಧ ಸಿಸಿಬಿ ಸೈಬರ್ ಪೊಲೀಸ್ 380 ಪುಟಗಳ ಸುಧೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್ನಲ್ಲಿ ಆರೋಪಿಗಳ ಮೊಬೈಲ್‌ಗಳು, ಅಶ್ಲೀಲ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳು, ಶೇರ್ ಮಾಡಲಾದ ವಿಡಿಯೋ ಲಿಂಕ್‌ಗಳು, ರಮ್ಯಾ ನೀಡಿದ ಸ್ಟೇಟ್‌ಮೆಂಟ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ಆರೋಪಿಗಳ ಸ್ವ ಇಚ್ಛಾ ಹೇಳಿಕೆಗಳನ್ನೂ ಆಧಾರವಾಗಿ ಸೇರಿಸಲಾಗಿದೆ. ಒಟ್ಟು 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, 60 ದಿನಗಳ ತನಿಖಾ ಅವಧಿ ಮುಗಿಯುತ್ತಲೇ ದೋಷಾರೋಪಣ […]
 
        