Sandalwood Leading OnlineMedia

ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ʻಮಾರ್ಟಿನ್‌ʼ : ಕನಸಿನ ಕೂಸಿನ ಬಗ್ಗೆ ಎಪಿ ಅರ್ಜುನ್‌ ಟಾಕ್..!

ಎಲ್ಲೆಲ್ಲೂ ಮಾರ್ಟಿನ್‌ ಸಿನಿಮಾದ್ದೇ ಮಾತು. ರಿಲೀಸ್‌ಗೆ ಇನ್ನುಳಿದಿರುವುದು ಒಂದೇ ದಿನ. ಆಯುಧ ಪೂಜೆಯ ದಿನ ಅದ್ದೂರಿ ಆಕ್ಷನ್‌ ಚಿತ್ರದೊಂದಿಗೆ ಧ್ರುವ ಸರ್ಜಾ ಅವರು ತೆರೆ ಮೇಲೆ ರಾರಾಜಿಸಲಿದ್ದಾರೆ. ಇದು ಕೇವಲ ಕರ್ನಾಟಕವಲ್ಲ ಇಡೀ ದೇಶದಲ್ಲಿ, ಹಲವು ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಇದು ಎಪಿ ಅರ್ಜುನ್‌ ಕನಸಿನ ಕೂಸು. ಉದಯ್‌ ಮೆಹ್ತಾ ಅವರ ಭರವಸೆಯ ಸಿನಿಮಾ, ಧ್ರುವ ಸರ್ಜಾ ಅವರ ಫ್ಯಾನ್ಸ್‌ ಸಂಭ್ರಮಿಸುವ ಸಿನಿಮಾ. ಸಿನಿಮಾಗಾಗಿ ಶ್ರಮಿಸಿದ್ದು ಒಂದೆರಡು ದಿನವಲ್ಲ, ಬರೋಬ್ಬರಿ ಮೂರು ವರ್ಷ. ಅಷ್ಟು ಅನುಭವವನ್ನು ಎಪಿ ಅರ್ಜುನ್‌ ಚಿತ್ತಾರದೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ತಾರ ಯೂಟ್ಯೂಬ್‌ ಚಾನೆಲ್‌ನಲ್ಲಿ ಫುಲ್‌ ಇಂಟರ್‌ ವ್ಯೂ ಇದೆ. ಒಮ್ಮೆ ಪರಿಶೀಲಿಸಿ.

 

*ಎಪಿ ಅರ್ಜುನ್ ಅಂಡ್ ಮಾರ್ಟಿನ್ ಬಗ್ಗೆ ವಿವರಿಸೋದಾದ್ರೆ..?

ʻಎಪಿ ಅರ್ಜುನ್ ಅಂದ್ರೆ ಏನು..? ಎಪಿ ಅರ್ಜುನ್ ಸಿನಿಮಾ ಅಂದ್ರೆ ಏನು..? ಸಿನಿಮಾ ಅಂದ್ರೆ ಎಷ್ಟು ಇಷ್ಟಪಡ್ತಾನೆ..? ಸಿನಿಮಾಗೆ ಏನೆಲ್ಲಾ ಮಾಡಿದ್ದಾನೆ ಎಂಬುದು ಸಿನಿಮಾ ರಿಲೀಸ್ ಆದಾಗ ಗೊತ್ತಾಗುತ್ತದೆ. ಮೂರುವರೆ ವರ್ಷದ ಶ್ರಮ ಈ ಸಿನಿಮಾದಲ್ಲಿದೆ. ಹತ್ತು ಸಿನಿಮಾಗೆ ಹಾಕುವಷ್ಟು ಎಫರ್ಟ್ ಒಂದೇ ಸಿನಿಮಾಗೆ ಹಾಕಿದ್ದೀವಿ. ಎಪಿ ಅರ್ಜುನ್ ಸಿನಿಮಾ ಅಂದ್ರೆ ಜನ ಬರ್ತಾರೆ ಅಂದ್ರೆ ಜನ ನಾನು ಮಾಡಿದ ಸಿನಿಮಾಗಳನ್ನು ಒಪ್ಪಿದ್ದಾರೆʼ

* ಸಿನಿಮಾದಲ್ಲಿನ ಶ್ವಾನದ ವಿಶೇಷತೆ..?

