ಇಂದು ವಿಶ್ವದಾದ್ಯಂತ ಮಾರ್ಟಿನ್ ಸಿನಿಮಾ ರಿಲೀಸ್ ಆಗಿದೆ. ಧ್ರುವ ಸರ್ಜಾ ಫ್ಯಾನ್ಸ್ ಬೆಳಗ್ಗೆಯಿಂದಾನೂ ಥಿಯೇಟರ್‌ನಲ್ಲಿಯೇ ಹಬ್ಬ ಮಾಡ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಿ ಫುಲ್ ಖುಷಿಯಾಗಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ 3 ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಅದರಲ್ಲೂ ಕರ್ನಾಟಕ ಹಾಗೂ ಹೈದ್ರಬಾದ್‌ನಲ್ಲಿ ಜೋಶ್ ಹೆಚ್ಚಾಗಿದೆ. ಬೆಂಗಳೂರಿನ ಆಲ್ಮೋಸ್ಟ್ ಥಿಯೇಟರ್‌ಗಳಲ್ಲಿ ಫ್ಯಾನ್ಸ್ ಅಬ್ಬರಿಸಿದ್ದಾರೆ. ಸಂಭ್ರಮಿಸಿದ್ದಾರೆ. ತೆಲುಗು ಮಂದಿ ಥಿಯೇಟರ್‌ನಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ.
ಇನ್ನು ಸಿನಿಮಾದ ನೋಡಿದ ಸಿನಿ ಪ್ರೇಕ್ಷಕರು ಈಗಾಗಲೇ ಟ್ವಿಟ್ವರ್‌ನಲ್ಲಿ ತಮ್ಮ ರಿವ್ಯೂ ಬರೆದಿದ್ದಾರೆ. ಸಾಹಸ ದೃಶ್ಯಗಳು ಉತ್ತಮವಾಗಿವೆ, ಕಥೆ ಚೆನ್ನಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲಾಗಿದೆ, ಸಾಹಸ ದೃಶ್ಯಕ್ಕೆ ಬಿಜಿಎಂ ಸೂಪರ್, ಧ್ರುವಸರ್ಜಾ ಕನ್ನಡದ ಶಕ್ತಿ ತೋರಿಸಿದ್ದಾರೆ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ದಸರಾ ಹಬ್ಬದ ಟೈಮ್‌ನಲ್ಲಿ ಮಾರ್ಟಿನ್ ದರ್ಬಾರ್ ಎಂದೆಲ್ಲಾ ಕೊಂಡಾಡಿದ್ದಾರೆ.
ಅಭಿಮಾನಿಗಳಿಗೆ ಧ್ರುವ ಸರ್ಜಾ ಅವರ ಆಕ್ಷನ್ ಸೀಕ್ವೆನ್ಸ್ ಬಹಳ ಇಷ್ಟವಾಗಿದೆ. ಧ್ರುವ ಮೊದಲ ಬಾರಿಗೆ ಎರಡು ರೀತಿಯಲ್ಲಿ ಕಾಣಿಸಿಕೊಂಡಿದ್ದು, ಒಮ್ಮೆ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರೆ, ಇನ್ನೊಂದು ಕಡೆ ನಟೋರಿಯಸ್ ಆಗಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಆಫ್‌ನಲ್ಲಿ ಒಂದಷ್ಟು ಲವ್, ಸಸ್ಪೆನ್ಸ್ ಮೂಲಕ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಎಪಿ ಅರ್ಜುನ್. ಮೊದಲೇ ನೂರು ಕೋಟಿ ಬಜೆಟ್ ಸಿನಿಮಾ ಎಂದಾಗ ಅಲ್ಲಿ ಅದ್ದೂರಿತನ ಇರಲೇಬೇಕು. ಹೀಗಾಗಿ ಸಿನಿಮಾದ ತುಂಬೆಲ್ಲಾ ಅದ್ದೂರಿತನ ಎದ್ದು ಕಾಣಿಸುತ್ತಿದೆ. ಸದ್ಯ ರಜಾ ದಿನಗಳಿಗೆ ಜನರನ್ನು ಥಿಯೇಟರ್‌ಗೆ ಕರೆಸಿಕೊಲ್ಳುವ ಆಕ್ಷನ್ ಸಿನಿಮಾ ಮಾರ್ಟಿನ್ ಆಗಿದ್ದು, ನೋಡಿದವರು ಒಪ್ಪಿ ಕೊಂಡಾಡಿದ್ದಾರೆ.