ʻಚಿತ್ತಾರʼ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಶಿವಕುಮಾರ್ ಅವರಿಗೆ ಒಲಿದ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ..!
ಸಿನಿಮಾ ಕ್ಷೇತ್ರದಲ್ಲಿ 16 ವಷಗಳ ಯಶಸ್ವಿ ಪಯಣದಲ್ಲಿ ಸಾಗುತ್ತಿರುವ ಮಾಸಿಕ ಪತ್ರಿಕೆ ಅದು ಚಿತ್ತಾರ. ಹಲವು ಸವಾಲುಗಳನ್ನು ಎದುರಿಸಿ, ಇಂದಿಗೂ ಅದೇ ಸಕ್ಸಸ್ ಹಾದಿಯಲ್ಲಿ ಪತ್ರಿಕೆ ಮುನ್ನಡೆಯುತ್ತಿದೆ. ಇದಕ್ಕೆಲ್ಲ ಕಾರಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಶಿವಕುಮಾರ್. ಇವರ ವಿಭಿನ್ನ ಆಲೋಚನೆ, ಸಿಬ್ಬಂದಿಗಳಿಗೆ ನೀಡುವ ಉತ್ಸಾಹ, ಜೊತೆಗೆ ನಿಂತು ಕೊಡುವ ಎಲ್ಲಾ ರೀತಿಯ ಸಹಕಾರದಿಂದ ಚಿತ್ತಾರ ಪತ್ರಿಕೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಲೇ ಸಾಗಿದೆ. ಇಡೀ ಕನ್ನಡ ಇಂಡಸ್ಟ್ರಿ ಚಿತ್ತಾರ ಪತ್ರಿಕೆಯ ಬಗ್ಗೆ ಇಂದಿಗೂ ವಿಶ್ವಾಸ ಉಳಿಸಿಕೊಂಡಿದೆ, ಆತ್ಮೀಯತೆ ಹೊಂದಿದೆ […]