ಬಹುನಿರೀಕ್ಷಿತ ʻಮಾರ್ಟಿನ್ʼ ಸಿನಿಮಾ ಹೇಗಿದೆ..? ಕನ್ನಡ-ತೆಲುಗು ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್
ಇಂದು ವಿಶ್ವದಾದ್ಯಂತ ಮಾರ್ಟಿನ್ ಸಿನಿಮಾ ರಿಲೀಸ್ ಆಗಿದೆ. ಧ್ರುವ ಸರ್ಜಾ ಫ್ಯಾನ್ಸ್ ಬೆಳಗ್ಗೆಯಿಂದಾನೂ ಥಿಯೇಟರ್‌ನಲ್ಲಿಯೇ ಹಬ್ಬ ಮಾಡ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಿ ಫುಲ್ ಖುಷಿಯಾಗಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ 3 ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಅದರಲ್ಲೂ ಕರ್ನಾಟಕ ಹಾಗೂ ಹೈದ್ರಬಾದ್‌ನಲ್ಲಿ ಜೋಶ್ ಹೆಚ್ಚಾಗಿದೆ. ಬೆಂಗಳೂರಿನ ಆಲ್ಮೋಸ್ಟ್ ಥಿಯೇಟರ್‌ಗಳಲ್ಲಿ ಫ್ಯಾನ್ಸ್ ಅಬ್ಬರಿಸಿದ್ದಾರೆ. ಸಂಭ್ರಮಿಸಿದ್ದಾರೆ. ತೆಲುಗು ಮಂದಿ ಥಿಯೇಟರ್‌ನಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸಿನಿಮಾದ ನೋಡಿದ ಸಿನಿ ಪ್ರೇಕ್ಷಕರು ಈಗಾಗಲೇ […]