Sandalwood Leading OnlineMedia

ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಗೆ ಕೂಡಿ ಬಂತು ಕಂಕಣ ಭಾಗ್ಯ : ಆ ವಧು ಯಾರು..?

Zomato CEO marries ex Mexican model: ಜೋಮಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಮೆಕ್ಸಿಕನ್​ನ ಮಾಜಿ ಮಾಡಲ್ ಗ್ರೇಷಿಯಾ ಮುನೋಜ್ ಎಂಬಾಕೆಯನ್ನು ಮದುವೆಯಾಗಿರುವ ಸುದ್ದಿ ಇದೆ.

ಜನವರಿ ಅಥವಾ ಫೆಬ್ರುವರಿಯಲ್ಲಿ ಇವರ ಮದುವೆ ಜರುಗಿದ್ದು, ಫೆಬ್ರುವರಿಯಲ್ಲಿ ಹನಿಮೂನ್ ಮುಗಿಸಿ ಭಾರತಕ್ಕೆ ಇವರು ವಾಪಸ್ ಬಂದಿದ್ದಾರೆ ಎಂದು ಮಾಧ್ಯಮಗಳಲ್ಲಿನ ಸುದ್ದಿಗಳು ಹೇಳುತ್ತಿವೆ. ಆದರೆ, ಇಬ್ಬರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಒಮ್ಮೆಯೂ ಕೂಡ ಜೊತೆಗಿರುವ ಫೋಟೋ ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ :ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಗೆ ಕೂಡಿ ಬಂತು ಕಂಕಣ ಭಾಗ್ಯ : ಆ ವಧು ಯಾರು..?

ನವದೆಹಲಿ, ಮಾರ್ಚ್ 22: ಸಸ್ಯಾಹಾರವನ್ನು (Zomato Pure Veg Fleet) ಪ್ರತ್ಯೇಕವಾಗಿ ಸರಬರಾಜು ಮಾಡುವ ಸೌಲಭ್ಯ ಘೋಷಿಸಿ ವಿವಾದಕ್ಕೆ ಕಾರಣವಾಗಿದ್ದ ಆನ್ಲೈನ್ ಫೂಡ್ ಬುಕಿಂಗ್ ಪ್ಲಾಟ್​ಫಾರ್ಮ್ ಜೊಮಾಟೋದ ಸಿಇಒ ದೀಪಿಂದರ್ ಗೋಯಲ್  ಎರಡನೇ ಮದುವೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಗೋಯಲ್ ಅವರು ಮೆಕ್ಸಿಕೋದ ಗ್ರೇಷಿಯಾ ಮುನೋಜ್ ಎಂಬಾಕೆಯನ್ನು ವರಿಸಿದ್ದಾರೆ.

 ಒಂದು ತಿಂಗಳ ಹಿಂದೆ ಈ ವಿವಾಹ ಜರುಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಿಂದೆ ಮಾಡಲ್ ಕ್ಷೇತ್ರದಲ್ಲಿ ಇದ್ದ ಗ್ರೇಷಿಯಾ ಮುನೋಜ್ (Grecia Munoz) ಈಗ ತನ್ನದೇ ಲಕ್ಷುರಿ ಉತ್ಪನ್ನಗಳ ಸ್ಟಾರ್ಟಪ್​ವೊಂದನ್ನು ಆರಂಭಿಸುವ ಹಾದಿಯಲ್ಲಿದ್ದಾರೆ

ದೀಪಿಂದರ್ ಗೋಯಲ್ ಆಗಲೀ ಗ್ರೇಷಿಯಾ ಮುನೋಜ್ ಆಗಲೀ ವಿವಾಹದ ಸಂಗತಿಯನ್ನು ಬಹಿರಂಗಪಡಿಸಿಲ್ಲ. ಇಬ್ಬರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೂ ಒಮ್ಮೆಯೂ ಜೊತೆಗಿದ್ದ ಫೋಟೋಗಳನ್ನು ಹಂಚಿಕೊಂಡಿಲ್ಲ. ಮಾಜಿ ಮಾಡಲ್ ಆಗಿರುವ ಗ್ರೇಷಿಯಾ ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಮಾಡಲಿಂಗ್ ಫೋಟೋಶೂಟ್​ನ ಚಿತ್ರಗಳನ್ನು ಇನ್ಸ್​ಟಾಗೆ ಹಂಚಿದ್ದಾರೆಯೇ ಹೊರತು ಮದುವೆಯ ಸುಳಿವು ನೀಡುವ ಯಾವ ಫೋಟೋವೂ ಇಲ್ಲ.

ಗೋಯಲ್ ಜೊತೆಗಿನ ಒಂದೂ ಫೋಟೋ ಕೂಡ ಇಲ್ಲ. ಆದರೆ, ತಮ್ಮ ಇನ್ಸ್​ಟಾಗ್ರಾಮ್​ನ ಬಯೋದಲ್ಲಿ ಅವರು ಭಾರತದಲ್ಲಿನ ಮನೆಯಲ್ಲಿ ಇರುವುದಾಗಿ ಮಾತ್ರ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಭಟ್ರ RCB ಹಾಡಿಗೆ ಕುಣಿದ ಆಕ್ಷನ್ ಪ್ರಿನ್ಸ್ : ಸಾಂಗ್ ಕೇಳಿದ್ರೆ ನೀವೂ ಕುಣಿತೀರಾ..!

ದೀಪಿಂದರ್ ಗೋಯಲ್ ಮತ್ತು ಪಂಕಜ್ ಚಡ್ಡಾ ಸೇರಿ 2008ರಲ್ಲಿ ಸ್ಥಾಪಿಸಿದ್ದ ಜೊಮಾಟೋ ಬಹಳ ವೇಗದಲ್ಲಿ ಬೆಳೆದ ಸ್ಟಾರ್ಟಪ್ ಆಗಿದೆ. ಷೇರು ಮಾರುಕಟ್ಟೆಗೆ ಮೂರು ವರ್ಷಗಳ ಹಿಂದೆ ಲಿಸ್ಟ್ ಆಗಿದೆ. ಇದಾದ ಬಳಿಕ ದೀಪಿಂದರ್ ಗೋಯಲ್ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್​ಗಳ ಸಾಲಿಗೆ ಸೇರಿದ್ದಾರೆ.

Share this post:

Related Posts

To Subscribe to our News Letter.

Translate »