‘ಕಾಂತಾರ: ಚಾಪ್ಟರ್ 1’ – ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಅದ್ಭುತ ಚಿತ್ರ!
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದಂತೆಯೇ, ಸಿನೆಮಾ ಮಂದಿರಗಳ ಮುಂದೆ ಅಭಿಮಾನಿಗಳ ಜಾತ್ರೆ ಶುರುವಾಯಿತು. ನಿನ್ನೆ ರಾತ್ರಿ ವಿಶೇಷ ಶೋಗಳಿಂದಲೇ ಹುರುಪು ಏರಿದರೆ, ಇಂದು ಬೆಳಿಗ್ಗೆ 5 ಗಂಟೆಗೆ ಆರಂಭವಾದ ಪ್ರದರ್ಶನಗಳು ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಪಡೆದಿವೆ. ಮೊದಲ ಶೋ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದು, ಸಿನಿಮಾ ಸುತ್ತಲೇ ಸಂಭ್ರಮದ ಜಾತ್ರೆ ಹರಿದಾಡುತ್ತಿದೆ. ಪ್ರೇಕ್ಷಕರ ಅಭಿಪ್ರಾಯಗಳಲ್ಲಿ ಸಾಮಾನ್ಯವಾಗಿರುವುದು – ರಿಷಬ್ ಶೆಟ್ಟಿ ಕಥೆ ಹೇಳುವ […]
 
        