ಕಾಂತಾರ ಚಾಪ್ಟರ್ 1 ಸಕ್ಸಸ್ ಬೆನ್ನಲ್ಲೇ ಮುಂಬೈ ನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ
‘ಕಾಂತಾರ ಅಧ್ಯಾಯ 1’ (Kantara Chapter 1) ಚಿತ್ರ ಯಶಸ್ಸಿನ ಸಂಭ್ರಮದಲ್ಲಿರುವ ರಿಷಬ್ ಶೆಟ್ಟಿ ಇದೀಗ ದೇವರ ಧಾಮಕ್ಕೆ ತೆರಳಿದ್ದಾರೆ. ದೇಶ-ವಿದೇಶಗಳಲ್ಲಿ ಬಾಕ್ಸ್ಆಫೀಸ್ನಲ್ಲಿ ದಾಖಲೆಗಳ ಮಳೆ ಸುರಿಸುತ್ತಿರುವ ಈ ಸಿನಿಮಾ ಈಗಾಗಲೇ ₹500 ಕೋಟಿ ಕ್ಲಬ್ ಸೇರಿದೆ. ಈ ಮಹಾ ಯಶಸ್ಸಿನ ಹಿನ್ನೆಲೆಯಲ್ಲಿ ರಿಷಬ್ ಮತ್ತು ನಿರ್ಮಾಪಕರು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಿಳಿ ಶರ್ಟ್ ಹಾಗೂ ಮುಂಡು ತೊಟ್ಟು ದೇವಾಲಯಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ಅಭಿಮಾನಿಗಳ ಗಮನ ಸೆಳೆದರು. […]
 
        