Sandalwood Leading OnlineMedia

ಅಪ್ಪು ಸ್ಮರಣೆಯಲ್ಲಿ ಅಭಿಮಾನಿಗಳು : ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

ಬೆಂಗಳೂರು: ಅಕ್ಟೋಬರ್ 29 ಎಂದಾಕ್ಷಣಾ ಎಲ್ಲರ ನೋವು ಮತ್ತೆ ಮರುಕಳಿಸುತ್ತೆ. ಅಪ್ಪು ಸದಾ ನೆನೆಪಿನಾಳದಲ್ಲೇ ಉಳಿದರು, ಈ ದಿನ ಬಂತೆಂದರೆ ಆ ಕರಾಳ ದಿನವೆಲ್ಲಾ ನೆನಪಾಗುತ್ತದೆ. ಮೂರು ವರ್ಷದ ಹಿಂದೆ ಇಡೀ ರಾಜ್ಯ ನಿಜಕ್ಕೂ ಈ ದಿನ ಸ್ತಬ್ಧವಾಗಿತ್ತು. ಅಪ್ಪು ನಿಧನ ಅಂತ ಸುದ್ದಿ ಕೇಳಿನೆ ಎಷ್ಟೋ ಮನಸ್ಸುಗಳು ಒಡೆದು ಹೋಗಿತ್ತು. ಈಗ ಅಪ್ಪು ದೈಹಿಕವಾಗಿ ಇಲ್ಲದೆ ಮೂರು ವರ್ಷ. ಅಭಿಮಾನಿಗಳ ಮನಸ್ಸಲ್ಲಿ ನೋವು ಹಾಗೇ ಇದೆ.

ಅಪ್ಪು ಹೊಸ ಸಿನಿಮಾವಿಲ್ಲ. ಕಲೆಯ ಮೂಲಕ ಅವರು ಜೀವಂತವಾಗಿದ್ದಾರೆ. ಹೀಗಾಗಿ ಅವರು ನಟಿಸಿರುವ ಸಿನಿಮಾಗಳಲ್ಲೇ ಅವರನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ಇಂದು ಪುನೀತ್ ರಾಜ್‍ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಹೂಗಳಿಂದ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದಾನೇ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಅಪ್ಪು ಸಮಾಧಿ ಮೇಲೆ ಇಡಲು ಹೂಗಳನ್ನು ತಂದಿದ್ದಾರೆ. ಫೋಟೋ ಫ್ರೇಮ್ ಗಳನ್ನು ತಂದಿದ್ದಾರೆ. ಅಪ್ಪು ಸಂಪಾದಿಸಿರುವ ಅಭಿಮಾನಿಗಳು ಕಡಿಮೆ ಏನು ಇಲ್ಲ. ಸಾಲಗಿ ಬಂದು ಎಲ್ರೂ ಹೂ ಇಟ್ಟು, ಫೋಟೋ ತೆಗೆಸಿಕೊಂಡು ಸಾಗುತ್ತಿದ್ದಾರೆ.

ಇಂದು ಅಪ್ಪುಅಭಿಮಾನಿಗಳಿಂದ ಅನ್ನದಾನ, ರಕ್ತದಾನದಂತ ಸಮಾಜಮುಖಿ ಕಾರ್ಯಗಳು ನಡೆಯಲಿವೆ. ಅಪ್ಪು ಸಮಾಧಿ ನೋಡಲು ಬಂದಿರುವ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಪ್ಪು ಬದುಕನ್ನೇ ಸ್ಪೂರ್ತಿಯಾಗಿ ಪಡೆದಿರುವ ಅಭಿಮಾನಿಗಳು ತಮ್ಮ ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದಾರೆ. ಸಮಾಧಿ ಬಳಿ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಲಿದ್ದಾರೆ. ಸದ್ಯಕ್ಕೆ ಬೆಳಗ್ಗೆಯಿಂದಾನೂ ಅಭಿಮಾನಿಗಳೇ ಇದ್ದಾರೆ. ರಾಘವೇಂದ್ರ ರಾಜ್‍ಕುಮಾರ್, ಅಶ್ವಿನಿ, ಮಕ್ಕಳಿ, ಯುವ, ವಿನಯ್ ಸೇರಿದಂತೆ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಲಿದ್ದಾರೆ.

 

Share this post:

Related Posts

To Subscribe to our News Letter.

Translate »