Sandalwood Leading OnlineMedia

ಡಾಲಿ ಧನಂಜಯ್  ನಟನೆಯ ‘ಜೀಬ್ರಾ’ಗೆ ಶಿವಣ್ಣ ಸಾಥ್

ಡಾಲಿ ಧನಂಜಯ್ ತಾವೊಬ್ಬ ಅದ್ಭುತ ಕಲಾವಿದ ಅನ್ನೋದನ್ನು ಪ್ರತಿ ಸಿನಿಮಾಗಳಲ್ಲಿಯೂ ಸಾಬೀತುಪಡಿಸಿಕೊಂಡು ಬಂದಿದ್ದಾರೆ. ಪ್ರತಿ ಚಿತ್ರಗಳಲ್ಲಿಯೂ ವಿಭಿನ್ನ ಪಾತ್ರದ ಮೂಲಕ‌ ರಂಜಿಸುವ ಅವರೀಗ ತೆಲುಗು ನಟ ಸತ್ಯದೇವ್ ಜೊತೆಗೂಡಿ ಜೀಬ್ರಾ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಜೀಬ್ರಾ ಸಿನಿಮಾ ರಿಲೀಸ್ ಆಗುತ್ತಿದೆ. ಮೋಷನ್ ಪೋಸ್ಟರ್ ವಿಡಿಯೋ ಮೂಲಕ ಇತ್ತೀಚೆಗಷ್ಟೇ ಬಿಡುಗಡೆ ದಿನಾಂಕ ಪ್ರಕಟಿಸಿದ್ದ ಚಿತ್ರತಂಡ ಈಗ ಟೀಸರ್ ಅನಾವರಣ ಮಾಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.


ಜೀಬ್ರಾ ಮಲ್ಟಿಸ್ಟಾರ್ಸ್ ಸಿನಿಮಾ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿರುವ ಚಿತ್ರ. ಇದು ಧನಂಜಯ್ ಅಭಿನಯದ 26ನೇ ಸಿನಿಮಾ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಜೀಬ್ರಾ ಟೀಸರ್ ಬಹಳ ಕುತೂಹಲದಿಂದ ಕೂಡಿದೆ. ಡಾಲಿ ವೈಟ್ ಹಾರ್ಸ್, ಸತ್ಯದೇವ್ ಬ್ಲಾಕ್ ಹಾರ್ಸ್ ಎಂದು ಪರಿಚಯ ಮಾಡಿಕೊಡಲಾಗಿದೆ. ವಿಭಿನ್ನವಾಗಿ ಟೀಸರ್ ಕಟ್ ಮಾಡಲಾಗಿದ್ದು, ರವಿ ಬಸ್ರೂರ್ ಸಂಗೀತ ಕಿಕ್ ಕೊಡುತ್ತಿದೆ.

Priya Bhavani Shankar

ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಈ ಸಿನಿಮಾ  ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಜೀಬ್ರಾ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

 

Jeniffer Piccinato
Jeniffer Piccinato

Share this post:

Related Posts

To Subscribe to our News Letter.

Translate »