ಸಿನಿಮಾ ಕ್ಷೇತ್ರದಲ್ಲಿ 16 ವಷಗಳ ಯಶಸ್ವಿ ಪಯಣದಲ್ಲಿ ಸಾಗುತ್ತಿರುವ ಮಾಸಿಕ ಪತ್ರಿಕೆ ಅದು ಚಿತ್ತಾರ. ಹಲವು ಸವಾಲುಗಳನ್ನು ಎದುರಿಸಿ, ಇಂದಿಗೂ ಅದೇ ಸಕ್ಸಸ್ ಹಾದಿಯಲ್ಲಿ ಪತ್ರಿಕೆ ಮುನ್ನಡೆಯುತ್ತಿದೆ. ಇದಕ್ಕೆಲ್ಲ ಕಾರಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಶಿವಕುಮಾರ್. ಇವರ ವಿಭಿನ್ನ ಆಲೋಚನೆ, ಸಿಬ್ಬಂದಿಗಳಿಗೆ ನೀಡುವ ಉತ್ಸಾಹ, ಜೊತೆಗೆ ನಿಂತು ಕೊಡುವ ಎಲ್ಲಾ ರೀತಿಯ ಸಹಕಾರದಿಂದ ಚಿತ್ತಾರ ಪತ್ರಿಕೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಲೇ ಸಾಗಿದೆ. ಇಡೀ ಕನ್ನಡ ಇಂಡಸ್ಟ್ರಿ ಚಿತ್ತಾರ ಪತ್ರಿಕೆಯ ಬಗ್ಗೆ ಇಂದಿಗೂ ವಿಶ್ವಾಸ ಉಳಿಸಿಕೊಂಡಿದೆ, ಆತ್ಮೀಯತೆ ಹೊಂದಿದೆ ಎಂದರೆ ಅದಕ್ಕೆ ಕಾರಣ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಶಿವಕುಮಾರ್ ಅವರ ಶ್ರಮವೇ ಕಾರಣ.
ಇಂದು ಬಹಳ ಹೆಮ್ಮೆಯ ಸಂಗತಿ ಎಂದರೆ ಕೆ.ಶಿವಕುಮಾರ್ ಅವರ ಸಾಧನೆಗೆ ಗೌರವ ಸಿಕ್ಕಿದೆ. ಮತ್ತೊಂದು ಗರಿ ಅವರ ಮುಡಿಗೇರಿದೆ. ಪ್ರೆಸ್ ಕ್ಲಬ್ ವತಿಯಿಂದ ಪ್ರತಿವರ್ಷ ಸಾಧಕರಿಗೆ ನೀಡಲಾಗುವ ಪ್ರೆಸ್ ಕಲ್ಬ್ ವಾರ್ಷಿಕ ಪ್ರಶಸ್ತಿಗೆ ಈ ವರ್ಷ ಕೆ.ಶಿವಕುಮಾರ್ ಅವರು ಕೂಡ ಭಾಗಿಯಾಗಿರುವುದು ಸಂತಸದ ಹಾಗೂ ಹೆಮ್ಮಯ ವಿಚಾರವಾಗಿದೆ.
ಪ್ರೆಸ್ ಕ್ಲಬ್‌ನಲ್ಲಿ ಭಾನುವಾರ ಈ ಪ್ರಶಸ್ತಿಯನ್ನು ವಿತರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಲವು ಸಾಧಕರು ಹಾಗೂ ರಾಜಕಾರಣಿಗಳ ಎದುರು ಚಿತ್ತಾರ ವ್ಯವಸ್ಥಾಪಕ ನಿರ್ದೇಶಕರು ಪ್ರಶಸ್ತಿ ಸ್ವೀಕಾರ ಮಾಡಿ ಹೆಮ್ಮೆ ಪಟ್ಟರು.