ಸುಧಿ ಅವರು ಬಿಗ್ ಬಾಸ್ಗೆ ಬರುತ್ತಾರೆ ಎಂಬ ಸುದ್ದಿ ಮೊದಲೇ ಹರಿದಾಡಿತ್ತು. ಈ ಬಗ್ಗೆ ಹಲವು ಸಂದರ್ಶನಗಳಲ್ಲಿಯೂ ಅವರನ್ನು ಪ್ರಶ್ನಿಸಲಾಗಿತ್ತು. ಆದರೆ, ಸಿನಿಮಾ ಕಮಿಟ್ಮೆಂಟ್ ಹೆಚ್ಚಿರುವುದರಿಂದ “ನಾನಂತೂ ದೊಡ್ಮನೆಗೆ ಹೋಗಲ್ಲ” ಎಂದು ಅವರು ನೇರವಾಗಿ ತಿಳಿಸಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಆದರೆ ಈಗ, “ಬರಲ್ಲ, ಬರಲ್ಲ” ಎಂಬ ಮಾತುಗಳನ್ನು ಮರೆತು, ಸುಧಿ ದೊಡ್ಮನೆಗೆ ತೆರಳಿದ್ದಾರೆ.

ಬಿಗ್ ಬಾಸ್ ವೇದಿಕೆ ಏರಿದ ಬಳಿಕ, ಕಾಕ್ರೋಚ್ ಸುಧಿ ತಮ್ಮ ಪ್ರವೇಶದ ಹಿಂದಿನ ಕಾರಣವನ್ನು ಹಂಚಿಕೊಂಡರು:
“ನಿಮ್ಮ ಜೊತೆ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ, ಆದರೆ ಇಲ್ಲಿ ಅವಕಾಶ ಸಿಕ್ಕಿತು. ಸಂದರ್ಶನದಲ್ಲಿ ಸಿಗುವುದರಿಂದ ಭಿನ್ನ, ಆದರೆ ಇಲ್ಲಿ ನಿಜವಾದ ದರ್ಶನ ಸಿಗಲಿದೆ,” ಎಂದು ಹೇಳಿದರು.
ಸುಧಿ ತಮ್ಮ ನಿಜವಾದ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು:
“ಪ್ರತಿಯೊಬ್ಬ ಆರ್ಟಿಸ್ಟ್ಗೂ ಕ್ಯಾಮೆರಾ ಎದುರು ಕ್ಲೋಸ್ಅಪ್ ಶಾಟ್ ಬೇಕು ಅನಿಸುತ್ತದೆ. ಆದರೆ, ಇಲ್ಲಿ ನೂರಾರು ಕ್ಯಾಮೆರಾಗಳು 24 ಗಂಟೆ ಜನರಿಗೆ ತೋರಿಸುತ್ತವೆ ಎಂದಾಗ ಬಿಡಲು ಸಾಧ್ಯವೇ ಇಲ್ಲ. ನಾನು ಸಂಭಾವನೆಗಾಗಿ ಬಂದಿಲ್ಲ, ಹಂಬಲಕ್ಕಾಗಿ ಬಂದಿದ್ದೇನೆ. ನನ್ನನ್ನು ಅರಿತುಕೊಳ್ಳಲು ಇಲ್ಲಿಲ್ಲ, ನಾನು ಏನು ಎಂಬುದನ್ನು ತೋರಿಸಲು ಬಂದಿದ್ದೇನೆ,” ಎಂದು ಸುದೀಪ್ ಎದುರು ಹೇಳಿದರು.
‘ಕಾಕ್ರೋಚ್’ ಸುಧಿ ವಿಲನ್ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಶಿವರಾಜ್ಕುಮಾರ್ ನಟನೆಯ ‘ಟಗರು’ ಚಿತ್ರದಲ್ಲಿ ತಮ್ಮ ಪಾತ್ರದ ನಂತರ ‘ಕಾಕ್ರೋಚ್ ಸುಧಿ’ ಎಂದೇ ಫೇಮಸ್ ಆಗಿದರು. ಈ ಯಶಸ್ಸಿನ ಬಳಿಕ ಅವರಿಗೆ ಹಲವಾರು ಆಫರ್ಗಳು ಬಂದಿದ್ದರೂ, ತಮ್ಮ ಪ್ರಮುಖ ಸಿನಿಮಾಗಳನ್ನು ಮುಂದಕ್ಕೆ ಬಿಟ್ಟು, ತಮ್ಮ ಹಂಬಲಕ್ಕಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.
