ಅಪ್ಪು ಸ್ಮರಣೆಯಲ್ಲಿ ಅಭಿಮಾನಿಗಳು : ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
ಬೆಂಗಳೂರು: ಅಕ್ಟೋಬರ್ 29 ಎಂದಾಕ್ಷಣಾ ಎಲ್ಲರ ನೋವು ಮತ್ತೆ ಮರುಕಳಿಸುತ್ತೆ. ಅಪ್ಪು ಸದಾ ನೆನೆಪಿನಾಳದಲ್ಲೇ ಉಳಿದರು, ಈ ದಿನ ಬಂತೆಂದರೆ ಆ ಕರಾಳ ದಿನವೆಲ್ಲಾ ನೆನಪಾಗುತ್ತದೆ. ಮೂರು ವರ್ಷದ ಹಿಂದೆ ಇಡೀ ರಾಜ್ಯ ನಿಜಕ್ಕೂ ಈ ದಿನ ಸ್ತಬ್ಧವಾಗಿತ್ತು. ಅಪ್ಪು ನಿಧನ ಅಂತ ಸುದ್ದಿ ಕೇಳಿನೆ ಎಷ್ಟೋ ಮನಸ್ಸುಗಳು ಒಡೆದು ಹೋಗಿತ್ತು. ಈಗ ಅಪ್ಪು ದೈಹಿಕವಾಗಿ ಇಲ್ಲದೆ ಮೂರು ವರ್ಷ. ಅಭಿಮಾನಿಗಳ ಮನಸ್ಸಲ್ಲಿ ನೋವು ಹಾಗೇ ಇದೆ. ಅಪ್ಪು ಹೊಸ ಸಿನಿಮಾವಿಲ್ಲ. ಕಲೆಯ ಮೂಲಕ ಅವರು ಜೀವಂತವಾಗಿದ್ದಾರೆ. […]