‘ಈ ಸಿನಿಮಾದಲ್ಲಿರುವ ಶ್ವಾನ ಇಡೀ ಸಿನಿಮಾ ಇರುತ್ತದೆ. ಮ್ಯಾಡಿ ಅಂತ ಶ್ವಾನದ ಹೆಸರು. ಸಿನಿಮಾದಲ್ಲಿ ಒನ್ ಆಫ್ ದ ಕ್ಯಾರೆಕ್ಟರ್. ಮನುಷ್ಯರು ನಿಯತ್ತಿಗೆ ಯೋಗ್ಯರಲ್ಲ, ಶ್ವಾನವೇ ನಿಯತ್ತಿಗೆ ಯೋಗ್ಯ ಎಂಬ ನೀತಿ. ಒಂದು ಸೀನ್ ನಲ್ಲಿ ಇದೆ. ನನ್ ಹತ್ರ ಕೂತು ಊಟ ಮಾಡುವುದಕ್ಕೆ ಇವರಿಗ್ಯಾರಿಗೂ ಯೋಗ್ಯತೆ ಇಲ್ಲ, ನಿನಗೆ ಮಾತ್ರ ಇರೋದು. ಯಾಕಂದ್ರೆ ನಿಂಗೆ ನಿಯತ್ತು ಜಾಸ್ತಿ ಅಂತ ಹೇಳಿ ಆ ನಾಯಿ ಜೊತೆ ಕೂತು ಊಟ ಮಾಡ್ತಾರೆ’

* ಮಾರ್ಟಿನ್ ಯಾವ ಥರದ ಸಿನಿಮಾ..?

‘ಇದೊಂದು ಗ್ಯಾಂಗ್ ಸ್ಟರ್ ಸಿನಿಮಾ. ಗ್ಯಾಂಗ್ ಸ್ಟರ್ ಅಂತ ಬಂದ್ರೆ ಬೆಂಗಳೂರಲ್ಲೂ ಗ್ಯಾಂಗ್ ಸ್ಟರ್, ಮುಂಬೈನಲ್ಲೂ ಗ್ಯಾಂಗ್ ಸ್ಟರ್ಸ್. ಆ ಗ್ಯಾಂಗ್ ಸ್ಟರ್ ಥೀಮ್ ನಲ್ಲಿ ಹೋಗುವಂತ ಕಥೆ ಇದು. ಯೂನಿವರ್ಸಲ್ ಆಗಿ ಹೋಗುವ ಕಥೆ ಅದು. ಈಗ ಕಥಯನ್ನ ಬಿಟ್ಟುಕೊಡುವ ಹಾಗಿಲ್ಲ’

* ಧ್ರುವ ಪಾತ್ರ ಹೇಗಿರುತ್ತೆ..?

‘ಸಿನಿಮಾದಲ್ಲಿ ಧ್ರುವ ಅವರದ್ದು ಹೇರ್ ಸ್ಟೈಲ್ ಬದಲಾಗುತ್ತಾ ಇರುತ್ತದೆ. ಅಂದ್ರೆ ಕಾಸ್ಟ್ಯೂಮ್ ಬದಲಾದಂಗೆ ಹೇರ್ ಸ್ಡೈಲ್ ಕೂಡ ಬದಲಾಗುತ್ತದೆ’

* ವಿಎಫ್ಎಕ್ಸ್ ಬಗ್ಗೆ ಹೇಳೋದಾದ್ರೆ..?

‘ಎಡಿಟಿಂಗ್ ಮುಗೀತು, ಡಬ್ಬಿಂಗ್ ಮುಗೀತು ಆದರೆ ವಿಎಫ್ಎಕ್ಸ್ ಕೂತು ನಾವೂ ಮಾಡುವಂಥದ್ದಲ್ಲ. ನಮ್ಮ ಟೀಂನಲ್ಲಿ ಯಾರೋ ಒವ್ಬರು ಮಾಡುವಂಥದ್ದಲ್ಲ. ನಮಗೆ ಏನು ಬೇಕು ಅನ್ನೋದನ್ನ ಒಂದು ಫ್ರೇಮ್ ನಲ್ಲಿ ಮೆನ್ಶನ್ ಮಾಡಿ, ಕಳುಹಿಸಿದ್ರೆ ಆ ಟೀಂಗೆ ಕಳುಹಿಸಬೇಕು. ಆ ಟೀಂನಲ್ಲಿ ಹದಿನೆಂಟು ಮಂದಿ ಇದ್ದಾರೆ. ಅವರು ಮೇಲ್ ಮಾಡುತ್ತಾರೆ. ಅದನ್ನ ನಾವೂ ಚೆಕ್ ಮಾಡಿಕೊಳ್ಳುತ್ತಿರಬೇಕು. ನಾವೂ ಕೂತು ಮಾಡಿಸೋದಲ್ಲ ಅದು’ ಎಂದು ತಮ್ಮ ಸಿನಿಮಾದ ವಿಶೇಷತೆ ಬಗ್ಗೆ ಮಾಅತನಾಡಿದ್ದಾರೆ. ಇಡೀ ತಂಡಕ್ಕೆ ಚಿತ್ತಾರ ವತಿಯಿಂದ ಶುಭವಾಗಲಿ. 

Share this post:

Related Posts

To Subscribe to our News Letter.

Translate »