ಫೆಬ್ರವರಿ 7ರಿಂದ ‘ಅಮೇಜಾನ್ ಪ್ರೈಂನಲ್ಲಿ ‘ಗೇಮ್ ಚೇಂಜರ್’
ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಚಿತ್ರಮಂದಿರದಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗಲೇ ಇಲ್ಲ. ಬಾಕ್ಸ್ ಆಫೀಸ್ನಲ್ಲಿ ಸೋತ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಒಟಿಟಿಯಲ್ಲಾದರೂ ಜನರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳಬಹುದು ಎಂಬ ನಂಬಿಕೆ ಚಿತ್ರತಂಡಕ್ಕೆ ಇದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ‘ಗೇಮ್ ಚೇಂಜರ್’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಚಿತ್ರಮಂದಿರದಲ್ಲಿ ರಿಲೀಸ್ ಆಗಿ ಒಂದು ತಿಂಗಳು ಕಳೆಯುವುದರೊಳಗೆ ‘ಗೇಮ್ ಚೇಂಜರ್’ ಸಿನಿಮಾ ಒಟಿಟಿಗೆ ಬರುವಂತಾಗಿದೆ. ಫೆಬ್ರವರಿ 7ರಿಂದ […]