ಸಂಭಾವನೆ ಹೆಚ್ಚಿಸಿಕೊಂಡುಬಿಟ್ರು ವರಲಕ್ಷ್ಮಿ ಹಾಗೂ ಅಂಜಲಿ
ಸಿನಿಮಾ ಕಲಾವಿದರು, ತಂತ್ರಜ್ಞರ ಸಂಭಾವನೆ ವಿಚಾರ ಸದಾ ಗುಟ್ಟಾಗಿಯೇ ಇರುತ್ತದೆ. ಕೋಟಿ ಕೋಟಿ ಸಂಭಾವನೆ ಪಡೆದರೂ ಅದನ್ನು ಸ್ಟಾರ್ ನಟ, ನಟಿಯರು ಬಹಿರಂಗವಾಗಿ ಹೇಳಿಕೊಳ್ಳಲ್ಲ. ಸಿನಿಮಾ ಗೆದ್ದರೆ ಸಹಜವಾಗಿಯೇ ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. ಸೋತರೆ ತಗ್ಗಿಸಿಕೊಳ್ಳುತ್ತಾರೆ. ಒಟ್ಟಾರೆ ಸಂಭಾವನೆ ದೊಡ್ಡ ವಿಷಯವೇ ಸರಿ. ತಮಿಳು ನಟಿಯರಾದ ಅಂಜಲಿ ಹಾಗೂ ವರಲಕ್ಷ್ಮಿ ಶರತ್‌ಕುಮಾರ್ ಇದೀಗ ವೇದಿಕೆಯಲ್ಲೇ ತಮ್ಮ ಸಂಭಾವನೆ ಹೆಚ್ಚಿಸಿಕೊಂಡುಬಿಟ್ಟಿದ್ದಾರೆ. ವಿಶಾಲ್ ನಟನೆಯ ‘ಮದಗಜ ರಾಜ’ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡು ತಕ್ಕಮಟ್ಟಿಗೆ ಸದ್ದು ಮಾಡಿತ್ತು. 12 ವರ್ಷಗಳ ಹಿಂದೆ […]