ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಕೋಟಿ ಕೋಟಿ ವೀವ್ಸ್ ಪಡೆದು ದಾಖಲೆ ಬರೆದಿತ್ತು. ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಸದ್ದಿಲ್ಲದೇ ಮತ್ತೆ ಸಿನಿಮಾ ಚಿತ್ರೀಕರಣ ಪುನರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಮುಂಬೈನಲ್ಲಿ ಒಂದು ತಿಂಗಳ ಕಾಲ ಭರ್ಜರಿ ಚಿತ್ರೀಕರಣ ನಡೆದಿತ್ತು. ಸೆಟ್‌ಗೆ ಯಶ್, ಕಿಯಾರಾ ಹೋಗಿ ಬರುತ್ತಿದ್ದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿತ್ತು. ಸದ್ಯ ಗೋವಾದಲ್ಲಿ ಚಿತ್ರದ ಹಾಡೊಂದರ ಚಿತ್ರೀಕರಣ ನಡೀತಿದೆ ಎನ್ನಲಾಗ್ತಿದೆ. ಯಶ್ ಹಾಗೂ ಕಿಯಾರಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗ್ತಿದೆ. ಗಣೇಶ ಆಚಾರ್ಯ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.
ಗೋವಾದ ಹೊರ ವಲಯದಲ್ಲಿ ‘ಟಾಕ್ಸಿಕ್’ ಚಿತ್ರೀಕರಣ ನಡೆಯುತ್ತಿದೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ. ಇದೊಂದು ಡುಯೆಟ್ ಸಾಂಗ್ ಎನ್ನಲಾಗುತ್ತಿದೆ. ಸಿಕ್ಕಾಪಟ್ಟೆ ಹಾಟ್ ಅವತಾರದಲ್ಲಿ ಕಿಯಾರಾ ಮಿಂಚಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಖುಷಿಯಾಗಿದ್ದು ಆದಷ್ಟು ಬೇಗ ಸಿನಿಮಾ ನೋಡಬೇಕು ಎಂದು ಕಾಯುತ್ತಿದ್ದಾರೆ.
60-70ರ ದಶಕದ ಕಥೆ ‘ಟಾಕ್ಸಿಕ್’ ಚಿತ್ರದಲ್ಲಿದೆ. ಗೋವಾದ ಡ್ರಗ್ಸ್ ಮಾಫಿಯಾ ಸುತ್ತಾ ಇಡೀ ಕಥೆ ಸುತ್ತುತ್ತದೆ ಎಂದು ಹೇಳಲಾಗ್ತಿದೆ. ಹಾಗಾಗಿ ಗೋವಾದಲ್ಲಿ ಹೆಚ್ಚಿನ ಚಿತ್ರೀಕರಣ ನಡೆಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮತ್ತೊಮ್ಮೆ ಯಶ್ ಗ್ಯಾಂಗ್‌ಸ್ಟರ್ ಅವತಾರದಲ್ಲೇ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ. ಬರ್ತ್‌ಡೇ ಟೀಸರ್ ಅದರ ಸುಳಿವು ಕೊಟ್ಟಿದೆ.
ಅಕ್ಷಯ್ ಒಬೆರಾಯ್ ಕೂಡ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆ ರಿವೀಲ್ ಮಾಡಿದ್ದರು. “ಸದ್ಯ ನಾನು ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುತ್ತಿದ್ದೀನಿ. ಯಶ್ ಹಾಗೂ ನಯನತಾರ ಕೂಡ ತಂಡದಲ್ಲಿದ್ದಾರೆ. ಸ್ಟಾರ್‌ಕಾಸ್ಟ್ ಬಗ್ಗೆ ಇದಕ್ಕಿಂತ ಹೆಚ್ಚು ಹೇಳುವಂತಿಲ್ಲ.” ಎಂದು ಅಕ್ಷಯ್ ಹೇಳಿದ್ದು ವೈರಲ್ ಆಗಿತ್ತು. ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನತಾರಾ ನಟಿಸಿದ್ದಾರೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಆಕೆ ಭಾಗಿ ಆಗಿದ್ದರು ಎಂದು ಗುಲ್ಲಾಗಿತ್ತು. ಇನ್ನು ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ರವಿ ಬಸ್ರೂರು ‘ಟಾಕ್ಸಿಕ್’ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಸಿದ್ಧವಾಗುತ್ತಿದೆ.